ಆಷಾಡ ಶುಕ್ರವಾರದ ದಿನ ಚಾಮುಂಡಿ ಬೆಟ್ಟಕ್ಕೆ ಹೋಗ್ತಾ ಇದ್ದೀರಾ ? ಹಾಗಾದರೆ ತಪ್ಪದೇ ಈ ವಿಷಯವನ್ನು ತಿಳಿದುಕೊಳ್ಳಿ ಉಪಯೋಗ ಆಗತ್ತೆ.
ಆಷಾಢ ಶುಕ್ರವಾರದ ದಿನ ವಿಶೇಷ ದರ್ಶನಕ್ಕೆಂದು ಆಗಮಿಸುವ ಭಕ್ತರಿಗೆ ಚಾಮುಂಡಿ ಬೆಟ್ಟ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಸಕಲ ರೀತಿಯಲ್ಲೂ ಸಜ್ಜಾಗಿದೆ.
ಜೂನ್ 30, ಜುಲೈ 7,14,21 ಹಾಗೂ ಚಾಮುಂಡೇಶ್ವರಿ ವರದಂತಿ ಮಹೋತ್ಸವ ಜುಲೈ 16 ರಂದು ನೆಡೆಯಲಿದ್ದು. ಅಂದು ಭಕ್ತರ ದಂಡೇ ಆಗಮಿಸಲಿದೆ.
ಯಾರಿಗೂ ಯಾವುದೇ ತೊಂದರೆ ಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿದೆ.
ಇನ್ನೊಂದು ಕಡೆ ಭಕ್ತಾದಿಗಳಿಗೆ ಸುಗಮ ಸಂಚಾರದ ವ್ಯವಸ್ಥೆ ಕೂಡ ಮಾಡಿಕೊಂಡಿದೆ ಮತ್ತು ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಮತ್ತು ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ ಇಲಾಖೆ ಕೂಡ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು. ಅದನ್ನು ಪಾಲಿಸುವಂತೆಯೂ ಭಕ್ತಾದಿಗಳಲ್ಲಿ ವಿನಂತಿ ಮಾಡಿದ್ದಾರೆ.
ಈ ಭಾರಿಯ ಆಷಾಢ ಶುಕ್ರವಾರ ಕೈಗೊಂಡಿರುವ ವಿಶೇಷತೆಗಳ ಬಗ್ಗೆ ಒಂದು ಸಣ್ಣ ವಿವರ ಇಲ್ಲಿದೆ. ತಿಳಿದುಕೊಳ್ಳಿ ಉಪಯೋಗವಾಗುತ್ತೆ.
ಆಷಾಢ ಶುಕ್ರವಾರದ ದಿನದಂದು ಬರುವ ಭಕ್ತರು ತಮ್ಮ ಸ್ವಂತ ವಾಹನಗಳನ್ನು ಲಲಿತ ಮಹಲ್ ನ ಹೆಲಿಪ್ಯಾಡ ಮುಂದಗಡೆಯೇ ನಿಲ್ಲಿಸಿ, ದೇವಸ್ಥಾನ ಆಯೋಜಿಸಿರುವ ಉಚಿತ s.r.t.c ಬಸಗಳಲ್ಲಿ ದೇವಸ್ಥಾನಕ್ಕೆ ಬರಬೇಕು.
ಜಿಲ್ಲಾಡಳಿತವು ಈ ವ್ಯವಸ್ಥೆ ಮಾಡಲಾಗಿದ್ದು ಉಚಿತ ಬಸ್ ಸೌಲಭ್ಯವು ಬೆಳಗಿನ ಜಾವ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಇರುತ್ತದೆ.
ವಾಹನಗಳನ್ನು ಪಾರ್ಕಿಂಗ್ ಗೆ ನಿಗದಿ ಪಡಿಸಿದ 2 ಮತ್ತು 3 ನೇ ಪಾರ್ಕಿಂಗ್ ಜಾಗಗಳಲ್ಲೇ ನಿಲುಗಡೆ ಮಾಡಬೇಕು.
ಮಹಿಷಾಸುರನ ಪ್ರತಿಮೆಯಿಂದ ದೇವಸ್ಥಾನದ ಪ್ರತಿಮೆಯ ವರೆಗೂ ಯಾವುದೇ ವಾಹನಗಳಿಗೆ ಪ್ರವೇಶ ಇಲ್ಲ .
ಆಷಾಢ ಶುಕ್ರವಾರದ ದಿನ ಹಿಂದಿನ ರಾತ್ರಿ 10 ಗಂಟೆಯಿಂದಾನೇ ಅಂದರೆ ಇಂದು ಜೂನ್ 29 ರ ರಾತ್ರಿಯಿಂದಲೇ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಷ ನಿರ್ಬಂಧಿಸಲಾಗಿದೆ.
ಇನ್ನೂ ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಹಾಗೂ ಹೋಗುವ ವಾಹನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಚಾಮುಂಡಿ ಬೆಟ್ಟದ ನಿವಾಸಿಗಳು ವಾಹನ ಸಂಚಾರಕ್ಕೆ ಅನುಮತಿ ಪಡೆಯಲು ಡಿ. ಎಲ್( Dl), ಹಾಗೂ ವಾಹನದ ದಾಖಲಾತಿ ಮತ್ತಿತ್ತರ ಗುರುತಿನ ಚೀಟಿಯನ್ನು ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯ್ತಿಗೆ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಖಡ್ಡಾಯ ಮಾಡಲಾಗಿದೆ.
ಇನ್ನೂ ಆಷಾಢ ಶುಕ್ರವಾರ ಮತ್ತು ವರದಂತಿ ಮಹೋತ್ಸವದ ದಿನದಂದು ಬೆಳ್ಳಗ್ಗೆ30 ರಿಂದ ರಾತ್ರಿ 9.30 ರ ವರೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ 3 ಪ್ರತ್ಯೇಕ ಸಾಲಿನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಉಚಿತ ದರ್ಶನಕ್ಕೆ ಬರುವವರು ಶ್ರೀ ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಷ ಕಲ್ಪಿಸಲಾಗಿದ್ದು. 50 ರೂಪಾಯಿ ನೀಡಿ ಪ್ರವೇಶಕ್ಕೆ ಬರುವವರು ಸರತಿ ಸಾಲಿನಲ್ಲಿ ನಿಂತು ಶ್ರೀ ಮಹಾಬಲೇಶ್ವರ ಸ್ವಾಮಿಯ ದೇವಸ್ಥಾನದ ಮುಂಭಾಗದಿಂದ ಪ್ರವೇಷ ಕಲ್ಪಿಸಲಾಗಿದ್ದು.
300 ರೂಪಾಯಿ ಗಳ ಅಭಿಷೇಕದ ಸೇವೆಯ ಸಾಲು ದೇವಸ್ಥಾನದ ಉತ್ತರ ದಿಕ್ಕಿನಿಂದ ಹೈ ಮಾಸ್ಟ ಕಂಬ ನಂದಿನಿ ಪಾರ್ಲರ್ ನಿಂದ ಶುರುವಾಗಲಿದೆ.
ಇನ್ನೂ ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲದ ಕಾರಣ ವಾಹನಗಳನ್ನು ದಸರಾ ವಸ್ತು ಪ್ರದರ್ಶನ ಮುಂಭಾಗದ ದೊಡ್ಡ ಕೆರೆ ಮೈದಾನದಲ್ಲಿ ನಿಲುಗಡೆ ಮಾಡಿ ಅಲ್ಲಿಂದ s.r.t.c ಬಸಗಳಲ್ಲಿ 17 ರೂಪಾಯಿಯ ಟಿಕೆಟ್ ಪಡೆದು ಬೆಟ್ಟಕ್ಕೆ ಹೋಗುವ ಮತ್ತು ಬರುವ ವ್ಯವಸ್ಥೆ ಮಾಡಲಾಗಿದೆ. ಬೆಳ್ಳಗ್ಗೆ 5.30 ರಿಂದ ರಾತ್ರಿ 9 ಗಂಟೆಯ ವರೆಗೆ ಲಭ್ಯ ಇದೆ.
ಕೊನೆಯದಾಗಿ ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಮತ್ತು ನೀರಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಆಷಾಢ ಶುಕ್ರವಾರದ ಈ ದಿನಗಳು ಅಂದರೆ ನಾಳೆಯಿಂದ ಈ ವರ್ಷ ದೇವಿಯ ದರ್ಶನಕ್ಕೆ ಹೋಗುವವರಿಗೆ ಈ ಸಲಹೆಗಳು ಉಪಯುಕ್ತವಾಗಿದ್ದು ತುಂಬಾ ಸಹಾಯಕಾರಿಯಾಗಿವೆ. ಎಲ್ಲರಿಗೂ ಆ ದೇವಿ ಒಳ್ಳೆಯದನ್ನು ಮಾಡಲಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
