fbpx
ಆರೋಗ್ಯ

ಅರಳಿ ಮರವನ್ನು ಬ್ರಾಹ್ಮಿ ಮುಹೂರ್ತದಲ್ಲಿ ಮಾತ್ರ ಪ್ರದಕ್ಷಿಣೆ ಹಾಕಬೇಕು ಎಂದು ಏಕೆ ಹೇಳುತ್ತಾರೆ ? ವೈಜ್ಞಾನಿಕ ಕಾರಣಗಳು..

ಅರಳಿ ಮರದ ಕೆಳಗೆ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೋಗಬೇಡಿ,ಅಪ್ಪಿ ತಪ್ಪಿ ನೀವೇನಾದರೂ ಹೋದರೆ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುತ್ತದೆ.

ಅರಳಿ ಮರಕ್ಕೆ ಇನ್ನೊಂದು ಹೆಸರೇ ‘ ಅಶ್ವಥ ವೃಕ್ಷ’.

ಬ್ರಹ್ಮ ಪುರಾಣದಲ್ಲಿ ಹೇಳಿರುವ  ಪ್ರಕಾರ  ರಾಕ್ಷಸರು ಎಲ್ಲಾ ದೇವರನ್ನು ಸೋಲಿಸಿದಾಗ  ಭಗವಂತನಾದ ಶ್ರೀ ಹರಿ, ವಿಷ್ಣುವು  ಗುಪ್ತವಾಗಿ ಅರಳಿ  ಮರದೊಳಗೆ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.ಶ್ರೀ ವಿಷ್ಣುವಿನ ಪತ್ನಿಯಾದ ಲಕ್ಷ್ಮೀ  ದೇವಿಯೂ ಸಹ  ಈ ಮರದ ಕೆಳಗೆ ಕುಳಿತುರುತ್ತಾಳೆ. ಇದೇ ಕಾರಣದಿಂದಾಗಿ ಅರಳಿ ಮರದ ಪೂಜಾ ಪ್ರಾಮುಖ್ಯತೆಯು ಸಹ ಹೆಚ್ಚಿದೆ ಎಂದು ಬ್ರಹ್ಮ ಪುರಾಣದಲ್ಲಿ ಹೇಳಿದ್ದಾರೆ.

ಆದರೂ ಸಹ ಒಂದು ದಿನದಲ್ಲಿ ನಿಗದಿತ ಸಮಯವಿದೆ,ಆ ನಿಗದಿತ ಸಮಯದಲ್ಲಿ ಮಾತ್ರ  ಅರಳಿ ಮರದ ಬಳಿ ಹೋಗುವುದನ್ನು ಶಾಸ್ತ್ರಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

 ಹಾಗಾದರೇ  ಅರಳಿ ಮರದ ಬಳಿ ಹೋಗಲು ಸರಿಯಾದ ಸಮಯ ಯಾವುದು?

1.ಪದ್ಮ ಪುರಾಣದ ಪ್ರಕಾರ:- ಅರಳಿ ಮರದ ಕೆಳಗೆ ಯಾವುದೇ ಕಾರಣಕ್ಕೂ ಸೂರ್ಯ ಉದಯಿಸುವ ಮುನ್ನ ಹೋಗಬೇಡಿ.ಪೂಜೆ ಮಾಡುವುದಕ್ಕಾಗಲಿ ಅಥವಾ ಅದರ ಬುಡಕ್ಕೆ ನೀರು ಹಾಕುವುದಕ್ಕಾಗಲಿ ಹೋಗಬಾರದು.ಯಾಕೆಂದರೆ ಹಾಗೆ ಮಾಡುವುದರಿಂದ ನಿಮ್ಮ ಮನೆಗೆ   ದಾರಿದ್ರ್ಯ  ಮತ್ತು ಬಡತನ ಬಂದು ಆವರಿಸುತ್ತದೆ.

ನೀವು ಅರಳಿ ಮರದ ಬಳಿ ಹೋಗಲು ಅತೀ ಪ್ರಶಸ್ತ  ಹಾಗೂ ಮಂಗಳಕರ ಸಮಯ ಎಂದರೆ  ಸೂರ್ಯೋದಯದ  ನಂತರ ,ಯಾಕೆಂದರೆ ಶ್ರೀ ಲಕ್ಷ್ಮೀ ದೇವಿಯು ಅಲ್ಲಿ ಬಂದು ನೆಲೆಸುತ್ತಾಳೆ(ಅರಳಿ ಮರದ ಕೆಳಗೆ) ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ.

 

2.ಸ್ಕಂದ ಪುರಾಣದ ಪ್ರಕಾರ:- ಯಾವ ವ್ಯಕ್ತಿಯು ತನ್ನ ಜೀವನದಲ್ಲಿ ಶನಿ ಮತ್ತು ಸಾಡೇಸಾತಿಯ ಶನಿ ಕಾಟದಿಂದ  ಅನೇಕ ಕಷ್ಟ,ದುಃಖ,ನೋವುಗಳನ್ನು ಅನುಭವಿಸುತ್ತಿರುತ್ತಾರೋ  ,ಅಂತವರು ಪ್ರತಿ ನಿತ್ಯ   ಅರಳಿ ಮರದ ಪ್ರದಕ್ಷಿಣೆಯನ್ನು   ಹಾಕಿ  ಪೂಜೆ ಮಾಡಬೇಕು.ಪೂಜೆಯನ್ನು ಶನಿವಾರದ ದಿನವೇ ಮಾಡಬೇಕು.ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ  ಶನಿಯ ಕಾಟದಿಂದ  ಎದುರಿಸುತ್ತಿರುವ  ಅನೇಕ ತೊಂದರೆಗಳಿಂದ ಮುಕ್ತಿ ಹೊಂದುತ್ತೀರಾ .

 

3.ಭಗವತ್ಗೀತೆಯಲ್ಲಿ  ಶ್ರೀ  ಕ್ರಷ್ಣ  ಪರಮಾತ್ಮನು ಈ ರೀತಿ ಹೇಳಿದ್ದಾನೆ:-  , ಈ ಭೂಮಿಯ ಮೇಲೆ ಇರುವಂತಹ ಎಲ್ಲಾ ಮರಗಳಿಗಿಂತಲೂ  ಅರಳಿ ಮರವೇ ಅತ್ಯಂತ  ಶ್ರೇಷ್ಠವಾದುದು,ಋಷಿ ಮುನಿಗಳಲ್ಲಿ ನಾರದ ಮುನಿಗಳು ಹೇಗೆ ಶ್ರೇಷ್ಠರೋ ಹಾಗೆ,ಅರಳಿ ಮರಕ್ಕೆ ಪೂಜೆ ಮತ್ತು ಪ್ರಾರ್ಥನೆ ಮಾಡುವುದು ದೇವರನ್ನು ಪೂಜಿಸುವುದಕ್ಕೆ ಸಮಾನವಾಗಿದೆ.

4.ಅದು ಅವರ ನಂಬಿಕೆಗೆ ಬಿಟ್ಟ ವಿಚಾರ,ಅರಳಿ ಮರವನ್ನು ಪೂಜಿಸುವುದು ಅದೆಷ್ಟು ಆರೋಗ್ಯಕರವೋ,ಅದೇ ರೀತಿಯಲ್ಲಿ ಬೇರೆ ತರದ ಲಾಭಗಳು ಇದರಲ್ಲಿ ಅಡಗಿವೆ.

ಪ್ರಾಯೋಗಿಕ ಮಹತ್ವ.

ಈ ಮರದ ಎಲ್ಲಾ ಬಾಗಗಳು:- ಎಲೆ,ಕಾಂಡ ಮತ್ತು ಬೇರು ಇವೆಲ್ಲವೂ ಕೂಡ ಆಯುರ್ವೇದದಲ್ಲಿ ಅತೀ ಹೆಚ್ಚಿನ ಮಹತ್ವವನ್ನು ಹೊಂದಿವೆ.ಇದರ ಎಲೆಗಳು ಅಸ್ತಮಾ, ಜ್ವರ ಮತ್ತು ಶೀತದಂತಹ ಖಾಯಿಲೆಗಳನ್ನು ವಾಸಿ ಮಾಡಲು ಸಹಕಾರಿಯಾಗಿವೆ. ಅರಳಿ ಮರದ  ಎಲೆಗಳಿಂದ ಬರುವ ಹಾಲು ಕಣ್ಣಿನ ನೋವನ್ನು ನಿವಾರಿಸುತ್ತದೆ. ಈ ಮರದಿಂದ ಬೇರೆ ಆಯುರ್ವೇದದ ಉತ್ಪನ್ನಗಳನ್ನು ಸಹ ತಯಾರು ಮಾಡಲಾಗುತ್ತದೆ. ಇದು ಹೆಚ್ಚೆಂದರೆ 50 ಖಾಯಿಲೆಗಳನ್ನು ವಾಸಿ ಮಾಡುವ ಗುಣ ಹೊಂದಿದ್ದು,ಅವುಗಳಾದ  ಅಪಸ್ವಾರ,ಭೇದಿ, ಗ್ಯಾಸ್ಟ್ರಿಕ್ ಸಮಸ್ಯೆ ಹೀಗೆ ಇನ್ನೂ ಅನೇಕ.

5.ಶಾಸ್ತ್ರದ ಪ್ರಕಾರ ಅರಳಿ ಮರಕ್ಕೆ ಭಾನುವಾರದ ದಿನ ಮಾತ್ರ ನೀರು ಹಾಕಬೇಡಿ,ಅದರಿಂದ ಹಣ ಕಳೆದುಕೊಳ್ಳುವ,ನಷ್ಟವಾಗುವ ಸಂಭವ ಹೆಚ್ಚು.

6.ಯಾವಾಗಲು ಅರಳಿ ಮರವನ್ನು ಪ್ರದಕ್ಷಿಣಾಕಾರವಾಗಿ ಸುತ್ತಬೇಕು,ಅಪ್ರದಕ್ಷಿಣಾಕಾರವಾಗಿ ಸುತ್ತಬಾರದು.ಶಾಸ್ತ್ರಗಳ ಪ್ರಕಾರ ಇದು ಸೂರ್ಯನ  ಚಲನೆಯಾಗಿದ್ದು . ದೇವರು ನಮ್ಮ ಬಲಗಡೆ ಇದ್ದಾನೆ, ನಮ್ಮನ್ನು ಸರಿಯಾದ ಮಾರ್ಗದಲ್ಲಿ ಅಂದರೆ ಧರ್ಮದ ದಾರಿಗೆ ಕೊಂಡೊಯ್ಯುವುದಾಗಿದೆ.

7.ಯಾವತ್ತೂ ಕೂಡ ಅರಳಿ  ಮರವನ್ನು ಬೇರು ಸಮೇತ ಕೀಳಬೇಡಿ ಅದು ಒಂದು ವೇಳೆ  ಬೆಳೆಯಬಾರದಂತಹ ಸ್ಥಳದಲ್ಲಿ ಬೆಳೆದರೆ ಮಾತ್ರ ಕೀಳಬಹುದು.ನೀವು ಒಂದು ವೇಳೆ ಹಾಗೇನಾದರೂ ಕಿತ್ತರೆ  ನಿಮ್ಮ ಮದುವೆ ಜೀವನ ಅಂದರೆ ವೈವಾಹಿಕ ಜೀವನದಲ್ಲಿ ಅನೇಕ ತೊಂದರೆಗಳನ್ನು ಬರುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top