fbpx
ಸಿನಿಮಾ

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ..

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ 

ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡ ಕಿರಿಕ್‌ ಪಾರ್ಟಿ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಚಿತ್ರದಲ್ಲಿ ಕರ್ಣ ಮತ್ತು ಸಾನ್ವಿ ಪಾತ್ರದಲ್ಲಿ ಮಿಂಚಿದ್ದ ಈ ಜೋಡಿ ಸಿನಿ ಪ್ರಿಯರ ಮನ ಗೆದಿತ್ತು.

 

ಇದೀಗ ಕನ್ನಡ ಚಿತ್ರ ರಂಗದ ಈ ತಾರಾ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಅಣಿಯಾಗುತ್ತಿದ್ದು, ಜುಲೈ 3ರಂದು ಇವರಿಬ್ಬರ ನಿಶ್ಚಿತಾರ್ಥ ಜರುಗಲಿದೆಈ ವಿಶೇಷ ಕಾರ್ಯಕ್ರಮಕ್ಕೆ ಕೇವಲ ಬಂದು-ಮಿತ್ರರು ಮತ್ತು ಕೆಲವೇ ಕೆಲವೇ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.


ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಜುಲೈ 3ರಂದು ಸಂಜೆ 6.30ಕ್ಕೆ ಅತಿಥಿಗಳಿಗಾಗಿ ಔತಣಕೂಟವನ್ನ ಏರ್ಪಡಿಲಾಗಿದೆ. ಮತ್ತು ಕೊಡಗಿನ ಶೈಲಿಯಲ್ಲಿ ನಿಶ್ಚಿತಾರ್ಥವೂ ಕೂಡ ಉಂಗುರಗಳನ್ನು ಬದಲಾಸಿಯಿಕೊಳ್ಳುದರ ಮೂಲಕ ನಡೆಯಲಿದೆ.

ಈಗ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಹೊರಬಿದ್ದಿದ್ದು ಈ ಕಾರ್ಯಕಮಕ್ಕೆ ಹೋಗುವವರು ಈ ಆಮಂತ್ರಣ ಪತ್ರಿಕೆಯನ್ನು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಲಾಗಿದೆ.

ಈ ಆಮಂತ್ರಣ ಪತ್ರಿಕೆಯನ್ನು ನೀವು ಒಮ್ಮೆ ನೋಡಿಬಿಡಿ.

ನಿಶ್ಚಿತಾರ್ಥಕ್ಕೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿದ್ದು, ಎರಡು ಕುಟುಂಬದವರಿಂದ ಸಿದ್ದತೆಗಳು ಭರದಿಂದ ಸಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top