ಬಗೆಹರಿಯದ ಉಡುಪಿ ಕೃಷ್ಣ ಮಠ ಇಫ್ತಾರ್ ಕೂಟ ವಿವಾದ.
ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಬಾಂಧವ್ಯ ಸಹೋದರತ್ವ ಮೂಡಿಸುವ ಉದ್ದೇಶದಿಂದ ಉಡುಪಿಯ ಪೇಜಾವರ ಮಠದ ‘ವಿಶ್ವೇಶ್ವರ ತೀರ್ಥ ಸ್ವಾಮೀಜಿ’ಗಳು ‘ಇಫ್ತಾರ್’ ಕೂಟ ಆಯೋಜಿಸಿದ್ದ ಕ್ರಮ ಈಗ ಎಲ್ಲೆಡೆ ಇಷ್ಟೊಂದು ಚರ್ಚೆಗೆ ಕಾರಣವಾಗುತ್ತದೆ ಎಂದು ಯಾರೊಬ್ಬರೂ ಸಹ ಊಹಿಸಿರಲಿಲ್ಲ.
ಕಳೆದ ಭಾನುವಾರ ಮುಸ್ಲಿಂ ಸಮಾಜದವರಿಗೆ ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಏರ್ಪಡಿಸಿದ್ದರು.ಮುಸ್ಲಿಂ ಸಮುದಾಯದ ವಿನಂತಿಯ ಮೇರೆಗೆ ಮಠದ ಆವರಣದಲ್ಲಿ ಪರ್ಯಾಯ ಪೇಜಾವರ ಮಠ, ನಮಾಜ್ ಮತ್ತು ಇಫ್ತಾರ್ ಕೂಟಕ್ಕೆ ಅನುಮತಿ ನೀಡಿತ್ತು.ಅಲ್ಲಿ ಶಾಖಾಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು.ಸ್ವತಃ ಪೇಜಾವರ ಶ್ರೀಗಳೇ ಮುಸ್ಲಿಂ ಬಾಂಧವರಿಗೆ ಖರ್ಜೂರ, ಹಣ್ಣುಹಂಪಲು ನೀಡಿದ್ದರು.
ಕೃಷ್ಣಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರಿಂದ ಹಿಂದೂ ಸಮಾಜಕ್ಕೆ ಅವಮಾನವಾಗಿದೆ. ಗೋ ಭಕ್ಷಕರಿಗೆ ಮಠದ ಆವರಣದಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಕೆಲವು ಹಿಂದೂ ಪರ ಸಂಘಟನೆಗಳು ಇದನ್ನು ವಿರೋಧಿಸಿದರೆ ಇನ್ನೂ ಕೆಲವರು ದೇವರು ಒಬ್ಬನೇ ನಾಮ ಹಲವು. ಅಲ್ಲಾಹೂ, ಕೃಷ್ಣ ಬೇರೆ ಬೇರೆಯಲ್ಲ ಅನ್ನುವ ಸಂದೇಶವನ್ನು ಮತ್ತೊಮ್ಮೆ ಪೇಜಾವರ ಶ್ರೀಗಳು ಸಾರಿದ್ದಾರೆ ಎಂದು ಪೇಜಾವರ ಶ್ರೀಗಳ ಈ ಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
ಇಫ್ತಾರ್ ಘಟನೆ ನಡೆದು ನಾಲ್ಕು ದಿನವಾದರೂ, ಅದರ ಕಾವು ಇನ್ನೂ ಆರಿಲ್ಲ.ಎಲ್ಲಾರು ಸಕಾರಾತ್ಮಕವಾಗಿ ಯೋಚಿಸಿದ್ದರೆ ಈ ವಿಷಯವು ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ. ಅತ್ತ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ರಾಜಾಕೀಯ ಲಾಭಗಳನ್ನು ಪಡೆಯಲು ವಿವಿಧ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಈ ವಿವಾದವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಮುಂದೆ ಈ ವಿವಾದವು ಯಾವ ರೂಪ ಪಡೆದುಕೊಳ್ಳಲಿದೆ ಎಂದು ಕಾಡು ನೋಡಬೇಕಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
