ಅವಳು ನಿಮ್ಮನ್ನ ಇಷ್ಟ ಪಡ್ತಿದ್ದಾಳೆ ಅಂತ ಗೊತ್ತಾಗ್ಬೇಕಾದ್ರೆ ಈ ವಿಷಯಗಳು ನಿಮಗೆ ಗೊತ್ತಿರ್ಬೇಕು..
ನೀವು ಪ್ರೀತಿಸೋ ಹುಡುಗಿ ನಿಮ್ಮನ್ನು ಇಷ್ಟ ಪಡ್ತಾ ಇದಾಳೆ ಅಂತ ಹೇಗೆ ತಿಳಿದುಕೊಳ್ಳಬೇಕು? ಮತ್ತೊಂದು ವಿಷ್ಯ ಅಂದ್ರೆ ಈ ಪ್ರೀತಿ ಅನ್ನೋ ವಿಷ್ಯಕ್ಕೆ ಬಂದಾಗ ಹುಡುಗ್ರೇ ಮುಂದೆ ಇರ್ತಾರೆ. ಹುಡುಗ್ರು ತಾವು ಪ್ರೀತಿಸೋ ಹುಡುಗಿ ತಮ್ಮನ್ನು ಪ್ರೀತಿಸ್ತಾ ಇದಾಳಾ ಅಂತ ತಿಳ್ಕೋಬೇಕಾದ್ರೆ ಈ ಕೆಳಗಿನ ಅಂಶಗಳನ್ನು ನಿಮ್ಮ ಹುಡುಗಿಯಲ್ಲಿ ಸೂಕ್ಷ್ಮವಾಗಿ ಗಮನಿಸಿ ಆಗ ಗೊತ್ತಾಗುತ್ತೆ ನಿಮ್ಮ ಹುಡುಗಿಯೂ ನಿಮ್ಮನ್ನ ಇಷ್ಟ ಪಡ್ತಾಳ ಇಲ್ವಾ ಅಂತ.
*ಕೆಲವು ಹುಡುಗೀರು ಅವ್ರು ಇಷ್ಟ ಪಡುವವರನ್ನು ಕಂಡರೆ ಅವರನ್ನುನೋಡಲು ಹೆದರುತ್ತಾರೆ.
*ಆಕೆ ನಿಮ್ಮ ಜೊತೆ ಹಾಗೂ ಇತರರ ಜತೆ ವರ್ತಿಸುವ ರೀತಿಯಲ್ಲಿ ತುಂಬಾ ವ್ಯತ್ಯಾಸವಿದ್ರೆ ಪಕ್ಕಾ ಅವ್ಳು ನಿಮ್ಮನ್ನ ಇಷ್ಟ ಪಡುತ್ತಾಳೆ. ಅಲ್ಲದೇ ಅವಳು ಪದೇ ಪದೇ ನಿಮ್ಮತ್ತ ನೋಡುತ್ತಿದ್ರೆ, ನಿಮ್ಮ ಬಳಿ ಆಗಾಗ ಸ್ಮೈಲ್ ಮಾಡ್ತಿದ್ರೆ ಆಕೆಗೂ ನೀವಂದ್ರೆ ಇಷ್ಟ ಎಂದರ್ಥ
*ಎಷ್ಟೇ ಮಂದಿ ಸ್ನೇಹಿತರಿದ್ದರೂ ಆಕೆ ಪ್ರತಿಬಾರಿಯೂ ನಿಮ್ಮ ಪಕ್ಕನೇ ಬಂದು ಕುಳಿತುಕೊಂಡ್ರೆ ಆಕೆಗೆ ನಿಮ್ಮನ್ನು ಕಂಡರೆ ಇಷ್ಟವೆಂದರ್ಥ.
*ನಿಮ್ಮ ಪ್ರತಿಯೊಂದು ಮಾತನ್ನು ಗಮನದಿಂದ ಕೇಳುತ್ತಿದ್ರೆ , ಇಲ್ಲವೇ ಸದಾ ನಿಮ್ಮನ್ನ ಮೆಚ್ಚಿಸೋ ಕೆಲಸ ಮಾಡ್ತಿದ್ರೆ ಅನುಮಾನವೇ ಬೇಡ ಆಕೆಗೆ ನೀವು
ಇಷ್ಟವಾಗಿದ್ದೀರಿ ಎಂದರ್ಥ.
*ನಿಮ್ಮನ್ನ ಪದೇ ಪದೇ ಬೇರೆ ಹುಡುಗಿ ಜತೆ ಜೋಡಿ ಮಾಡಿ ಆಕೆ ತಮಾಷೆ ಮಾಡ್ತಿದ್ರೆ ಅದರ ಒಳರ್ಥ ಆಕೆಗೆ ನಿಮ್ಮ ಮೇಲೆ ಇಂಟ್ರಸ್ಟ್ ಇದೆ ಎಂದರ್ಥ. ಆಕೆ ಯಾಕೆ ತಮಾಷೆ ಮಾಡ್ತಾಳಂದ್ರೆ ನಿಮ್ಮ ಉತ್ತರ ಹೇಗಿರುತ್ತೆ ಎಂದು ತಿಳಿದುಕೊಳ್ಳುವ ಸಲುವಾಗಿ.
*ನೀವು ಈಗಾಗಲೇ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಆಕೆ ಸಾಮಾನ್ಯವಾಗಿ ನಿಮ್ಮ ಕೈ, ಭುಜ ಅಥವಾ ಎದೆಯನ್ನು ಸ್ಪರ್ಶಿಸುತ್ತಿರುತ್ತಾಳೆ..ನೀವು ಕೇವಲ ಜೋಕ್ ಮಾಡಿದ್ರೆ, ಆಕೆ ತಮಾಷೆಯಾಗಿ (ಮತ್ತು ಲಘುವಾಗಿ) ನಿಮ್ಮನ್ನು ಹೊಡೆಯಬಹುದು.
*ನೀವು ಆಕೆಯ ಲವ್, ಬಗ್ಗೆ ಕೇಳಿದ್ರೆ ಆಕೆ ನನಗೆ ಲವ್ ಇಲ್ಲ / ಇದೆ ಎಂದೂ ಎರಡೂ ಹೇಳದೇ ಸುಮ್ಮನೇ ನಕ್ಕು ಜಾರಿಕೊಂಡರೆ ಅವರಿಗೆ ನಿಮ್ಮ ಮೇಲೆ ಪ್ರೀತಿ
ಇದೆ ಎಂದರ್ಥ.
*ಇನ್ನು ಆಕೆ ಯಾರಾದ್ರೂ ಹುಡುಗನ ಜತೆ ಮಾತನಾಡುತ್ತಿದ್ದಾಗ ನೀವು ಅಲ್ಲಿಗೆ ಹೋದಾಗ. ಒಂದು ವೇಳೆ ಆಕೆ ನಿಮ್ಮ ಪ್ರೀತಿಸುತ್ತಿದ್ರೆ ತಕ್ಷಣ ಆಕೆಯ ನಡವಳಿಕೆ ಚೇಂಜ್ ಆಗುತ್ತೆ ಮಾತ್ರವಲ್ಲ ನೀವು ಏನು ಕೇಳದಿದ್ದರೂ ಆಕೆ ಆತನ ಬಗ್ಗೆ ಪೂರಾ ವಿವರಣೆ ಹೇಳಿಬಿಡುತ್ತಾಳೆ.
*ಇನ್ನು ನಿಮ್ಮನ್ನ ಪ್ರೀತಿಸೋ ವಿಚಾರ ಆಕೆ ತನ್ನ ಸ್ನೇಹಿತರಿಗಂತೂ ಹೇಳಿಯೇ ಇರ್ತಾಳೆ. ಹಾಗಾಗಿ ಆಕೆಯ ಸ್ನೇಹಿತರು ನಿಮ್ಮನ್ನ ಕಂಡೋಡನೆ ಆಕೆಗೆ ಕಣ್ಣಲ್ಲೇ ಕಾಲೆಳೆಯಲು ಟ್ರೈ ಮಾಡಿದ್ರೆ ಆಕೆಯೂ ನಿಮ್ಮ ಪ್ರೀತಿಗಾಗಿ ಕಾಯುತ್ತಿದ್ದಾಳೆ ಎಂದರ್ಥ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
