fbpx
ಆರೋಗ್ಯ

ಕೂದಲು ಉದರೋ ಸಮಸ್ಯೆ ಆದಷ್ಟು ಬೇಗ ನಿಲ್ಬೇಕು ಅಂದ್ರೆ ಹೀಗೆ ಮಾಡ್ಬೇಕು..

ಕೂದಲು ಉದರುವ ಸಮಸ್ಯೆಗೆ ನಿವಾರಣೆ.


ಅನೇಕ ಜನರಿಗೆ ಕೂದಲು ಉದುರುವ ಸಮಸ್ಯೆ ಇರುತ್ತದೆ. ಇದು ಕೆಲವರಿಗೆ ವಂಶಪಾರಂಪರ್ಯವಾಗಿ ಬಂದಿದ್ದರೆ.ಇನ್ನು ಕೆಲವರಿಗೆ  ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ. ಹಾಗಾದರೆ ನಮ್ಮ ಕೂದಲನ್ನು ಹೇಗೆ ಕಾಪಾಡಿಕೊಳ್ಳಬಹುದು ಬೋಳುತಲೆಯಲ್ಲಿ ಮತ್ತೆ ಕೂದಲು ಚಿಗುರಿಸುವುದು ಹೇಗೆ ಎಂಬ  ಪ್ರಶ್ನೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಪರಿಹಾರ ಸರಳ  ಉಪಾಯಗಳು ಇಲ್ಲಿವೆ ನೋಡಿ

ಈರುಳ್ಳಿ:


ಇರುಳ್ಳಿಯನ್ನು ಜಜ್ಜಿ ರಸ ತೆಗೆದುಕೊಂಡು, ಬುರುಡೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಇದು ತಲೆಯಲ್ಲಿರುವ ಸತ್ತ ಕೂದಲಿಗೆ ಅಗತ್ಯವಾದ ಪೋಷಕಾಂಶ ಪೂರೈಸಲು ಸಹಾಯ ಮಾಡುತ್ತದೆ. ವಾರಕ್ಕೆ 2 ಭಾರಿ ಹೀಗೆ ಮಾಡಿ.

ಕೋಳಿ ಮೊಟ್ಟೆ:


ವಾರಕ್ಕೆ ಒಮ್ಮೆ ಹಸಿ ಕೋಳಿ ಮೊಟ್ಟೆಯ ಲೋಳೆಯನ್ನು ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಮೊಟ್ಟೆಯ ಜೊತೆಗೆ ಆಲಿವ್ ಆಯಿಲ್ ಕೂಡ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.

ಬೆಟ್ಟದ ನೆಲ್ಲಿಕಾಯಿ:


ನೆಲ್ಲಿಕಾಯಿ ಪುಡಿಯನ್ನುನಿಂಬೆ ರಸದ ಜೊತೆಗೆ ಮಿಕ್ಸ್ ಮಾಡಿ ಒಣಗಲು ಬಿಡಿ ನಂತರ ಬಿಸಿನೀರಿನಲ್ಲಿ ಶಾಂಪು ಹಾಕದೇ ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲೂ ಸೊಂಪಾಗಿ ಬೆಳೆಯುತ್ತದೆ.

ತೆಂಗಿನಕಾಯಿ ಹಾಲು:


ಮನೆಯಲ್ಲಿ ತೆಂಗಿನ ಕಾಯಿ ರುಬ್ಬುವಾಗ ಸ್ವಲ್ಪ ಪ್ರಮಾಣದ ಹಾಲು ತೆಗೆದುಕೊಂಡು ಅದಕ್ಕೆ 5 ಹನಿ ಲ್ಯಾವೆಂಡರ್ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಮಸಾಜ್ ಮಾಡಿ.ಇದು ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಧ್ಯಾನ:


ಮಾನಸಿಕ ಒತ್ತಡವಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ದಿನದಲ್ಲಿ ಸ್ವಲ್ಪ ಸಮಯ ಧ್ಯಾನಕ್ಕಾಗಿ ಮೀಸಲಿಡಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕೂದಲಿನ ಹಾಗೂ ದೇಹದ ಆರೋಗ್ಯ ಹೆಚ್ಚುತ್ತದೆ.

 

ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿದ ನಂತರ ತಲೆಯನ್ನು ಬಾಚಿಕೊಳ್ಳಿ.

ಮೆಹೆಂದಿ ಸೊಪ್ಪು


ಮೆಹೆಂದಿ ಸೊಪ್ಪನ್ನು ಕೇಸರಿ,ಮೊಸರು,ಮೊಟ್ಟೆಗಾಲ ಮೂಲಕ ಅರೆದು ತಲೆಗೆ ಹಚ್ಚುವುದರಿಂದ ಕೂದಲು ಉದರುವುದು ಕಡಿಮೆಯಾಗುವುದು.

 

ಕೂದಲನ್ನು ಸುಂದರವಾಗಿ ಕಾಣುವಂತೆ ಮಾಡಲು ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.

 

ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ,ಹರೆಳೆಣ್ಣೆ ಬಳಸಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top