fbpx
ದೇವರು

ಕುಜದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ ಕೊಳ್ಳಿ ನಿಮಗೆ ಒಳ್ಳೆಯದಾಗುತ್ತದೆ..

ಮಂಗಳವಾರ ನೀವು  ಈ ರೀತಿ ಮಾಡಿದರೆ ಒಳ್ಳೆದಾಗತ್ತೆ.

ಮಂಗಳವಾರ ಈ ಕೆಲಸವನ್ನು ಮಾಡಿದರೆ ಒಳ್ಳೆದಾಗತ್ತೆ.ಖಂಡಿತ ಶುಭವಾಗತ್ತೆ.

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಮತ್ತು ಗಳಿಗೆಯೂ ಕೂಡ ತುಂಬಾನೇ ಮಹತ್ವದ್ದಾಗಿರತ್ತೆ.ವಾರದಲ್ಲಿ ಬರುವ 7 ದಿನಗಳಿಗೂ ಅದರದೇ ಆದ ಮಹತ್ವ ಇದೆ. ಆಯಾ ದಿನಗಳ ಮಹತ್ವವನ್ನು ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ನೆಡೆದುಕೊಂಡ ಹೋದರೆ ಖಂಡಿತವಾಗಿಯೂ ಯಶಸ್ಸು ಸಿಕ್ಕೇ ಸಿಗತ್ತೆ.

ಪೌರ್ಣಮಿ,ಅಮಾವಾಸ್ಯೆ, ಗ್ರಹಣ ಕಾಲದಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ ಜನಿಸಿದವರಿಗೆ  ಕುಜ ದೋಷ ವಿರುತ್ತದೆ.

ಮಂಗಳವಾರದ ದಿನ ಹುಟ್ಟಿದರೂ ಸಹ ಕುಜ ದೋಷ ಇರುತ್ತದೆ. ನಿಮ್ಮ ಜನ್ಮ ಕುಂಡಲಿಯಲ್ಲಿ 1, 2,4,5,7,8, ಮತ್ತು 12 ನೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಕುಜ ದೋಷವಿದೆ ಎಂದರ್ಥ.2,5, ಮತ್ತು 7ನೇ ಮನೆಯಲ್ಲಿ ಕುಜ ನಿದ್ದರೆ ಬಲಿಷ್ಠ ಕುಜದೋಷ ನಿಮಗಿದೆ ಎಂದರ್ಥ.

ನಿಮಗೆ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ ಮತ್ತು ಮದುವೆಯೂ ಕೂಡ ಬೇಗನೇ ಆಗುವುದಿಲ್ಲ ಲೇಟಾಗಿ ಆಗುತ್ತದೆ ಅಂದರೆ 30 ವರ್ಷಗಳ ನಂತರವೇ. ಇದಕ್ಕೆ ಪರಿಹಾರವಾಗಿ ಕುಜ ದೋಷ ಪರಿಹಾರ ಮಾಡಿಕೊಳ್ಳಬಹುದು.

ಮಂಗಳವಾರವನ್ನು ತುಂಬಾ ಜನರು ಶುಭವೆಂದು ಭಾವಿಸುತ್ತಾರೆ. ಹಿಂದೂ  ಧರ್ಮದಲ್ಲಿ ಮಂಗಳವಾರಕ್ಕೆ ಅದರದೇ ಆದ ಮಹತ್ವ ಇದೆ. ಇನ್ನೂ ಈ ದಿನದಂದು ಹಿಂದೂಗಳು ಗಣೇಶ,ದುರ್ಗಾ ದೇವಿ,ಕಾಳಿ ಮತ್ತು ಹನುಮಂತನನ್ನು ಪೂಜಿಸುತ್ತಾರೆ.

ಕೆಲವರು ದೇವಸ್ಥಾನಗಳಿಗೆ ಹೋದರೆ ಇನ್ನೂ ಕೆಲವರು ಇಡೀ ದಿನ ಉಪವಾಸ ಇರ್ತಾರೆ.

ಮಂಗಳವಾರದ ದಿನವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗುತ್ತದೆ.ಮಂಗಳ ಗ್ರಹಕ್ಕೆ ಇನ್ನೊಂದು ಹೆಸರೇ  ಕುಜ ಗ್ರಹ ಮತ್ತು ಅಂಗಾರಕ ಎಂತಲೂ ಕರೆಯುತ್ತಾರೆ.

ಆತ ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತಾನೆ  ಎಂದು ಹೇಳುತ್ತಾರೆ. ಆ ದಿನ ಉಪವಾಸ ಇದ್ದರೆ ಆತನನ್ನು ತೃಪ್ತಿ ಪಡಿಸಬಹುದು.ಆತನಿಂದ ಆಗುವ ಹಾನಿಯನ್ನು ತಡೆಯಬಹುದು ಎಂದು ಹೇಳಲಾಗಿದೆ. ಕೂಜನಿಂದ ಉಂಟಾಗುವ ತೊಂದರೆಗಳು ಮದುವೆ ಬೇಗ  ಆಗುವುದಿಲ್ಲ,ಸಾಮಾನ್ಯವಾಗಿ 30 ವರ್ಷ ಕಳೆದ ನಂತರವಷ್ಟೇ ಮದುವೆ,ಸದಾಕಾಲ ನಿಮ್ಮ ಮನಸ್ಸು ಎಲ್ಲರ ಜೊತೆಗೂ  ಜಗಳ ಮಾಡುವ ಪ್ರವೃತ್ತಿಯನ್ನು ಹೊಂದುತ್ತದೆ.ಕೆಟ್ಟ ಕೆಟ್ಟ ಮಾತುಗಳನ್ನು ಆಡುತ್ತಾರೆ ಮತ್ತು ಇನ್ನೂ ಅನೇಕ ವೃತ್ತಿಪರ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ.

ಮಂಗಳವಾರದ ಮಹತ್ವ ಏನು  ? ಅದೃಷ್ಟಕ್ಕಾಗಿ ಜನ ಏನು ಮಾಡಬೇಕು ?  ಪರಿಹಾರ ಏನು? ಅದನ್ನು ತಿಳಿದುಕೊಳ್ಳಿ.

ಮಂಗಳವಾರ ಕೆಂಪು ಮತ್ತು ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸುವುದಕ್ಕೆ ಸೀಮಿತವಾಗಿದೆ. ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಒಳ್ಳೆಯದಾಗುತ್ತೆ.

ಹನುಮಂತ,ಕಾರ್ತಿಕೇಯ,ದುರ್ಗಾ ದೇವಿ, ಕಾಳಿಯನ್ನು ಓಲೈಸಿಕೊಳ್ಳಲು ಹೆಚ್ಚಿನವರು ಉಪವಾಸ  ಮಾಡಲೇಬೇಕು.ಹೀಗೆ ಮಾಡೋದರಿಂದ ಮಂಗಳ ಗ್ರಹದಿಂದ ಆಗುವ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ.

ಇನ್ನೂ  ಊಟ ಮಾಡಲೇಬೇಕು ಎನ್ನುವವರು ಕೇವಲ ಒಂದು ಹೊತ್ತು ಮಾತ್ರ ಊಟ ಮಾಡಬೇಕು.ಗೋಧಿ ಮತ್ತು ಬೆಲ್ಲದಿಂದ ಮಾಡಿದ ಉಪಹಾರವನ್ನು ಒಂದು ಹೊತ್ತು ಮಾತ್ರ ಸೇವಿಸಬೇಕು.

ಕೆಲವರು ಯಾವುದೇ ಅಡೆ ತಡೆ ಇಲ್ಲದೆ 21 ಮಂಗಳವಾರದ ದಿನ ಉಪವಾಸವನ್ನು ಆಚರಿಸುತ್ತಾರೆ.ಇದು ಸಹ ಒಳ್ಳೆಯದೇ.

ಇನ್ನೂ ಮಂಗಳವಾರದಂದು  ಹನುಮಂತನಿಗೆ ಭಕ್ತರು ಕೆಂಪು ಹೂವನ್ನು ಸಮರ್ಪಿಸಬೇಕು. ಹನುಮಾನ ಚಾಲೀಸವನ್ನು ಪಠಿಸುವುದರಿಂದ  ಕುಜ ದೋಷವು ಕಡಿಮೆಯಾಗುತ್ತದೆ.ಹಾಗೆ ಹನುಮಂತನ ದೇವಸ್ಥಾನಕ್ಕೂ ಹೋದರೆ ಒಳ್ಳೆಯದು.

ಇನ್ನೂ ಕುಜ ದೋಷ ಇರುವವರು ಪಕ್ಷಿಗಳಿಗೆ ಮತ್ತು ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಪ್ರತಿದಿನ  ತಿನ್ನಲು ಮತ್ತು ಕುಡಿಯಲು ಕೊಡಿ. ಇದರಿಂದ ಕೂಡ ಕುಜನು ಸಂತೃಪ್ತನಾಗಿ ಕುಜ ದೋಷ ಕಡಿಮೆಯಾಗುತ್ತದೆ.

ನಿಮ್ಮ ಮನೆಗಳ ಹತ್ತಿರವಾಗಲಿ ಎಲ್ಲೇ ಆಗಲಿ ಗಿಡಗಳನ್ನು ಕಡಿಯುವುದು ಕಿತ್ತು ಬಿಸಾಡುವುದು ಮಾಡಬೇಡಿ ಅದರ ಬದಲು ಗಿಡ ಮರಗಳಿಗೆ ನೀರು ಹಾಕಿ ಬೆಳಸಿರಿ ಮತ್ತು ಬಿಳಿ ಎಕ್ಕದ ಮರ, ಬಾಳೆ ಮರಕ್ಕೆ ಪ್ರತಿ ಮಂಗಳವಾರದಂದು ಪೂಜೆ ಸಲ್ಲಿಸಿ.ಇದರಿಂದ ದೋಷ ಕಡಿಮೆಯಾಗುತ್ತದೆ.

ಬಿಳಿ ಎಕ್ಕದ ಮರದಲ್ಲಿ  ಸಾಕ್ಷಾತ್ ಗಣೇಶ ಮತ್ತು ಹನುಮಂತನು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ.11 ವರ್ಷಗಳು ಕಳೆದ ನಂತರ ಆ ಮರದ ಬುಡದಲ್ಲಿ ನೀವು ಗಣೇಶ ಮತ್ತು ಹನುಮಂತನ ಆಕೃತಿಯಲ್ಲಿರುವ ಚಿತ್ರವನ್ನು  ಮರದ ಬುಡದಲ್ಲಿ ಕಾಣಬಹುದಾಗಿದೆ.

ಮದುವೆಗೆ ಕೇವಲ ಸೂರ್ಯನ ತಿಂಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಧಿಕ ಮಾಸ, ಕ್ಷಯ ಮಾಸ,ಚಾತುರ್ಮಾಸ ದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಚಾತುರ್ಮಾಸದಲ್ಲಿ ಬರುವ  ಪಿತೃಪಕ್ಷ,ಮಹಾಲಯ ಅಮಾವಾಸ್ಯೆಯಂದು ಶುಭಕಾರ್ಯಗಳನ್ನು ಮಾಡುವುದಕ್ಕೆ ಒಳ್ಳೆಯ ದಿನಗಳು ಅಲ್ಲ ಎಂದು ಪರಿಗಣಿಸಲಾಗಿದೆ. ಅದೇ ರೀತಿ ಮದುವೆ ಮಾಡುವುದಕ್ಕೆ ಸೋಮವಾರ,ಬುಧವಾರ ಮತ್ತು ಶುಕ್ರವಾರ ಒಳ್ಳೆಯ ದಿನವೆಂದು ಮಂಗಳವಾರ ಕೆಟ್ಟ ದಿನವೆಂದು ಪರಿಗಣಿಸಲಾಗಿದೆ.

ಕುಜ ದೋಷಕ್ಕೆ ಪರಿಹಾರವಾಗಿ  ನವಗ್ರಹ ಪೂಜೆ,ನವಗ್ರಹ ಹೋಮ ಮತ್ತು  ಪ್ರತೀ ದಿನ ಸೂರ್ಯ ದೇವನಿಗೆ  ನಮಸ್ಕಾರವನ್ನು ಮಾಡಿರಿ.

ಯಾವುದೇ ಕಾರಣಕ್ಕೂ ಮಂಗಳವಾರದಂದು ಮಾಂಸಾಹಾರ ಸೇವನೆ ಮಾಡಬೇಡಿ.ಇದು ಒಳ್ಳೆಯದಲ್ಲ.

ಇನ್ನೂ ಕೊನೆಯದಾಗಿ ಕೆಂಪು ವಸ್ತ್ರವನ್ನು ದಾನ ಮಾಡಿ ಕುಜನಿಗೆ ಸಂಬಂಧಪಟ್ಟ ವಸ್ತುವನ್ನು ದಾನ ಕೊಡುವುದರಿಂದ ಕೂಡ ದೋಷ ಕಡಿಮೆಯಾಗುತ್ತದೆ.

ಈ ಮೇಲೆ ಹೇಳಿದ ಪರಿಹಾರಗಳನ್ನು  ಮಾಡಿ ಕೊಳ್ಳಿ ನಿಮಗೆ ಕುಜದೋಷ ವಿದ್ದರೆ ಪರಿಹಾರವಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top