fbpx
ಆರೋಗ್ಯ

ಎಷ್ಟು ಓದಿದರೂ ತಲೆಗೆ ಹತ್ತೋಲ್ಲ ಅನ್ನೋರು ಕ್ಯಾಂಡಲ್ ಬಳಸಿ ಜ್ಞಾಪಕ ಶಕ್ತಿ ಜಾಸ್ತಿ ಮಾಡ್ಕೊಳ್ಳಿ..

ಎಷ್ಟು ಓದಿದರೂ ತಲೆಗೆ ಹತ್ತೋಲ್ಲ ಅನ್ನೋರು ಕ್ಯಾಂಡಲ್ ಬಳಸಿ ಜ್ಞಾಪಕ ಶಕ್ತಿ ಜಾಸ್ತಿ ಮಾಡ್ಕೊಳ್ಳಿ..

ಯಾವುದಾದರೊಂದು ವಿಷಯದಲ್ಲಿ ನಿಮ್ಮ ದೃಷ್ಠಿಯನ್ನು ಕೆಂದ್ರೀಕರಿಸಲಾಗುತ್ತಿಲ್ಲವೇ? ಓದಿರುವುದು ಜ್ಞಾಪಕವಿರುವುದಿಲ್ಲವೇ? ಇಂತಹ ವಿಷಯಗಳಿಗೊಂದು ಪರಿಣಾಮಕಾರಿ ಆವಿಷ್ಕಾರವೇ ‘ಕ್ಯಾಂಡಲ್ ಟ್ರಿಕ್’.!. ಇದನ್ನು ನಿಮ್ಮ ಮಕ್ಕಳು ಸತತವಾಗಿ ಅಭ್ಯಾಸಮಾಡಿದರೆ… ನಿಮ್ಮ ಮಕ್ಕಳ ಜ್ಞಾಪಕಶಕ್ತಿಯಲ್ಲಿ ಗಣನೀಯ ಬದಲಾವಣೆ ಬರುತ್ತದೆ. ಓದುವುದರಲ್ಲಿ ಕೂಡಾ ವ್ಯತ್ಯಾಸ ಕಂಡುಬರುತ್ತದೆ.

ಬೆಳಿಗ್ಗೆ ನಿದ್ದೆಯಿಂದ ಎದ್ದಕೂಡಲೇ, ಪದ್ಮಾಸನದಲ್ಲಿ ಕುಳಿತುಕೊಂಡು, ಸ್ವಲ್ಪ ದೂರದಲ್ಲಿ ನಿಮ್ಮ ಕಣ್ಣುಗಳಿಗೆ ಸಮನಾಂತರವಾಗಿರುವಂತೆ ಒಂದು ಮೇಣದ ಬತ್ತಿಯನ್ನು ಹಚ್ಚಿಟ್ಟು ಅದರ ಜ್ವಾಲೆಯನ್ನೇ ನೋಡುತ್ತಿರಬೇಕು. ಬದಲಾಗುತ್ತಿರುವ ಜ್ವಾಲೆಯ ಬಣ್ಣ, ಜ್ವಾಲೆ ಗಾಳಿಗೆ ಕದಲುತ್ತಿರುವಾಗ ಬದಲಾಗುವ ಅದರ ಆಕಾರ ಇವೆಲ್ಲವನ್ನೂ ತದೇಕಚಿತ್ತದೀದ 5 ನಿಮಿಷಗಳಕಾಲ ನೋಡುತ್ತಲೇ ಇರಬೇಕು.

ನಂತರ ಉರಿಯುತ್ತಿರುವ ಮೇಣದ ಬತ್ತಿಯನ್ನು ಆರಿಸಿ. ಎರಡೂ ಕಣ್ಣುಗಳನ್ನು ಕೈಗಳಿಂದ ಮುಚ್ಚಿಕೊಂಡು ಈ ಹಿಂದೆ ಮೇಣದ ಬತ್ತಿ ಉರಿಯುತ್ತಿರುವುದನ್ನು ಕಲ್ಪಿಸಿಕೊಂಡು ಮನೋ ನೇತ್ರಗಳಿಂದ ನೋಡುತ್ತಿರಬೇಕು.

ಹೀಗೆ ಪ್ರತೀದಿನ ನೋಡುತ್ತಾಯಿರಬೇಕು. ಮೊದಲ ದಿನ ಮೇಣದ ಬತ್ತಿಯ ಜ್ವಾಲೆಯನ್ನು 5 ನಿಮಿಷ ನೋಡಿದರೆ ಕ್ರಮೇಣ ಆ ಅವಧಿಯನ್ನು ಕಡಿಮೆಗೊಳಿಸುತ್ತಾ ಬರಬೇಕು. ಹೀಗೆ ಮಾಡುವುದರಿಂದ ಊಹಾ ಶಕ್ತಿಯೂ ಸಹ ಬೆಳೆಯುತ್ತದೆ. ನೀವು ಪ್ರಯತ್ನಿಸಿ ನಿಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ.

ಅಬ್ಬಾ ಎಷ್ಟು ನೆನಪಿಟ್ಕೊಂಡ್ರುನು ಮರ್ತೊಗುತ್ತೆ ಅನ್ನೋರು ಈ 6 ಆಯುರ್ವೇದದ ಮೂಲಿಕೆ ಬಳಸಿ ಜ್ಞಾಪಕ ಶಕ್ತಿ ಹೆಚ್ಚು ಮಾಡ್ಕೋಬಹುದು!

1. ರೋಸ್ಮರಿ

ರೋಸ್ಮರಿಯಲ್ಲಿ ರೋಸ್ಮರಿನಿಕ್ ಆಮ್ಲ ಮತ್ತು ಕಾರ್ನೋಸಿಕ್ ಆಮ್ಲ ದೇಹದ , ಅಸೆಟೈಕೋಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಪ್ರಮುಖ ಮೂಲಿಕೆ, ಅಸೆಟೈಕೋಲಿನ್ ನರ ಸಂಜ್ಞೆಗಳನ್ನು ನಿಭಾಯಿಸುವ ರಾಸಾಯನಿಕ.
ಒಂದೆರಡು ಎಲೆಗಳನ್ನು ತಿನ್ನಬಹುದು .

2. ಅಶ್ವಗಂಧ

ಬೀಟಾ-ಅಮಿಲಾಯ್ಡ್ ಪ್ರೋಟೀನ್ ಒಡೆಯುವ ಕ್ರಿಯೆಗೆ ನೆರವಾಗುತ್ತದೆ, ಈ ಸಂಯುಕ್ತ ಮೆದುಳಿನಲ್ಲಿ ಪ್ಲೇಕ್ ಉಂಟುಮಾಡಬಹುದು
ಜ್ಞಾಪಕ ಶಕ್ತಿ ಸುಧಾರಿಸುತ್ತದೆ , ದೃಶ್ಯ ರೂಪಕ ಜ್ಞಾಪಕ ಶಕ್ತಿ ಸುಧಾರಿಸುತ್ತದೆ , ಆಕ್ಸಿಡೇಟಿವ್ ಅಂಶಗಳು ಮೆದುಳಿನ ಒತ್ತಡ ಕಡಿಮೆ ಮಾಡಿ ನರಕೋಶದ ಅವನತಿ ತಡೆಯಲು ಸಹಾಯಮಾಡುತ್ತದೆ.

ಕಾಲು ಚಮಚ ಅಶ್ವಗಂಧ ಪುಡಿಯನ್ನು ಟೀ ಮಾಡಿಕೊಂಡು ಕುಡಿಯಬಹುದು.

3. ಬ್ರಾಹ್ಮಿ

ಈ ಮೂಲಿಕೆ ಸಾಮಾನ್ಯವಾಗಿ ಮೆದುಳಿನ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಅಲ್ಲದೆ ಏಕಾಗ್ರತೆ ಹೆಚ್ಚಿಸುತ್ತದೆ.
ಬ್ರಾಹ್ಮಿ ಎಲೆಗಳಿಂದ ತೆಗೆದ ರಸವನ್ನು ದಿನಕ್ಕೆ 2 ಅಥವಾ 3 ಬಾರಿ ಒಂದು ಚಮಚ ಕುಡಿಯಬೇಕು.

4. ಸೇಜ್ (ಸಲ್ವಿ ತುಳಸಿ)

ಇದರಲ್ಲಿರುವ ಸಿನೆಯೋಲ್ ಮತ್ತು ತುಜೆನ್ ಅಂಶಗಳು ಮಿದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ.
ಅಷ್ಟೇ ಅಲ್ಲದೆ ಫ್ಲಾವೊನ್ಸ್, ಫ್ಲೇವನಾಯ್ಡ್ ಗ್ಲೈಕೋಸೈಡ್, ನಿಯಾಸಿನ್, ಟಾನ್ನಿಕ್ ಆಮ್ಲ ಮತ್ತು ಒಲಯಿಕ್ ಆಮ್ಲ ಅಂಶಗಳು
ಮಾನಸಿಕ ಜಾಗರೂಕತೆ ಮತ್ತು ಗಮನ , ಏಕಾಗ್ರತೆ ಹೆಚ್ಚಿಸುತ್ತದೆ.

5. ಗಿಂಕ್ಗೊ ಬಿಲೋಬ 

ಜ್ಞಾಪಕ ಶಕ್ತಿ ಮತ್ತು ಮಾನಸಿಕ ತೀಕ್ಷ್ಣತೆ ಹೆಚ್ಚಿಸುತ್ತದೆ .

6. ಗೋಟು ಕೋಲ (ಒಂದೆಲಗ )

ಜೀವಸತ್ವಗಳಾದ ಬಿ 1, ಬಿ 2 ಮತ್ತು ಬಿ 6. ಹೊಂದಿದ್ದು ಈ ಮೂಲಿಕೆ ರಕ್ತ ಪ್ರಚೋದಿಸುತ್ತದೆ ಮತ್ತು ಮೆದುಳಿನ ಏಕಾಗ್ರತೆ ಮತ್ತು ಗಮನ ಹೆಚ್ಚಿಸುತ್ತದೆ , ನರ ದೌರ್ಬಲ್ಯವನ್ನು ಸಹ ತಡೆಯುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top