fbpx
ಸಾಧನೆ

ಒಬ್ಬ ಸಾಧಾರಣ ರೈತನ ಮಗ 25,000 ಕೋಟಿ ಕಂಪನಿಗೆ ಒಡೆಯನಾಗಿ, ಸಾವಿರಾರು ಡಾಕ್ಟರ್ ಗಳಿಗೆ ಕೆಲಸ ಕೊಟ್ಟ ಕಥೆ..

25,000 ಕೋಟಿ ಕಂಪನಿಗೆ ಒಡೆಯನಾದ ಬಡವ

ಭಾರತದ ಅತ್ಯಂತ ಯಶಸ್ವೀ ಔಷಧೀಯ ಕಂಪೆನಿಗಳಲ್ಲಿ ಒಂದಾದ ಅಲ್ಕಮ್ ಲ್ಯಾಬೋರೇಟರೀಸ್ ಮಾಡಲು ದೊಡ್ಡ ಸವಾಲುಗಳನ್ನುಎದುರಿಸಿದ ಮಹಾನ್ ಸಾಧಕನ ಬಗ್ಗೆ ಈ ಕಥೆ ಇದೆ. ಅಲ್ಕಮ್ ಲ್ಯಾಬೋರೇಟರೀಸ್ ನ ಸಂಸ್ಥಾಪಕನಾದ ಸಂಪ್ರದಾ ಸಿಂಗ್ ಭಾರತದ ಬಲಿಷ್ಠ ಉದ್ಯಮಿಗಳಲ್ಲಿ ಒಬ್ಬರು. ನಾವೆಲ್ಲರೂ ಅಲ್ಕಮ್ ಲ್ಯಾಬೋರೇಟರೀಸ್ ನ ಸ್ಥಾಪಿಸಲು ಅವರು ಪಟ್ಟ ಶ್ರಮದ ಬಗ್ಗೆ ತಿಳಿದುಕೊಳ್ಳಲೇ ಬೇಕು.

ಸಂಪ್ರದಾ ಸಿಂಗ್ ರವರು ಬಿಹಾರ ರಾಜ್ಯದ ಒಂದು ಪುಟ್ಟ ಹಳ್ಳಿಯ ಕೃಷಿಕನ ಕುಟುಂಬದಲ್ಲಿ ಜನಿಸುತ್ತಾರೆ.ಚಿಕ್ಕಂದಿನಲ್ಲಿ ಅವರಿಗೆ ವೈದ್ಯರಾಗಬೇಕೆಂಬ ಮಹದಾಸೆ ಇತ್ತು. ಕುಟುಂಬದ ಆರ್ಥಿಕ ಸಮಸ್ಯೆಯ ಹೊರತಾಗಿಯೂ ಅವರ ತಂದೆ ಅವರನ್ನು ಪಾಟ್ನಾದ ಒಂದು ಕಾಲೇಜ್ ಗೆ ಪ್ರವೇಶ ಪರೀಕ್ಷೆಯನ್ನು ಬರೆಯಲು ಕಳಿಸುತ್ತಾರೆ.ಆದರೆ ಅವರು ಅಲ್ಲಿ ಯಶಸ್ಸನ್ನು ಕಾಣುವುದಿಲ್ಲ ಮುಂದೆ ಅವರು ದೃತಿಗೆಡದೆ ವೈದ್ಯ ವೃತ್ತಿಯ ಕಡೆ ಮನಸ್ಸು ಮಾಡದೆ ಪುಟ್ಟ ಬಂಡವಾಳದಲ್ಲಿ ಒಂದು ಔಷದಿ ಮಳಿಗೆಯನ್ನು 1953ರಲ್ಲಿ ಸ್ಥಾಪಿಸುತ್ತಾರೆ.
ಇವರ ಕಠಿಣ ಪರಿಶ್ರಮದಿಂದ 1960ರಲ್ಲಿ ಅನೇಕ ಫಾರ್ಮಸಿ ಕಂಪನಿಗಳಿಗೆ ವಿತರಕರಾಗಿ ನೇಮಕಗೊಂಡರು. ಔಷಧಿಗಳ ವಿತರಿಕೆಯಲ್ಲಿ ಚನ್ನಾಗಿ ಕೆಲಸ ಮಾಡುತ್ತಿದ್ದ ಇವರು ಸ್ವತಃ ಅವರೇ ಒಂದು ಕಂಪನಿಯನ್ನು ಸ್ಥಾಪನೆ ಮಾಡುವ ಮನಸ್ಸು ಮಾಡಿ 1973 ರಲ್ಲಿ ಅಲ್ಕಮ್ ಲ್ಯಾಬೋರೇಟರೀಸ್ ಎಂಬ ಒಂದು ಔಷಧಿಗಳ ತಯಾರಿಕೆಯನ್ನು ಮಾಡುವ ಕಂಪನಿಯನ್ನು ಸ್ಥಾಪನೆ ಮಾಡಿದರು.

ಇಂದು ಈ ಕಂಪನಿ ಪ್ರಪಂಚದಾದ್ಯಂತ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವ್ಯವಹಾರವನ್ನು ಮಾಡುತ್ತಿದೆ. ಈ ಕಂಪನಿಯ ವರಮಾನ 25000 ಕೋಟಿಗೂ ಮೀರಿದ್ದಾಗಿದೆ.ಮತ್ತು ಇದೆ ಕಂಪನಿಯಲ್ಲಿ ಸಾವಿರಾರು ಹೆಚ್ಚು ಮಂದಿ ಡಾಕ್ಟರ್ ಗಳು ಕೆಲಸಮಾಡುತ್ತಿದ್ದಾರೆ.
ಈಗ ಸಂಪ್ರದಾ ಸಿಂಗ್ ಅವ್ರಿಗೆ 92 ವರ್ಷ ವಯಸ್ಸು ಈ ವಯಸ್ಸಿನಲ್ಲೂ ಸಹ ಸುಮ್ಮನೆ ಕುಳಿತುಕೊಳ್ಳದೆ ನೂರು ಕೋಟಿ ಬಂಡವಾಳದ ವ್ಯವಸಾಯಕ್ಕೆ  ಸಂಬಂದಿಸಿದ ಒಂದು ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ.ಇವರು ತಮ್ಮ ರಾಜ್ಯದ ಎಷ್ಟೋ ನಿರುದ್ಯೋಗ ವಿದ್ಯಾವಂತರಿಗೆ ಕೆಲಸ ನೀಡಿ ಅವರ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top