fbpx
ಜೀವನ ಕ್ರಮ

ತೊಂದರೆ ಕೊಡೋರಿಗೆ ಸ್ವಲ್ಪ ಬಿಸಿ ಮುಟ್ಟಿಸುವಷ್ಟು ತೊಂದರೆ ಕೊಡಬೇಕಾದುದು ಬದುಕಿನ ಅನಿವಾರ್ಯತೆ..

ಸನ್ಯಾಸಿ ಮತ್ತು ಹಾವು


ಒಂದೂರಲ್ಲಿ ಒಂದು ಕೆರೆ ಇತ್ತು ಆ ಕೆರೆಯ ಪಕ್ಕದಲ್ಲಿದ್ದ ಒಂದು ಪೊದೆಯೊಳಗೆ ಒಂದು ಭಯಾನಕ ನಾಗರಹಾವು ವಾಸವಾಗಿತ್ತು.ಈಗಾಗಲೇ ಆ ಹಾವು ಹತ್ತು ಹಲವು ಜನ್ರನ್ನ ಕಚ್ಚಿ ಸಾಯಿಸಿತ್ತು.ಆ ಕಾರಣಕ್ಕೆ ಊರಿನ ಜನರು ಕೆರೆಯಿಂದ ನೀರು ತರಲು ಬೇರೆ ಒಂದು ಸುತ್ತಿ ಬಳಸಿದ ದಾರಿಯನ್ನು ಮಾಡಿಕೊಂಡಿದ್ದರು.ಈ ಹಾವಿನ ಕಾಟದಿಂದ ಊರಿನ ಜನರು ಬೇಸತ್ತಿದ್ದರು.

ಆ ಊರಿಗೆ ಒಮ್ಮೆ ಒಬ್ಬ ಸನ್ಯಾಸಿಯು ಬಂದನು. ಕೆರೆಬದಿಗೆ ದೈನಂದಿನ ಕಾರ್ಯಕ್ಕೆ ಹೊರಟ ಅವರಿಗೆ ಊರಿನ ಜನ ಹಾವಿನ ಕಾಟದ ಬಗ್ಗೆ ಹೇಳಿ ಎಚ್ಚರಿಸಿದರು.ಆದರೂ ಆ ಸನ್ಯಾಸಿ ಅದೇ ದಾರಿಯಲ್ಲೇ ನಡೆದನು. ಅಲ್ಲೇ ಇದ್ದ ಹಾವಿಗೆ ತನ್ನ ಹತ್ತಿರ ಧೈರ್ಯದಲ್ಲಿ ಬರುತ್ತಿದ್ದ ಸನ್ಯಾಸಿಯನ್ನು ನೋಡಿ ಕೋಪ ಬಂದು. ಭುಸುಗುಡುತ್ತಾ ಕಚ್ಚಲು ಬಂದಿತು.

ಸನ್ಯಾಸಿಗಳು ಕಚ್ಚಲು ಬಂದ ಹಾವನ್ನು ಮಂತ್ರ ಶಕ್ತಿಯಿಂದ ನಿಲ್ಲಿಸಿ ಅದನ್ನು.”ಅಯ್ಯಾ ನಾಗರಾಜ ನಿನಗೆ ಜನರನ್ನು ಕಚ್ಚಿ ಸಾಯಿಸುವದರಿಂದ ಏನು ಸಿಗುತ್ತದೆ? ಜನರನ್ನು ಕೊಂದು ನೀನೇನು ಅವರನ್ನು ತಿನ್ನುವೆಯಾ.ಯಾವ ಕಾರಣವೂ ಇಲ್ಲದೆ ಅಮಾಯಕ ಜನರನ್ನು ಕಚ್ಚಿ ಸಾಯಿಸಿ ನೀನೇಕೆ ಕರ್ಮಾ ಕಟ್ಟಿಕೊಳ್ಳುವೆ.?”

ಎಂದು ಕೇಳಿದರು.

ಇದರಿಂದ ನಾಗರಹಾವಿಗೆ ಜ್ಞಾನೋದಯವಾಗಿ ಇಷ್ಟುದಿನ ಯಾವ ಕಾರಣವೂ ಇಲ್ಲದೆ ಅನ್ಯಾಯವಾಗಿ ಎಷ್ಟೊಂದು ಅಮಾಯಕ ಜನರನ್ನು ಸಾಯಿಸಿದೆನಲ್ಲ ಎಂದು ಪಶ್ಚಾತ್ತಾಪ ಪಟ್ಟಿಕೊಂಡಿತು.ಸನ್ಯಾಸಿಯು ತನ್ನ ತಪ್ಪಿನ ಅರಿವು ಮಾಡಿಸಿದ್ದಕ್ಕೆ ಹಾವು ವಂದಿಸಿ “ಅಯ್ಯಾ ಸ್ವಾಮಿಗಳೇ ಇನ್ನು ನಾನು ಯಾರನ್ನು ಕಚ್ಚಿಕೊಲ್ಲುವದಿಲ್ಲ “ಎಂದು ಸನ್ಯಾಸಿಗೆ ಪ್ರಮಾಣ ಮಾಡಿತು.

ನಂತರ ಆ ದಾರಿಯಲ್ಲಿ ತಿರುಗುವವರಿಗೆ ಅದು ಕಾಟ ಕೊಡುವದನ್ನು ನಿಲ್ಲಿಸಿತು.ಸನ್ಯಾಸಿಯ ಜ್ಞಾನದ ಮಾತುಗಳಿಂದ ಪ್ರೇರಿತವಾದ ಅದು ಅತಿಯಾದ ಸಾಧು ಜೀವನ ನಡೆಸಲು ಪ್ರಾರಂಭಿಸಿತು.

ಜನಕ್ಕೆ ಹಾವು ಕಚ್ಚುವದಿಲ್ಲವೆಂದು ತಿಳಿದ ಬಳಿಕ, ಆ ರಸ್ತೆಯಲ್ಲಿ ಭಯವಿಲ್ಲದೆ ಓಡಾಡತೊಡಗಿದರು.ಕೆಲವು ಕಿಡಿಗೇಡಿಗಳು ಹಾವು ಏನು ಮಾಡುವದಿಲ್ಲವೆಂದು ತಿಳಿದ ಬಳಿಕ ಅದನ್ನು ಅನಾವಶ್ಯಕವಾಗಿ ಕಲ್ಲಿನಿಂದ, ಕೋಲಿನಿಂದ ಹೊಡೆದು ಹಾವಿನಮೇಲೆ ತಮಗೆ ಇದ್ದ ತಮ್ಮ ಕೋಪವನ್ನು ತೀರಿಸಿಕೊಳ್ಳ ಹತ್ತಿದ್ದರು.ಮಕ್ಕಳು ಹಾವನ್ನು ಹಿಡಿದು ತಿರುಗಿಸುತ್ತಾ ಆಟವಾಡಲು ಪ್ರಾರಂಬಿಸಿದರು. ಹಾವಿನ ಮೈಯೆಲ್ಲಾ ಗಾಯಗಳಾಗಿ ಅದರ ದೇಹ ಪರಿಸ್ಥಿತಿ ತೀವ್ರ ಹದೆಗೆಟ್ಟು. ಈಗಲೋ ಆಗಲೋ ಸಾಯುವ ರೀತಿಯಾಗಾಯಿತು.


ಸನ್ಯಾಸಿಗಳು ಮತ್ತೊಮ್ಮೆ ಆ ಹಾದಿಯಲ್ಲಿ ಬರುವಾಗ ಹಾವಿನ ಪರಿಸ್ಥಿತಿ ಕಂಡು ಬೇಸರದಿಂದ ಆ ಸ್ಥಿತಿಗೆ ಕಾರಣವೇನೆಂದು ಕೇಳಿದರು.ಆಗ ಹಾವು ವಿನಮ್ರವಾಗಿ “ತಾವು ಹೇಳಿದಂತೆ ಕಚ್ಚುವಾದ ಬಿಟ್ಟೆ.ಅದಕ್ಕೆ ಹೀಗಾಗಿದ್ದೇನೆ ಆದರೂ ಬೇಜಾರಿಲ್ಲ, ಇನ್ನೊಬ್ಬರನ್ನು ಯಾವುದೇ ಲಾಭವಿಲ್ಲದೆ ಕೊಳ್ಳುವ ಕರ್ಮ ನನಗೆ ಬರುವುದಿಲ್ಲ ಅದೇ ಸಾಕು ನನಗೆ.” ಎಂದಿತು.

ಆಗ ಸನ್ಯಾಸಿ ” ಅಯ್ಯಾ ನಾಗರಾಜ ನಾನು ನಿನಗೆ ಕಚ್ಚುವುದ ಬಿಡು ಎಂದಿದ್ದೇನೆ ಹೊರತು ಬುಸುಗುಡುವುದನ್ನುಬಿಡು ಎಂದಿಲ್ಲಾ. ನಿನ್ನ ಆತ್ಮರಕ್ಷಣೆಗೆ ನೀನು ಬುಸುಗುಡಲೇಬೇಕು ಸದಾ ನಿನ್ನನ್ನು ಪೀಡಿಸುವ ಜನರಿಗೆ ಸಾಯಿಸುವ ಭಯವನ್ನು ನೀನು ತೋರಿಸಲೇ ಬೇಕು. ಇಲ್ಲವಾದರೆ ಬದುಕುವುದು ದುಸ್ತರವಾಗುತ್ತದೆ” ಎಂದ ಹೇಳಿದರು.
ಆಗ ನಾಗಣ್ಣನಿಗೆ ತನ್ನ ತಪ್ಪು ಏನೆಂದು ಅರಿವಾಗಿ ಅವರ ಮಾರ್ಗದರ್ಶನದಂತೆ ಮುಂದಿನ ಜೀವನ ಕ್ರಮಿಸಿ ಯಾರಿಗೂ ತೊಂದರೆ ಕೊಡದೆ ತಾನು ತೊಂದರೆಗೆ ಒಳಗಾಗದೆ ಬದುಕಿದ.

ನೀತಿ : ಹೇಗೆ ಇತರರಿಗೆ ಅನಾವಶ್ಯಕ ತೊಂದರೆ ಕೊಡುವದು ತಪ್ಪೋ ಹಾಗೆ ಇತರರಿಂದ ಅನಾವಶ್ಯಕವಾಗಿ ಸ್ವತಹ ತೊಂದರೆಗೊಳಗಾಗುವದು ತಪ್ಪು. ತನ್ನ ತೊಂದರೆ ತಡೆಯಲು ತೊಂದರೆ ಕೊಡುವವರಿಗೆ ಸ್ವಲ್ಪ ಬಿಸಿ ಮುಟ್ಟಿಸುವಷ್ಟು ತೊಂದರೆ ಕೊಡಬೇಕಾದುದು ಬದುಕಿನ ಅನಿವಾರ್ಯತೆ.
DON’T BITE TO TROUBLE OTHERS UNNECESSARILY BUT KEEP HISSING FOR SELF DEFENSE

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top