fbpx
ಸಿನಿಮಾ

ನಟ ಯಶ್ ಗೆ ಕ್ಷಮೆಕೇಳಿದ ರಶ್ಮಿಕಾ!

ನಟ ಯಶ್ ಗೆ ಕ್ಷಮೆಕೇಳಿದ ರಶ್ಮಿಕಾ

ಯಶ್ ಅವರನ್ನು ಮಿಸ್ಟರ್ ಶೋ ಆಫ್ಎಂದು ಹೇಳಿ ವಿವಾದಕ್ಕೊಳಗಾಗಿದ್ದ  ‘ಕಿರಿಕ್ ಪಾರ್ಟಿ’ಚಿತ್ರದ  ನಟಿ ರಶ್ಮಿಕಾ ಮಂದಣ್ಣ ತಮ್ಮ  ಫೇಸ್‍ಬುಕ್‍ ಖಾತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ನಡೆದ  ರಕ್ಷಿತ್ ಮತ್ತು ರಶ್ಮಿಕಾರ ಸಂದರ್ಶನವೊಂದರಲ್ಲಿ ನಿರೂಪಕ ಕನ್ನಡದ  ‘ಶೋ ಆಫ್ ನಟ’ ಯಾರು ಎಂದು ಪ್ರಶ್ನಿಸಿದ್ದಕ್ಕೆ ರಶ್ಮಿಕಾ ‘ಯಶ್’ ಎಂದು ಉತ್ತರಿಸಿದ್ದರು.

ಇದು ಯಶ್  ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು. ಈ ಹೇಳಿಕೆಗೆ ಯಶ್ ರ ಅಭಿಮಾನಿಗಳು ರಶ್ಮಿಕಾ ರ ಮೇಲೆ ಸಾಮಾಜಿಕಜಾಲತಾಣಗಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು.

ಇದಕ್ಕೆ ಫೇಸ್ಬುಕ್ ಮೂಲಕ ಪ್ರತಿಕ್ರಿಯೆ ನೀಡಿರುವ ಯಶ್, “ನಾನು ರಶ್ಮಿಕಾರನ್ನು ಯಾವತ್ತೂ ಭೇಟಿಯಾಗಿಲ್ಲ, ಮಾತನಾಡಿಲ್ಲ ಅವರ ಅಭಿಪ್ರಾಯ ಅವ್ರದ್ದು. ಇದರಲ್ಲಿ ಚರ್ಚೆ ಮಾಡುವ ಯಾವುದೇ ವಿಷಯವಿಲ್ಲ”  ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನು ನೋಡಿ ನಟಿ ರಶ್ಮಿಕಾ ಕೂಡಾ ಫೇಸ್ಬುಕ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈಗ ಪ್ರಸಾರವಾಗುತ್ತಿರುವ  ಸಂದರ್ಶನ 7 ತಿಂಗಳು ಹಳೆಯದು. ಅಲ್ಲದೇ ಅಲ್ಲಿ ನಡೆಯುತ್ತಿದ್ದದ್ದು ರಾಪಿಡ್ ಫೈರ್ ಆಟ. ನಾನು ಯಶ್ ಬಗ್ಗೆ ಯಾವುದೇ ರೀತಿ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಚಾನೆಲ್ ನವರು ತಮಗೆ ಬೇಕಾದಂತೆ ವಿಡಿಯೋ ಎಡಿಟ್ ಮಾಡಿಕೊಂಡು ಇಷ್ಟೆಲ್ಲಾ ಅವಾಂತರ ಮಾಡಿದ್ದಾರೆ.ಎಂದು ಚಾನೆಲ್ ನವರ ಮೇಲೆ ಗೂಬೆ ಕೂರಿಸಿದರು

ಅಲ್ಲದೇ ನನಗೆ ಯಶ್ ಮೇಲೆ ತುಂಬಾ ಗೌರವವಿದೆ, ಅವರ ಜೊತೆ ಕೆಲಸ ಮಾಡುವ ಆಸೆಯನ್ನೂ ನಾನು ಅನೇಕ ಭಾರಿ ವ್ಯಕ್ತಪಡಿಸಿದ್ದೇನೆ. ನಾನು ಹೇಳಿದ್ದನ್ನು ಮತ್ತ್ಯಾರೋ ತಿರುಚಿ ನನ್ನನ್ನು ಸಮಸ್ಯೆಗೆ  ಸಿಲುಕಿಸಿದ್ದಾರೆ.ಆದರೂ ಉದ್ದೇಶಪೂರ್ವಕವಾಗಿ ಆಗದೇ ಇರೋ ಈ ಸಮಸ್ಯೆಯಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ  ಎಂದು ಅವರ ಫೇಸ್ಬುಕ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ ಬರೆದಿದ್ದಾರೆ. ಅವರ ಬಹಿರಂಗ ಕ್ಷಮೆಯಿಂದ ಈ ವಿವಾದವು  ಇಲ್ಲಿಗೆ ಮುಗಿದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top