fbpx
ದೇವರು

ಭೀಷ್ಮನ ಆ ಐದು ಅತ್ಯಂತ ಶಕ್ತಿಶಾಲಿ ಬಾಣಗಳು ಇದ್ದಿದ್ರೆ ಕೌರವರು ಗೆಲ್ಬಹುದಿತ್ತಂತೆ ! ಓದಿ ಕೃಷ್ಣನ ತಂತ್ರ ..

ಕೌರವರ ಪಾಂಡವರ ಯುದ್ಧದಲ್ಲಿ  ಭೀಷ್ಮನ ಆ ಐದು ಅತ್ಯಂತ ಶಕ್ತಿಶಾಲಿ ಬಾಣಗಳು ಇದ್ದಿದ್ದರೆ   ಕೌರವರಿಗೆ ಕುರುಕ್ಷೇತ್ರ ಯುದ್ದವನ್ನು  ಗೆಲ್ಲಲ್ಲು ಸಹಾಯವಾಗುತ್ತಿತ್ತು.

ಧರ್ಮರಾಜ ಕೊನೆಯ ಶಾಂತಿ ಯತ್ನವಾಗಿ ಶ್ರೀ ಕೃಷ್ಣನ ಸಂಧಾನವು ವಿಫಲವಾದಾಗ ಕೌರವರು ಪಾಂಡವರಲ್ಲಿ 18 ದಿನಗಳವರೆಗೆ ಯುದ್ಧ ಮಾಡುವುದು ನಿಶ್ಚಿತವಾಯಿತು.  ಹದಿನೆಂಟು ಅಕ್ಷೌಹಿಣಿ ಸೇನೆಯು ಸೇರಿತ್ತು.ಒಂದು  ಅಕ್ಷೌಹಿಣಿ   ಸೇನೆಯೆಂದು 21870 ಆನೆಗಳು,21870 ರಥಗಳು, 65610 ಕುದುರೆಗಳು 1,09,350 ಕಾಲಾಳುಗಳು ಇರಬೇಕು.ಹೀಗೆ ಒಂದು ಅಕ್ಷೌಹಿಣಿ ಸೇನೆಯಲ್ಲಿ 20 ಲಕ್ಷ ಜೀವಿಗಳು,ಕುರುಕ್ಷೇತ್ರ ರಣಭೂಮಿಯಲ್ಲಿ 360 ಲಕ್ಷ ಜೀವಿಗಳು ಸೇರಿದ್ದರು.

ಪಾಂಡವರ ಪರವಾಗಿ ಏಳು ಅಕ್ಷೌಹಿಣಿ ಸೇನೆಯಾದರೆ ಕೌರವರದು ಹನ್ನೊಂದು ಅಕ್ಷೌಹಿಣಿ ಸೇನೆಯಿತ್ತು.ಒಳ್ಳೆಯ ಸಮಯದಲ್ಲಿ ಮಹಾಸೇನೆಯು ರಣಭೂಮಿಯನ್ನು ಸೇರಿತ್ತು.ಪಾಂಡವರ ಸೇನೆಗೆ ದೃಷ್ಟದ್ಯುಮ್ನ ನಾಯಕನಾದನು.

ಸೇನೆಯಲ್ಲಿ ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದರು.ಯುದ್ಧ ಸಾಮಗ್ರಿ ಹೊತ್ತ ಬಂಡಿಗಳು, ಉಪಚಾರ ಮಾಡುವವರು,ಗುಡಾರದ ಗಾಡಿಗಳು ಹೊರಟವು. ಪಾಂಡವರ ಸೈನ್ಯವು ಹಿರಣ್ಯವತೀ ನದಿಯನ್ನು ಗಡಿಯನ್ನಾಗಿಸಿಕೊಂಡು ಶಿಬಿರ ರಚನೆಯನ್ನು ಮಾಡಿಕೊಂಡಿದ್ದರು.

ಆ ಶಿಬಿರಗಳಲ್ಲಿ ಶಾಸ್ತ್ರಾಗಾರಗಳು ವಿವಿಧ ಆಯುಧಗಳು ಸಂಗ್ರಹಾಲಯ, ಬಿಲ್ಲು ಬಾಣಗಳು,ಕತ್ತಿ, ಶೂಲ, ಪರಶು ಗದೆ ಮುಂತಾದ ಅನೇಕ ರೀತಿ ಆಯುಧಗಳಿದ್ದವು. ಮಹಾಸೇನಾಪತಿಯು ಸೂಚನೆ ಬಂದ ತಕ್ಷಣವೇ ಯುದ್ಧ ಮಾಡಲು ನಿರ್ದಾರ ಮಾಡಿಕೊಂಡಿದ್ದನು.

ದುರ್ಯೋಧನನು ಸಹ ತನ್ನ ಸೈನ್ಯವನ್ನು ಸಿದ್ಧಪಡಿಸಿದನು. ಹನ್ನೊಂದು ವೀರರನ್ನು ಆರಿಸಿ ಪ್ರತಿಯೊಂದು ಅಕ್ಷೌಹಿಣಿ ಸೇನೆಗೆ ನೇಮಿಸಿದನು.ಭೀಷ್ಮ ದ್ರೋಣ, ಕೃಪ , ಅಶ್ವತ್ಥಾಮ, ಶಲ್ಯ, ಕರ್ಣ, ಸಿಂಧರಾಜ ಜಯದ್ರಥ, ಕೃತವರ್ಮ ,ಭೂರಿಶ್ರವ, ಶಕುನಿ, ಇವರೆಲ್ಲ ನಾಯಕರಾಗಿದ್ದರು ದುರ್ಯೋಧನನು ಭೀಷ್ಮರ ಬಳಿಗೆ ಬಂದು,ಅಜ್ಜ ನಮ್ಮ ಸೈನ್ಯವೆಲ್ಲ ಸಿದ್ಧವಾಗಿವೆ. ನೀವು ಮಹಾನಾಯಕರಾಗಿ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡನು.

ದುರ್ಯೋಧನನು ಖಂಡಿತವಾಗಿಯೂ ಭೀಷ್ಮನು ತನ್ನ ಪೂರ್ತಿ ಶಕ್ತಿಯಿಂದ ಯುದ್ಧ ಮಾಡುವುದಿಲ್ಲ.ಪಕ್ಷಪಾತದಿಂದ ಭೀಷ್ಮನು  ಪಾಂಡವರ ಕಡೆಗೆ ಯುದ್ಧ ಮಾಡುವನೆಂದು  ತಿಳಿದು.ಭೀಷ್ಮನು ತನ್ನ ಬಳಿ ಐದು ಶಕ್ತಿಶಾಲಿ ಬಾಣಗಳನ್ನು  ರಚಿಸಿದ್ದೇನೆ ಆ ಬಾಣಗಳಿಂದಲೇ ಐದು ಜನ ಪಾಂಡವರನ್ನು ಒಂದೇ ಬಾರಿಗೆ ಮಾರನೇ ದಿನವೇ  ಕೊಲ್ಲಬಹುದು ಎಂದು ಹೇಳಿದ. ಆದರೆ ದುರ್ಯೋಧನನಿಗೆ ಭೀಷ್ಮನ ಮೇಲೆ ಅನುಮಾನವಿದ್ದ ಕಾರಣ, ಆ ಐದು ಬಾಣಗಳನ್ನು ನಾನೇ ಬಳಸಿಕೊಂಡು  ಐದು ಜನ ಸಹೋದರರನ್ನು ಕೊಲ್ಲುತ್ತೇನೆ ಎಂದು ಹೇಳಿ ಆ ಬಾಣಗಳನ್ನು ದುರ್ಯೋಧನನು ಭೀಷ್ಮ ನಿಂದ ತೆಗೆದುಕೊಂಡನು.

ಈ  ವಿಷಯ ಹೇಗೋ ಕೃಷ್ಣನ ಕಿವಿಗೆ ಬಿತ್ತು . ಆಗ ಕೃಷ್ಣನು ಅರ್ಜುನನಿಗೆ  ಒಂದು ಸಲಹೆ ನೀಡಿದನು. ದುರ್ಯೋಧನನ ಬಳಿ ಹೋಗಿ ಕೇಳಿ ಆ ಬಾಣಗಳನ್ನು ಪಡೆದುಕೊಂಡು ಬಾ ಎಂದು ಹೇಳಿದನು.ಈ ಹಿಂದೆ ಒಂದು ಬಾರಿ ಅರ್ಜುನನು  ದುರ್ಯೋಧನನ ಜೀವ ಉಳಿಸಿದ ಕಾರಣವಾಗಿ ದುರ್ಯೋಧನನು ನಿನಗೆ ಏನು ಬೇಕೂ ಅದನ್ನು ಕೇಳು ನಾನು ವರವಾಗಿ ಕೊಡುತ್ತೇನೆ   ಎಂದು ಶಪಥ ಮಾಡಿದ್ದನು.ಈ ಕಾರಣದಿಂದಾಗಿ  ಬಾಣಗಳನ್ನು ಕೊಡಲು  ಇಷ್ಟವಿಲ್ಲದಿದ್ದರೂ ಅರ್ಜುನನ ವಿನಂತಿಯ ಬಳಿಕ ಅವನು ಬಾಣಗಳನ್ನು ಕೊಡಲೇಬೇಕಾಯಿತು.ಮತ್ತೆ ದುರ್ಯೋಧನನು ಭೀಷ್ಮನ ಬಳಿ ಹೋಗಿ ಆ ಐದು ಬಾಣಗಳನ್ನು ಮತ್ತೆ ರಚಿಸಲು ಹೇಳಿದನು,ಆಗ ಭೀಷ್ಮನು  ಆ ಐದು ಬಾಣಗಳನ್ನು ರಚಿಸಲು ಜೀವಮಾನದ ಅರ್ಹತೆ ಬೇಕು. ಆದ್ದರಿಂದ ಅವುಗಳನ್ನು ಪುನಃ ರಚಿಸಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದನು.ಹೀಗಾಗಿ ಯುದ್ದವನ್ನು ಜಯಿಸುವ ಏಕೈಕ ಅವಕಾಶವನ್ನು ಕಳೆದುಕೊಂಡರು.

ಭೀಷ್ಮನು ದಾಯಾದಿಗಳಲ್ಲಿ ಯುದ್ದವು ಅತ್ಯಂತ ದುಃಖವನ್ನು ಉಂಟು ಮಾಡುತ್ತದೆ. ಆದ್ದರಿಂದ ಯುದ್ಧವೇ ಆಗುವುದಾದರೆ ಕುರುವಂಶದ ಸೇವಕನಾಗಿ ನಾನು ನಿಮ್ಮ ಸಂಗಡವೇ ಇರುತ್ತೇನೆ. ಎಂದು ತಿಳಿಸಿದಾಗ ಕರ್ಣನು  ಈ ಮುದುಕನು ಇನ್ನೂ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದನು.ಆಗ ಭೀಷ್ಮರು ನಾನು ಪ್ರತಿದಿನವೂ ಹತ್ತು ಸಾವಿರ ಜನರನ್ನು ಕೊಲ್ಲುತ್ತೇನೆ.ಎಂದಾಗ ಕರ್ಣನು ಹತ್ತು ಸಾವಿರದ ಬದಲಿಗೆ ಕೇವಲ ಒಬ್ಬ ಪಾಂಡವರ ಜೀವ ತೆಗೆಯಿರಿ ಎಂದು ಕೇಳಿದನು.

ಆಗ ಭೀಷ್ಮರು ನನ್ನ ಶಸ್ತ್ರಾಸ್ತ್ರಗಳು ವಿಫಲವಾಗಿಲ್ಲ.ನಾನು ನಿನ್ನಂತಹವರಿಂದ ಕಲಿಯುವುದೇನೂ ಇಲ್ಲ ಎಂದು ಮೂದಲಿಸಿದನು. ಪಾಂಡವರ ಜೀವ ಸಹ ಹತ್ತು ಸಾವಿರದಲ್ಲಿ ಸೇರಬಹುದು ಎಂದು.ನನ್ನ ಮುಂದೆ ಶಿಖಂಡಿ ಎದುರು ಬಂದರೆ ಯುದ್ಧದಿಂದ  ನಿವೃತ್ತಿ ಹೊಂದುತ್ತೇನೆ ಎಂದರು.ಈ ಕರ್ಣನು ನಾನು ಸೇನಾಪತಿಯಾಗಿರುವಾಗ ಯುದ್ಧದಲ್ಲಿ ಭಾಗವಹಿಸಬಾರದೆಂದೂ ಆಗ್ರಹಿಸಿದರು.

ದುರ್ಯೋಧನನು ಶಿಖಂಡಿ ಎದುರಿಗೆ ಏಕೆ ಯುದ್ಧ ಮಾಡುವುದಿಲ್ಲವೆಂದು ಕೇಳಿದಾಗ ಹಿಂದೆ ಕಾಶೀರಾಜನ ಮಗಳಾಗಿದ್ದ ಅಂಬೆ ಮರುಜನ್ಮ ಪಡೆದು ನನ್ನನ್ನು ಹಿಮ್ಮೆಟ್ಟಿಸಲು ಶಿಖಂಡಿಯಾಗಿ ಬಂದಿದ್ದಾನೆ.ಗಂಡು ಹೆಣ್ಣು ಎರಡೂ ಆಗಿರುವ ಶಿಖಂಡಿಯೆದುರಿಗೆ ನಾನು ಯುದ್ಧ ಮಾಡಲಾರೆ ಎಂದರು. ದುರ್ಯೋಧನನಿಗೆ ಭೀಷ್ಮರ ವೀರನಾದ ಕರ್ಣನನ್ನು ವಿರೋಧಿಸಿ ತಿರಸ್ಕರಿಸಿದಾಗ ದುಃಖವಾದರೂ ಅವರ ಹೇಳಿಕೆಯಂತೆಯೇ ನೆಡೆಯಲು ಸಿದ್ಧನಾದನು.

ಬಲರಾಮನು ಸೈನ್ಯದೊಂದಿಗೆ ಒಂದು ಅನಿವಾರ್ಯವಾಗಿ ತನಗೆ ತೀರ್ಥ ಯಾತ್ರೆ ಮಾಡಬೇಕಾಗಿದೆ ಎಂದು ಹೊರಟು ಹೋದನು. ದುರ್ಯೋಧನ ಮತ್ತು ಭೀಮಸೇನ ಇಬ್ಬರೂ ನನ್ನ ಶಿಷ್ಯರು ಎಂದು ಆದುದರಿಂದ  ನಾನು ಯಾರ ಪಕ್ಷವನ್ನು  ಸಹ ಸೇರುವುದಿಲ್ಲ ಎಂದನು.

ದೃಷ್ಟದ್ಯುಮ್ನನು ಪಾಂಡವರ ಸೈನ್ಯಕ್ಕೆ ಪ್ರತ್ಯೇಕವಾದ ಗುರುತು ನೀಡಿದನು.ವ್ಯವಸ್ಥಿತವಾಗಿ ಯಾರು ಎಲ್ಲಿರಬೇಕೆಂದು ತಿಳಿಸಿದನು. ಕುರುಕ್ಷೇತ್ರದ ಪಶ್ಚಿಮ ಭಾಗದಲ್ಲಿ ಪಾಂಡವರು ಉಳಿದರೆ ಪೂರ್ವದಲ್ಲಿ ಕೌರವರು ನೆಲೆ ನಿಂತರು.

ಭೀಷ್ಮರು ಯುದ್ಧದ ನಿಯಮಗಳನ್ನು ವಿವರಿಸಿದರು. ಸೂರ್ಯೋದಯದಿಂದ  ಸೂರ್ಯಾಸ್ತದವರೆಗೆ ಮಾತ್ರ ಯುದ್ಧ ನೆಡೆಯುವುದು. ರಾತ್ರಿ ಕಾಲದಲ್ಲಿ ಮಿತ್ರರಂತೆ ಎಲ್ಲರೂ ವ್ಯವಹರಿಸಬೇಕು.ಯುದ್ದವನ್ನು ರಥಿಕನು ರಥಿಕನೊಡನೆ,ಕುದುರೆ ಸವಾರ ಕುದುರೆ ಸವಾರನೊಂದಿಗೆ ಹೀಗೆ ಸರಿಸಮಾನರಲ್ಲಿ ಮಾಡಬೇಕು.ಶಸ್ತ್ರಾಸ್ತ್ರಗಳು ಇಲ್ಲದವರೊಂದಿಗೆ ಯುದ್ಧ ಮಾಡಬಾರದು.ಯುದ್ಧದಲ್ಲಿ ಸಹಾಯಕರು, ವಾದ್ಯ ಶಂಖ ಘೋಷ ಮಾಡುವವರನ್ನು ಕೊಲ್ಲಬಾರದು. ಶರಣಾಗತನನ್ನು ಸಂರಕ್ಷಿಸಬೇಕು..ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.

ದೃತರಾಷ್ಟ್ರನು ಕೌರವರು ಮತ್ತು ಪಾಂಡವರ ನಡುವೆ ನಡೆಯುವ ಯುದ್ಧದ ಬಗ್ಗೆ  ತಿಳಿದುಕೊಳ್ಳಲು ಬಯಸಿದನು.ಆ ಸಮಯದಲ್ಲಿ ವ್ಯಾಸ ಮಹರ್ಷಿಗಳು ಬಂದು ಸಂಜಯನಿಗೆ ದಿವ್ಯದೃಷ್ಟಿಯನ್ನು ದಾಯಪಾಲಿಸಿ ಇದ್ದಲ್ಲಿಂದಲೇ ಎಲ್ಲ ಆಗು ಹೋಗುಗಳನ್ನು ಸ್ವತಃ ನೋಡಲು ಸಾಧ್ಯವಾಗುವಂತೆ ಅನುಗ್ರಹಿಸಿದನು.ಆಗಲೇ ಸಂಜಯನು ವಿವರವಾಗಿ ದೃತರಾಷ್ಟ್ರನಿಗೆ ಹೇಳಲು ಸಮರ್ಥನಾದನು.

ದೃತರಾಷ್ಟ್ರನು ಏನು ನೆಡೆಯುತ್ತಿದೆ  ?   ಎಂದು ಕೇಳಿದಾಗ ಕುರುಕ್ಷೇತ್ರವನ್ನು ನೋಡಿ ಎಲ್ಲ ಕಡೆ ತಯಾರಿ ನೆಡೆದಿದೆ,ಸಾಲಾಗಿ ನಿಲ್ಲಿರಿ,ಸೈನ್ಯವು ಈ ಕಡೆ ಬರಲಿ,ಸೈನಿಕರು ಸಿದ್ದರಾಗಲಿ, ಶಂಖ ಬೇರಿ ಮುಂತಾದ ವಾದ್ಯಗಳನ್ನು ಎಲ್ಲರಿಗೂ ಕೇಳುವಂತೆ ನುಡಿಸಿರಿ.ಇತ್ಯಾದಿ ಆಜ್ಞೆಗಳನ್ನು ಕೋಲಾಹಲಗಳನ್ನು ವಿವರಿಸಿದನು.

ಯುಧಿಷ್ಠಿರನು (ಧರ್ಮರಾಜ) ಸೇನೆಯ ಮುಂಭಾಗದಲ್ಲಿ ನಿಂತು ಧರ್ಮ ಅಧರ್ಮಗಳ ನಡುವೆ ಯುದ್ದ ನಡೆದಿದೆ. ಆದುದರಿಂದ ನಮ್ಮ ಕಡೆಗೆ ಯಾರೇ ಬಂದರೂ ಸ್ವಾಗತಿಸುತ್ತೇನೆ ಎಂದು ಘೋಷಿಸಿದನು.ಆಗ ಕೌರವರಲ್ಲಿ ಯುಯುತ್ಸು ಪಾಂಡವರ ಬಳಿಗೆ ಬಂದನು.ಎರಡೂ. ಸೈನ್ಯ ಸಿದ್ಧತೆಗೊಳ್ಳತೊಡಗಿತು. ಸೇನೆಯನ್ನು ತಮಗೆ ಬೇಕಾದಂತೆ ನಾಯಕರು ನಿಲ್ಲಿಸಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top