`ರಾನ್ ಸಮ್‍ವೇರ್’ ವೈರಸ್ ಬಂದು ಹೋಯ್ತು ಈಗ `ಗೋಲ್ಡನ್ ಐ’ ವೈರಸ್ ನ ದರ್ಬಾರ್ ಶುರು..
ಕಳೆದ ತಿಂಗಳು `ರಾನ್ ಸಮ್‍ವೇರ್’ ಇಡೀ ವಿಶ್ವವನ್ನೇ ತಲ್ಲಣ ಗೊಳಿಸಿತ್ತು , ಬೆಂಗಳೂರಿನಲ್ಲೂ ಹಲವಾರು ಕಂಪ್ಯೂಟರ್ ಕಚೇರಿಗಳು ಇದರ ದಾಳಿಗೆ ಒಳಗಾಗಿದ್ದವು
ಕಂಪ್ಯೂಟರ್ ಹ್ಯಾಕರ್ಸ್ ಈ ಕೃತ್ಯ ಎಸಗಿದ್ದರು ಕೋಟಿ ಕೋಟಿ ರೂಪಾಯಿಗಳ ಬಿಟ್ ಕಾಯಿನ್ಸ್ ವ್ಯವಹಾರವು ನಡೆದಿತ್ತು ಸುಮಾರು 3 ಲಕ್ಷ ಕಂಪ್ಯೂಟರ್ ಗಳು ಹಾನಿಗೀಡಾಗಿದ್ದವು.
ಇದರ ಬೆನ್ನಲೇ ಈಗ ಮತ್ತೊಂದು ಮಹತ್ತರ ಸೈಬರ್ ಅಟ್ಯಾಕ್ `ಗೋಲ್ಡನ್ ಐ’ ಎಂಬುದು ಯುರೋಪ್‍ನ ಹಲವಾರು ದೇಶಗಳಲ್ಲಿ ತಲ್ಲಣ ಉಂಟುಮಾಡಿದೆ .
ಇದ್ಯಾವುದೋ ಜೇಮ್ಸ್ ಬಾಂಡ್ ಫಿಲಂ ಹೆಸರಲ್ಲ `ರಾನ್ ಸಮ್‍ವೇರ್’ ರುಚಿ ನೋಡಿಸಿದ ಹ್ಯಾಕರ್ಸ್ ಮತ್ತೊಮ್ಮೆ ಈ ವೈರಸ್ ಹರಿಯ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ . ಮಂಗಳವಾರ ನಡೆದ ಈ ದಾಳಿ ವಿಶ್ವವೇ ಮತ್ತೊಮ್ಮೆ ತಲ್ಲಣಗೊಳ್ಳುವಂತೆ ಮಾಡಿದೆ .
`ರಷ್ಯಾದ ತೈಲ ಘಟಕ, ಉಕ್ರೇನ್‍ನ ಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮೊದಲ ಬಾರಿ ಈ ರೀತಿಯ ವೈರಸ್ ಕಂಡು ಬಂದಿದೆ. ಈ ಬಾರಿ ದಾಳಿಕೋರರು ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಆದಷ್ಟು ಎಲ್ಲ ಕಚೇರಿಗಳಲ್ಲೂ ಮುಂಜಾಗೃತಾ ಕ್ರಮವಾಗಿ ಅಗತ್ಯವಾದ ಆಂಟಿ ವೈರಸ್ ಗಳನ್ನೂ ತಮ್ಮ ಕಂಪ್ಯೂಟರ್ ಗಳಲ್ಲಿ ಇನ್ಸ್ಟಾಲ್ ಮಾಡುತ್ತಿದ್ದಾರೆ .
ಅನಗತ್ಯ ಫೈಲ್ ಗಳ ಮತ್ತು ವೆಬ್ಸೈಟ್ ಗಳ ಭೇಟಿಯನ್ನು ನಿಲ್ಲಿಸಬೇಕು ಎಂದು ಸೈಬರ್ ತಜ್ಞರು ಅಭಿಪ್ರಾಯ ಪಡುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
