ಈ ಐದು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
ಈ ಕೆಳಗೆ ಹೇಳಲಾಗಿರುವ 5 ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮೀ ನಿವಾಸವಾಗಿ ನೆಲೆಸಿರುತ್ತಾಳೆ ಅಂತ ಹೇಳಲಾಗಿದೆ.ಅದನ್ನು ತಿಳಿದುಕೊಳ್ಳೋಣ.ಒಂದು ವೇಳೆ ನೀವು ಧನಕ್ಕೆ ಸಂಬಂಧಿಸಿದ ವಿಷಯದಲ್ಲಿ ಚಿಂತಿತರಾಗಿದ್ದರೆ ಅದಕ್ಕೆ ಒಂದು ಉಪಾಯವಿದೆ ಅದನ್ನು ಪಾಲಿಸಿದರೆ ಧನಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿಶ್ಚಿಂತೆಯಿಂದ ಇರಬಹುದು.
ಆ ಕಾರಣಗಳು ಯಾವುವು ಅಂದರೆ ಮನೆಯಲ್ಲಿರುವ ವಾಸ್ತು ದೋಷ ಇರಬಹುದು. ಆದ್ದರಿಂದ ಮನೆಯಲ್ಲಿ ಈ 5 ವಸ್ತುಗಳನ್ನು ಇಡೋದರಿಂದ ನಿಮ್ಮ ಮನೆಯಲ್ಲಿರುವ ವಾಸ್ತು ದೋಷ ನಿವಾರಣೆಯಾಗಿ ಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳಲಾಗಿದೆ.ಬನ್ನಿ ನೋಡೋಣ ಆ ವಸ್ತುಗಳು ಯಾವುವು ಎಂದು.
1.ಕೊಳಲು.
ಮನೆಯಲ್ಲಿ ಕೊಳಲನ್ನು ಇಡೋದರಿಂದ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ.ಕೊಳಲನ್ನು ನಿಮ್ಮ ಮನೆಯಲ್ಲಿ ಇಟ್ಟು ನೋಡಿ.ಹಾಗೆ ಕೊಳಲನ್ನು ಇಡೋದರಿಂದ ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ವಾಸ ಮಾಡ್ತಾಳೆ. ಇದರಿಂದ ವಾಸ್ತು ದೋಷ ನಿವಾರಣೆಯಾಗಿ ಲಕ್ಷ್ಮಿಯೂ ನೆಲೆಸಿ ಧನಪ್ರಾಪ್ತಿಯಾಗುವ ಯೋಗವಿದೆ. ಮನೆಯಲ್ಲಿರುವ ಅನೇಕ ಅರ್ಥಿಕ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಹೊಂದಬಹುದು.
2.ನಾಟ್ಯ ಗಣಪತಿ.
ನಾಟ್ಯ ಗಣಪತಿಯನ್ನು ಮನೆಯಲ್ಲಿ ಇಟ್ಟುಕೊಳ್ಳೋದರಿಂದ ಅದು ಶುಭ ಸಂಕೇತವಾಗಿದ್ದು.ಮನೆಯಲ್ಲಿ ನೃತ್ಯ ಮಾಡುತ್ತಿರುವ ಗಣಪತಿಯನ್ನು ಮನೆಯ ಮುಖ್ಯ ದ್ವಾರದ ಮೇಲೆ ಗಣೇಶನ ದೃಷ್ಟಿ ಬೀಳುವಂತೆ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಅಂದರೆ ಮನೆಯಿಂದ ಹೊರಗಿನಿಂದ ಒಳಗೆ ಬರುವವರ ಕಣ್ಣಿಗೆ ಮೊದಲು ಈ ಮೂರ್ತಿ ಕಾಣಿಸಬೇಕು. ಹೀಗೆ ಇಟ್ಟರೆ ಮನೆಗೆ ಒಳ್ಳೆಯದಾಗುತ್ತೆ ಅನ್ನುವ ಭಾವನೆ ಮತ್ತು ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಧನಲಕ್ಷ್ಮೀ ಸಾಧಾ ನೆಲೆಸುತ್ತಾಳೆ ಎನ್ನುವ ನಂಬಿಕೆ ಇದೆ.
3.ಶಂಖ.
ಶಂಖದಲ್ಲಿ ವಾಸ್ತು ದೋಷವನ್ನು ನಿವಾರಣೆ ಮಾಡುವ ಅತ್ಯದ್ಬುತವಾದ ಶಕ್ತಿಯನ್ನು ಹೊಂದಿದೆ.ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ದೇವಿ ಲಕ್ಷ್ಮಿಯ ಜೊತೆ ಯಾರು ಶಂಖವನ್ನು ಸ್ಥಾಪನೆ ಮಾಡಿರುತ್ತಾರೋ, ಅಲ್ಲಿ ಲಕ್ಷ್ಮೀ ಸ್ವತಃ ನಿವಾಸ ಮಾಡುತ್ತಾಳೆ ಅಂತ ನಮ್ಮ ಹಿರಿಯರು ಹೇಳುತ್ತಾರೆ.ಈ ಶಂಖದಿಂದ ಹೊರಡುವ ನಾದವು ಅಂದರೆ ಆ ದ್ವನಿ ಶಂಖವನ್ನು ಊದಿದಾಗ ಬರುವ ಸದ್ದಿಗೆ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೊರಗೋಡಿಸಿ ಧನಾತ್ಮಕ ಶಕ್ತಿಯನ್ನು ತುಂಬುವ ಶಕ್ತಿ ಇದ್ದು ಮತ್ತು ಆ ದ್ವನಿಯಿಂದ ಅನೇಕ ಕೀಟಾಣುಗಳು,ವೈರಾಣುಗಳು ಕೂಡಾ ಸಾಯುತ್ತವೆ ಎಂದು ಹೇಳಲಾಗಿದೆ.
4.ಏಕಾಕ್ಷಿ ತೆಂಗಿನಕಾಯಿ .
ಏಕಾಕ್ಷಿ ತೆಂಗಿನಕಾಯಿ ಎಂದರೆ ಒಂದು ಕಣ್ಣಿರುವ ತೆಂಗಿನಕಾಯಿ ಅಂದರೆ ತೆಂಗಿನಕಾಯಿಯನ್ನು ಸುಲಿದಾಗ ಜುಟ್ಟು ಅಥವಾ ನಾರು ಎಂದು ಕರೆಯುವ ಜಾಗದಲ್ಲಿ ಕಣ್ಣುಗಳು ಇರುತ್ತವೆ. ಸಾಮಾನ್ಯವಾಗಿ ನಾವೆಲ್ಲರೂ ಮೂರು ಮತ್ತು ಎರಡು ಕಣ್ಣಿರುವ ತೆಂಗಿನಕಾಯಿಯನ್ನು ನೋಡಿರುತ್ತೇವೆ.ಆದರೆ ಒಂದು ಕಣ್ಣಿರುವ ಏಕಾಕ್ಷಿ ತೆಂಗಿನಕಾಯಿ ಕಾಣ ಸಿಗುವುದು ಬಹಳ ವಿರಳ.ಇದನ್ನು ಶ್ರೀ ಫಲ ಎಂದು ಸಹ ಕರೆಯುವರು. ಹೆಂಗಸರು ತೆಂಗಿನಕಾಯಿಯನ್ನು ಹೊಡೆಯಬಾರದು ಗಂಡಸರೇ ಒಡೆಯಬೇಕು ಎಂದು ಸಹ ಶಾಸ್ತ್ರಗಳಲ್ಲಿ ಹೇಳಲಾಗಿದೆ.ಈ ಏಕಾಕ್ಷಿ ತೆಂಗಿನಕಾಯಿಯನ್ನು ಲಕ್ಷ್ಮೀಯೂ ಇರುವ ಕಡೆ ಸ್ಥಾಪಿಸಿ ಪ್ರತಿದಿನ ಇದಕ್ಕೆ ಪೂಜೆ ಸಲ್ಲಿಸಿದರೆ ಲಕ್ಷ್ಮೀ ಕಟಾಕ್ಷ ಸದಾಕಾಲ ನಿಮ್ಮ ಮನೆಯ ಮೇಲೆ ಇರುತ್ತದೆ.ದಾರಿದ್ರ್ಯ ಲಕ್ಷ್ಮೀ ಮತ್ತು ಅಲಕ್ಷ್ಮೀ ದೂರವಾಗಿ ಧನಾತ್ಮಕ ಶಕ್ತಿಯು ಮನೆಯಲ್ಲಿ ಆವರಿಸುತ್ತದೆ.
5.ಉತ್ತರಕ್ಕೆ ಮುಖ ಮಾಡಿ ಇಟ್ಟಿರುವ ಕುಭೇರ.
ಕುಭೇರನನ್ನು ಉತ್ತರ ದಿಕ್ಕಿನ ಕಡೆಗೆ ಮುಖ ಮಾಡಿ ಲಕ್ಷ್ಮೀ ದೇವಿಯ ಜೊತೆ ಇಟ್ಟು ಪೂಜೆ ಸಲ್ಲಿಸಿದರೆ ನಿಮ್ಮ ಮನೆಯಲ್ಲಿ ಧನ ಕನಕಗಳ ಸುರಿಮಳೆಯಾಗುತ್ತೆ ಎಂದು ಹೇಳುತ್ತಾರೆ.
ನೀವು ಇವುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಿ ಲಕ್ಷ್ಮೀ ಕಟಾಕ್ಷಕ್ಕೆ ಪಾತ್ರರಾಗಿ ,ನಿಮ್ಮ ಮನೆಯಲ್ಲಿ ಸದಾ ಕಾಲ ಸುಖ ,ಶಾಂತಿ ,ಸಮೃದ್ಧಿ ನೆಲೆಸಲಿ. ಎಲ್ಲರಿಗೂ ಒಳ್ಳೆಯದಾಗಲಿ, ಲಕ್ಷ್ಮೀ ಒಲಿಯಲಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
