ಹೆಚ್ಚಾಗಿ ಪ್ರಾಯಸ್ಥರು ರಾತ್ರಿಯ ವೇಳೆ ಮೂತ್ರ ವಿಸರ್ಜನೆಗಾಗಿ ಆಗಾಗ ಏಳುತ್ತಿರು ತ್ತಾರೆ. ರಕ್ತನಾಳಗಳಲ್ಲಿ ಸಾಕಷ್ಟು ರಕ್ತ ಪ್ರವಾಹ ಇಲ್ಲದವರು, ಮೂತ್ರಪಿಂಡದ ತೊಂದರೆಗಳಿಲ್ಲ ದವರು ಮತ್ತು ಹೃದಯ ವೈಫಲ್ಯಕ್ಕೊಳಗಾಗಿರು ವವರಲ್ಲಿ ಈ ರೀತಿ ರಾತ್ರಿ ಪದೇ -ಪದೇ ಮೂತ್ರ ವಿಸರ್ಜನೆಗಾಗಿ ಏಳುವ ಪರಿಪಾಠ ಹೆಚ್ಚಿರುತ್ತದೆ. ರಾತ್ರಿ ನಿದ್ದೆ ಬಾರದ ತೊಂದರೆಗಳಿರುವವರೂ ಕೂಡ ಒಂದೆರಡು ಬಾರಿ ಮೂತ್ರ ವಿಸರ್ಜನೆಗೆ ಏಳಬೇಕಾಗುತ್ತದೆ. ಈ ರೀತಿ ಪದೇ ಪದೇ ಮೂತ್ರ ವಿಸರ್ಜನೆಗೆ ಏಳುವುದರಿಂದ, ಪ್ರಾಯ ಸ್ಥರ ನಿದ್ದೆಯ ವಿನ್ಯಾಸ ಅಸ್ತವಸ್ತಗೊಂಡಿರುತ್ತದೆ. ಇದು ಇನ್ನಷ್ಟು ತೊಂದರೆಗಳಿಗೆ ಕಾರಣವಾಗಬಹುದು.
ಮೂತ್ರಕೋಶದಲ್ಲಿ ತುಂಬ ಮೂತ್ರ ತುಂಬಿಲ್ಲದಿದ್ದರೂ, ಈ ಮೂತ್ರ ವಿಸರ್ಜನೆಯ ಬಯಕೆ ಉಂಟಾಗಿರುವುದ ರಿಂದ, ವಿಸರ್ಜನೆಯ ವೇಳೆ ಅಲ್ಪ ಪ್ರಮಾಣದ ಮೂತ್ರ ಮಾತ್ರ ಹೊರಚೆಲ್ಲುತ್ತದೆ. ಈ ರೀತಿ ಮೂತ್ರ ವಿಸರ್ಜನೆ ತುರ್ತಾಗಿ ಆಗಬೇಕೆಂಬ ಒತ್ತಡದ ಸಂಜ್ಞೆಗಳೂ ದೇಹದಲ್ಲಿ ಉದ್ಭವವಾಗಿ ರುವುದರಿಂದ, ಅವರಿಗೆ ಮೂತ್ರವನ್ನು ತಡೆಹಿಡಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. ರಾತ್ರಿ ಮಲಗಿದ ಬಳಿಕ ಈ ತೊಂದರೆ ಬಹಳ ಕಿರಿಕಿರಿಗೆ ಕಾರಣವಾಗುವುದಿದೆ.
ಪ್ರಾಯಸ್ಥರು ಸಹಜವಾಗಿ ಹಲವಾರು ದೈಹಿಕ ತೊಂದರೆಗಳಿಗೆ ಔಷಧಿ ಸೇವಿಸುತ್ತಿರುತ್ತಾರೆ. ಅಂತಹ ಕೆಲವು ಔಷಧಿಗಳು ಕೆಲವೊಮ್ಮೆ ಈಗಾಗಲೇ ಇರುವ ಅನಿಯಂತ್ರಿತ ಮೂತ್ರ ವಿಸರ್ಜನೆಯ ತೊಂದರೆಯನ್ನು ತೀವ್ರಗೊಳಿಸಬಹುದು ಅಥವಾ ಹೊಸದಾಗಿ ಹುಟ್ಟುಹಾಕಬಹುದು. ಅಂತಹ ಕೆಲವು ಔಷಧಿಗಳು ಯಾವುದೆಂದರೆ-
1) ಉದ್ವಿಗ್ನತೆ ಮತ್ತು ನಿದ್ದೆಯ ಸಮಸ್ಯೆಗಳಿ ರುವವರಿಗೆ ಕೊಡುವ ನಿದ್ದೆ ಮಾತ್ರೆಗಳು.
2) ಅಲರ್ಜಿಗಳು, ಶೀತ ಅಥವಾ ನಿದ್ದೆ ಇಲ್ಲದಿರುವವರಿಗೆ ಕೊಡಲಾಗುವ ಸ್ನಾಯು ವಿಕಾಸದ ಮತ್ತು ನಿದ್ರಾಕಾರಕ ಔಷಧಿಗಳು.
3) ಸ್ವತಂತ್ರ ಪ್ರಜ್ಞಾವಾಹಕ ನರಗಳಿಗೆ ಅಡ್ಡಿ ಮಾಡುವ ಆಂಟಿ ಕಾಲಿನರ್ಜಿಕ್ ಏಜೆಂಟ್‌ಗಳು ಮೂತ್ರಕೋಶದಲ್ಲಿ ಸಂಕುಚನದ ಪ್ರಮಾಣ ವನ್ನು ಕಡಿಮೆ ಮಾಡುವುದರಿಂದ, ಮೂತ್ರ ವಿಸರ್ಜನೆಯ ಬಳಿಕವೂ ಮೂತ್ರಕೋಶದಲ್ಲಿ ಮೂತ್ರದ ಅಂಶ ಉಳಿದಿರುತ್ತದೆ. ಕಣ್ಣಿನ ತೊಂದರೆಗಳಲ್ಲಿ ಈ ಔಷಧಿ ಬಳಕೆಯಾಗುತ್ತದೆ.
4) ಮೂಗಿನ ಪದರಗಳ ಊತವನ್ನು ತಗ್ಗಿಸುವ ಔಷಧಿಗಳು ಮತ್ತು ಮೂಗಿನ ಔಷಧಿ ಹನಿಗಳು.
5) ರಕ್ತದೊತ್ತಡ ನಿವಾರಕ ಔಷಧಿಗಳು ಒತ್ತಡದಿಂದಾಗಿ ಅನಿಯಂತ್ರಿತ ಮೂತ್ರವಿಸರ್ಜನೆಗೆ ಕಾರಣವಾಗಬಹುದು.
6) ರಕ್ತದೊತ್ತಡ ನಿವಾರಣೆಯಲ್ಲಿ ಬಳಸುವ ಕ್ಯಾಲ್ಸಿಯಂ ಚಾನೆಲ್ ಬ್ಲಾಕರ್ ಔಷಧಿ ಸೇವಿಸುವವರಲ್ಲಿ ಮೂತ್ರಕೋಶ ತುಂಬಿ ಹರಿಯುವ ಅನಿಯಂತ್ರಿತ ವಿಸರ್ಜನಾ ಪ್ರಕ್ರಿಯೆ ಕಂಡುಬರಬಹುದು.
ಮೂತ್ರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುವವರಲ್ಲೂ ಕೂಡ, ಮೂತ್ರ ವಿಸರ್ಜನೆಯ ಮೇಲೆ ಹತೆೋಟಿ ಕಡಿಮೆಯಾಗುವ ಸಾಧ್ಯತೆ ಗಳಿರುತ್ತವೆ. ಅಂತಹ ಕೆಲವು ಸ್ಥಿತಿಗಳೆಂದರೆ.
1) ಅಧಿಕ ಪ್ರಮಾಣದಲ್ಲಿ ದ್ರವಾಹಾರ ಸೇವನೆ.
2) ಲಾಸಿಕ್ಸ್‌ನಂತಹ ಮೂತ್ರೋತ್ಪಾದನೆ ಪ್ರಚೋದಕ ಔಷಧಿಗಳ ಸೇವನೆ.
3) ದೇಹ ವ್ಯಾಪಾರ ಸಂಬಂಧಿ ಕಾರಣಗಳು – ಉದಾ: ಡಯಾಬೆಟೆಸ್.
4) ದ್ರವಾಂಶದ ಅಧಿಕ ಸಂಗ್ರಹ ಧಿಉದಾ. ಒತ್ತಡದಿಂದಾಗಿ ಹೃದಯವೈಫಲ್ಯ.
5) ಔಷಧಿಗಳಿಂದಾಗಿ ದೇಹದಲ್ಲಿದ್ದ ದ್ರವಾಂಶ ಹೆಚ್ಚಳ . ಉದಾ: ಸ್ಟೀರಾಯಿಡ್‌ಗಳಲ್ಲದ ಉರಿಯೂತ ನಿವಾರಕ ಔಷಧಿಗಳು.
ನಿಯಮಿತ ಚಲನೆ
ವಯಸ್ಕರಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ತೊಂದರೆ. ಅವರು ನಿಧಾನವಾಗಿ ಚಲಿಸುವುದರಿಂದ, ಮೂತ್ರವಿಸರ್ಜನೆಗಾಗಿ ಸಕಾಲದಲ್ಲಿ ಶೌಚಗೃಹ ತಲುಪಲು ಸಾಧ್ಯವಾ ಗದೇ ಹೋಗಬಹುದು. ಸಂಧಿವಾತ ಪೀಡಿ ತರು, ರಕ್ತದ ಒತ್ತಡ ಕಡಿಮೆ ಇರುವವರಲ್ಲಿ ಕುಳಿತಲ್ಲಿಂದ ಅಥವಾ ಮಲಗಿದಲ್ಲಿಂದ ಏಳುವಾಗ ಕಾಣಿಸಿಕೊಳ್ಳುವ ತಲೆಸುತ್ತುವಿಕೆಯ ತೊಂದರೆ ಇರುವವರು, ದೃಷ್ಟಿ ಚೆನ್ನಾಗಿಲ್ಲದಿ ರುವವರು, ಲಕ್ವಾ ಮತ್ತು ಔಷಧಿಗಳ ಸೇವನೆ ಯಿಂದ ತಾತ್ಕಾಲಿಕವಾಗಿ ಮಾನಸಿಕ ಗೊಂದಲ ಅನುಭವಿಸುತ್ತಿರುವವರಲ್ಲಿ ಈ ತೊಂದರೆ ತೀರಾ ಸಾಮಾನ್ಯ.
ರಾತ್ರಿಯಲ್ಲಿ ಮೂತ್ರ ವಿಸಜ೯ನೆಗೆಂದು ಏಳುವುವರು ಹಾಸಿಗೆಯಿಂದ ತಕ್ಷಣ ಒಮ್ಮೆಗೆ ಎದ್ದು ಹೋಗಬಾರದು , ಏಳಲು 3×30 ನಿಮಿಷ ವೇಳೆ ತಡೆದು ಎದ್ದೇಳಬೇಕು. ಏಕೆಂದರೆ 3X30 ನಿಮಿಷ ತಡೆದು ಏಳುವುದರಿಂದ ಮರಣವನ್ನು ತಡೆಯಬಹುದು. ನೀವು ಕೇಳಿರಬಹುದು ಆರೋಗ್ಯವಂತ ವ್ಯಕ್ತಿ ಮಲಗಿ ಬೆಳಿಗ್ಗೆ ಮೂತ್ರ ವಿಸಜ೯ನೆಗೆಂದು ಎದ್ದಾಗ ಒಮ್ಮೆಲೆ ಬಿದ್ದು ಬಿಟ್ಟು ಕ್ಷಣದಲ್ಲೇ ಮೃತಪಟ್ಟ ಉದಾಹರಣೆಗಳನ್ನು, ಏಕೆ ಹೀಗಾಗುತ್ತೆ ಎಂದು ನೋಡಿದಾಗ ವ್ಯಕ್ತಿ ನಿದ್ದೆಯಲ್ಲಿ ಮಲಗಿದ ಭಂಗಿಯಿಂದ ತಕ್ಷಣ ಎದ್ದಾಗ ಮೆದುಳಿಗೆ ರಕ್ತ ಸಂಚಾರದಲ್ಲಿ ಏರುಪೇರಾಗಿ ಮೆದುಳಿಗೆ ರಕ್ತ ಸಂಚಾರ ನಿಂತು ಬಿಡುತ್ತದೆ ಹೀಗಾಗುವುದರಿಂದ ತಕ್ಷಣ ಹೃದಯ ಸ್ತಂಭನವಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಆದ್ದರಿಂದ ಹಾಸಿಗೆಯಿಂದ ಏಳುವಾಗ 3X30 ನಿಮಿಷ ಕಾಲಾವಕಾಶ ತಡೆದು ಅಂದರೆ –
1)ಎಚ್ಚರಗೊಂಡಾಗ ತಕ್ಷಣ ಎದ್ದೇಳದೇ 30 ಸೆಕೆಂಡ ಹಾಸಿಗೆಯಲ್ಲಿ ಕಣ್ಣು ತೆರೆದು ಮಲಗಿಕೊಂಡಿರಿ.
2) ಮುಂದೆ 30 ಸೆಕೆಂಡ ಹಾಸಿಗೆಯಲ್ಲೆ ಎದ್ದು ಕುಳಿತುಕೊಳ್ಳಿ.
3) ನಂತರದ 30 ಸೆಕೆಂಡ ಹಾಸಿಗೆಯಲ್ಲೇ ಆಸರ ಹಿಡಿದು ಎದ್ದು ನಿಂತುಕೊಂಡು ನಂತರ ಮುಂದೆ ಸಾಗಿ, ಹೀಗೆ 3 X 30 ಸೆಕೆಂಡಗಳ ನಂತರ ಎದ್ದು ನಡೆದು ಹೋಗುವುದರಿಂದ ರಾತ್ರಿ ಸಮಯ ಮೂತ್ರ ವಿಸಜ೯ನೆಗೆ೦ದು ಎದ್ದಾಗ ಉಂಟಾಗುವ ಮೆದುಳಿಗೆ ರಕ್ತ ಸಂಚಾರ ನಿಂತು, ಹೃದಯ ಸ್ತಂಭನದಿಂದ ಉಂಟಾಗುವ ಸಾವನ್ನು ತಡೆಯಬಹುದು. ದಯಮಾಡಿ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಆತ್ಮಿ eಯ ಬಂಧು-ಮಿತ್ರರೊಡನೆ ಹಂಚಿಕೊಳ್ಳಿ.
4)ದೈಹಿಕ ತೊಂದರೆಗಳಿಲ್ಲವೆಂದು ಖಾತ್ರಿಯಾದಮೇಲೆ ಮನೆಯಲ್ಲಿಯೇ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು.
5) ರಾತ್ರಿ ಮಲಗುವುದಕ್ಕೆ ಎರಡು ಗಂಟೆಗೆ ಮೊದಲು ಮಾತ್ರ ನೀರು ಕುಡಿಯಲು ಹೇಳಬೇಕು.
6) ಮಲಗುವಾಗ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ಮಾಡಿಸಬೇಕು.
7) ರಾತ್ರಿ ಒಮ್ಮೆ ಮಗುವನ್ನು ಎಬ್ಬಿಸಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸಮಾಡಿಸಬಹುದು.
8) ಈ ಸರಳ ನಿಯಮಗಳು ಪ್ರಯೋಜನಕ್ಕೆ ಬರದಿದ್ದರೆ ತಜ್ಞರಿಂದ ಆಪ್ತಸಲಹೆ ಬೇಕಾಗುತ್ತದೆ. ಹಾಗೆ ಆಪ್ತಸಲಹೆಗೆ ಬರುವ ಮುನ್ನ ಪೋಷಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
