ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು ಸಿಹಿ ಗೆಣಸು. ಸಿಹಿ ಗೆಣಸು ಪುಷ್ಟಿದಾಯಕ ಆಹಾರಗಳಲ್ಲೊಂದು. ಗೆಣಸು ಕಾರ‍್ಬೋಹೈಡ್ರೇಟಿನ ಅತ್ಯುತ್ತಮ ಮೂಲ. ಇದರಲ್ಲಿರುವ ಅದಿಕ ಗಂಜಿಯ ಅಂಶಗಳಿಂದಾಗಿ ಇದನ್ನು ಮುಕ್ಯ ಆಹಾರವಾಗಿಯೇ ಬಡಿಸಲಾಗುತ್ತದೆ.
ಎಲ್ಲ ತರಕಾರಿ ಮತ್ತು ಹಣ್ಣುಗಳಿಗಿಂತ ಬಿ6 ವಿಟಮಿನ್ ಅಂಶ ಸಿಹಿ ಗೆಣಸಿನಲ್ಲಿ ಹೆಚ್ಚು ಇದೆ ಎಂದು ಅಮೆರಿಕದ ಲೂಸಿಯಾನ ವಿಶ್ವವಿದ್ಯಾನಿಲಯದ ವಿಲ್ಮರ್ ಬರೇರಾ ಮತ್ತು ಡೇವಿಡ್ ಪೀಚ್ ರವರ ನೂತನ ಅಧ್ಯಯನವೊಂದು ತಿಳಿಸಿದೆ. ಇನ್ನೂ ಅನೇಕ ಇತರ ಆರೋಗ್ಯಕಾರಿ ಪ್ರಯೋಜನಗಳನ್ನು ಹೊ೦ದಿರು ಸಿಹಿ ಗೆಣಸು ಶರೀರದ ಆರೋಗ್ಯಕ್ಕೆ ತುಂಬಾ ಸೊಗಸು.
ನೆಲದೊಳಗೆ ಬೆಳೆಯುವ ತರಕಾರಿ, ಸಿಹಿ ಗೆಣಸು ಶರೀರದಲ್ಲಿನ ಹೆಚ್ಚುವರಿ ಈಸ್ಟ್ರೊಜೆನ್ ಅನ್ನು ಹೊರಹಾಕಬಲ್ಲವು. ಆದ್ದರಿಂದ ಮಹಿಳೆಯರು ಇವನ್ನು ಬಳಸಿದರೆ ಒಳ್ಳೆಯದು.
ಗೆಣಸುಗಳಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ, ಮ್ಯಾಂಗನೀಸ್, ಪೊಟಾಶಿಯಂ, ಜಿಂಕ್ ಮೊದಲಾದ ಕನಿಜಾಂಶಗಳು ಸಾಕಶ್ಟು ಒಳ್ಳೆಯ ಪ್ರಮಾಣದಲ್ಲಿವೆ, ಇದರಿಂದ ಮೈ ಹಾಗು ಮಾನಸಿಕ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಿವೆ.
ಸಿಹಿ ಗೆಣಸು ಆಹಾರದಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ. ವ್ಯಾಯಾಮದ ನಂತರ, ದೇಹದ ಗ್ಲೈಕೋಜೆನ್ (glycogen) ಮಟ್ಟ ಕಡಿಮೆಯಾಗಲ್ಪಡುತ್ತದೆ, ಮತ್ತು ಸಿಹಿ ಗೆಣಸು, ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ.
ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.
ಸಿಹಿ ಗೆಣಸಿನಲ್ಲಿ ಡಯಟೆರಿ ಫೈಬರ್‌ಗಳು ಅಧಿಕವಾಗಿರುತ್ತವೆ. ಇವು ಕೋಲನ್ ಕ್ಯಾನ್ಸರ್ ಬರದಂತೆ ತಡೆಯುತ್ತವೆ ಮತ್ತು ಮಲಬದ್ಧತೆಯಿಂದ ಮುಕ್ತಿ ನೀಡುತ್ತವೆ.
ಸಿಹಿ ಗೆಣಸುಗಳಲ್ಲಿ ಕೆರೊಟಿನಾಯ್ಡ್‌ಗಳು ಹೆಚ್ಚಾಗಿ ಇರುತ್ತವೆ. ಇವು ವಿಟಮಿನ್ ‘ಎ’ಯನ್ನು ಅಧಿಕ ಪ್ರಮಾಣದಲ್ಲಿ ದೇಹಕ್ಕೆ ಒದಗಿಸುತ್ತವೆ ಮತ್ತು ಅವು ಶ್ವಾಸಕೋಶದ ವ್ಯವಸ್ಥೆಯನ್ನು ಮರು ನವೀಕರಿಸುವಲ್ಲಿ ಸಹಾಯ ಮಾಡುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಸಿಹಿ ಗೆಣಸಿನಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಥೈರಾಯ್ಡ್ ಗ್ರಂಥಿಗಳ ಕಾರ್ಯ ಮಾಡಲು ಅತ್ಯಾವಶ್ಯಕ. ಜೊತೆಗೆ ಇದು ಹಲ್ಲು, ಮೂಳೆ, ಹೃದಯ, ತ್ವಚೆ ಮತ್ತು ನಮ್ಮ ಶಕ್ತಿಯ ಮಟ್ಟದ ಕಾರ್ಯ ನಿರ್ವಹಿಸುವಿಕೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ.
ಸಿಹಿ ಗೆಣಸುಗಳಲ್ಲಿ ಪೊಟಾಶಿಯಂ ಇರುವುದರಿಂದ ಇವು ಸ್ನಾಯು ಸೆಳೆತದ ಮೇಲೆ ಹೋರಾಡುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಸ್ನಾಯುಗಳು ವಿಶ್ರಾಂತಿಯನ್ನು ಪಡೆಯಲು ಸಹಾಯ ಮಾಡುತ್ತದೆ.
ಸಿಹಿಗೆಣಸುಗಳಲ್ಲಿ ಫೊಲಿಕ್ ಆಮ್ಲವು ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.
ಸಿಹಿಗೆಣಸುಗಳನ್ನು ಬೇಯಿಸಿರುವ ನೀರನ್ನು ನಿಮ್ಮ ಮುಖವನ್ನು ತೊಳೆಯಲು ಬಳಸಿ. ಇದರಿಂದ ನಿಮ್ಮ ಮುಖದಲ್ಲಿರುವ ಕಲೆಗಳು, ರಂಧ್ರಗಳು ಮತ್ತು ಧೂಳು ಎಲ್ಲವೂ ನಿವಾರಣೆಯಾಗುತ್ತದೆ.
ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
