fbpx
ಆರೋಗ್ಯ

ಆರೋಗ್ಯ ಅಂತ ಬಂದಾಗ ಹೆಂಗೆಲ್ಲಾ ಅರಿಶಿನದ ಉಪಯೋಗ ಪಡೆಯಬಹುದು ಅನ್ನೋದನ್ನ ಹೇಳ್ತೀವಿ ಕೇಳಿ.

ಬಹುಶಃ ಇದರ ಬಣ್ಣ ಹೀಗಿರೋದ್ರಿಂದಾನೋ ಏನೋಪ್ಪಾ ಇದಕ್ಕೆ ಅರಿಶಿನ ಅಂತಾನೇ ಹೆಸರು ಬಂದಿರೋದು. ಆದರೆ ಈ ಅರಿಶಿನ ಕೂಡ ಶುಂಠಿ ಜಾತಿಗೆ ಸೇರಿದ್ದು ನಮ್ಮ ದೇಶದಲ್ಲಂತೂ ಅಡುಗೆ ಅಂದ್ರೆ ಅರಿಶಿನ ಇರಲೇಬೇಕು.ಎಲ್ಲಾ ಸಾಂಬಾರ್ ಪದಾರ್ಥದ ಜೊತೆಗೆ ಈ ಅರಿಶಿಣಕ್ಕೂ ಒಳ್ಳೆ ಸ್ಥಾನವನ್ನೇ ಕೊಟ್ಟಿದಾರೆ. ಸಂಶೋದನೆಗಳು ಹೇಳೋ ಪ್ರಕಾರ ಈ ಅರಿಶಿನದಲ್ಲಿರೋ ಕುರ್ಕುಮಿನ್ ಅನ್ನೋ ಅಂಶ ಔಶಧೀಯ ಗುಣವನ್ನ ಹೊಂದಿದೆಯಂತೆ. ಇದೇ ಕಾರಣದಿಂದಾನೆ ಬಹುಶಃ ಆಯುರ್ವೇದದಲ್ಲಿ ಅರಿಶಿಣವನ್ನ ಹೆಚ್ಚಾಗಿ ಬಳಸ್ತಾರೆ.

ಈ ಅರಿಶಿನಕ್ಕೆ ವೇದ ಪುರಾಣದಲ್ಲೂ ತುಂಬಾನೇ ಒಳ್ಳೆಯ ಹೆಸರಿದೆ. ಹೋಮ, ಯಜ್ಞ, ಯಾಗಗಳಲ್ಲಿ, ಪೂಜೆಗಳಲ್ಲಿ ಅರಿಶಿನವನ್ನ ಬಳಸ್ತಾರೆ. ಹೋಮದಲ್ಲಿ ಇದನ್ನ ಬಳಸೋದ್ರಿಂದ ಅದರ ಹೊಗೆ ತುಂಬಾ ಆರಾಮದಾಯಕವಾದಂತಹ ಅನುಭವ ಕೊಡುತ್ತೆ ಅಂತಾರೆ.

ಆರೋಗ್ಯದ ವಿಷಯಕ್ಕೆ ಬಂದರೆ ಹೇಗೆಲ್ಲಾ ಅರಿಶಿನದ ಉಪಯೋಗ ಪಡೆಯಬಹುದು ಅನ್ನೋದನ್ನ ಹೇಳ್ತೀವಿ ಕೇಳಿ.

1. ಆಯುರ್ವೇದ ಪದ್ಧತಿಯಲ್ಲಿ ಈ ಅರಿಶಿನದ ಉಸಿರಾಟ ಸಮಸ್ಯೆಗೆ, ಜಾಂಡೀಸ್ಗೆ, ಹೊಟ್ಟೆಗೆ ಹಿತವಾಗಿರೋ ಹಾಗೆ ಮಾಡೋಕೆ, ಉರಿಯೂತದ ಸಮಸ್ಯೆ ಬಗೆಹರಿಸೋದಕ್ಕೆ ಬಳಸ್ತಾರೆ.

2. ಬಿಸಿಹಾಲಿಗೆ ಅರಿಶಿನ ಹಾಕಿ ಕುಡೀಯೋದ್ರಿಂದ ಗಂಟಲಉರಿ ಗಂಟಲಕೆರೆತ ಕಡಿಮೆ ಆಗುತ್ತೆ.

3. ಚರ್ಮದ ಯಾವುದೇ ತರದ ಸಮಸ್ಯೆ ಇದ್ದರೂ ಅದಕ್ಕೆ ಅರಿಶಿನ ನಿಜವಾಗಿಯೂ ಒಳ್ಳೇ ಮದ್ದು. ಅಷ್ಟೇ ಯಾಕೆ ಚರ್ಮದ ಕ್ಯಾನ್ಸರ್ ಗುಣಪಡಿಸೋದಕ್ಕೂ ಕೂಡ ಇದನ್ನ ಬಳಸ್ತಾರೆ.


4. ಮುಖವನ್ನ ಸುಂದರವಾಗಿ ಇಡೋದಕ್ಕೆ ಅಂತ ಮುಖಕ್ಕೆ ಫೇಸ್ ಪ್ಯಾಕ್ ಹಾಕ್ಕೋಳ್ಳೋರು ಗಮನಿಸ್ಲೇಬೇಕು. ಅರಿಶಿನ , ಮೊಸರು, ಜೇನುತುಪ್ಪ ಎಲ್ಲವನ್ನೂ ಬೆರೆಸಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಲ್ಲಿ ಮುಖವನ್ನ ತೊಳೆಯಬೇಕು. ಇದರಿಂದ ಮುಖದ ಹೊಳಪು ಹೆಚ್ಚುತ್ತದೆ.


5. ಮೊಡವೆ ಸಮಸ್ಯೆ ಇರುವವರು ಅಂಗಡಿಗಳಲ್ಲಿ ಸಿಗುವ ಸೋಪು ಕ್ರೀಮು ಬಳಾಸೋ ಮೊದಲು ಹೀಗೆ ಮಾಡಿ. ಅರಿಶಿನದ ಜೊತೆ ಶ್ರೀಗಂಧದ ಎಣ್ಣೆ ಇಲ್ಲವಾದರೆ ಶ್ರೀಗಂಧದ ಪುಡಿ ಬೆರೆಸಿ ಮೊಡವೆ ಮೇಲೆ ಹಚ್ಚಿಕೊಂಡು ಸ್ವಲ್ಪ ಹೊತ್ತಾದಮೇಲೆ ಮುಖ ತೊಳೀಬೇಕು.


6. ಮುಖದ ಮೇಲಿರೋ ಕೂದಲು ಕಡಿಮೆ ಮಾಡೋದಕ್ಕೆ ವಯಸ್ಸಾದ ಹಾಗೆ ಚರ್ಮ ಸುಕ್ಕಾಗೋದನ್ನ ತಪ್ಪಿಸೋದಕ್ಕೆ ಬರೀ ಅರಿಶಿನ ಮುಖಕ್ಕೆ ಹಚ್ಚೋದು ಸಂಪ್ರದಾಯವಾಗಿ ನಮ್ಮ ದೇಶದ ಹೆಂಗಸರು ಶತಶತಮಾನಗಳಿಂದ ಪಾಲಿಸ್ತಾ ಇರೋ ವಿಷ್ಯ ಎಲ್ಲಾರಿಗೂ ತಿಳಿದೇ ಇದೆ.

7. ಗರ್ಭಿಣಿಯರು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸೋದಕ್ಕೆ ಅರಿಶಿನದ ಜೊತೆ ಮೊಸರು ಸೇರಿಸಿ ಸ್ಟ್ರೆಚ್ ಮಾರ್ಕ್ಸ್ ಮೇಲೆ ಹಚ್ಚಿ 10 – 15 ನಿಮಿಷ ಆದನಂತರ ಸ್ನಾನ ಮಾಡುವುದು ಉತ್ತಮ.

8. ಅರಿಶಿನದ ಜೊತೆಗೆ ಕಡ್ಲೆಹಿಟ್ಟನ್ನು ಸೇರಿಸಿ ಮೈಕೈಗೆಲ್ಲಾ ಹಚ್ಚಿ ಆನಂತರ ಸ್ನಾನ ಮಾಡುವ ಅಭ್ಯಾಸವೂ ಕೂಡ ಚರ್ಮದ ಆರೋಗ್ಯಕ್ಕೆ ಚೆನ್ನಾಗಿರುತ್ತದೆ.


9. ಹಲ್ಲು ನೋವು ವಸಡಿನ ಸಮಸ್ಯೆ ಇದ್ದಲ್ಲಿ ಅರಿಶಿನದ ಜೊತೆ ಕಲ್ಲುಪ್ಪು ಮತ್ತೆ ಸಾಸಿವೆ ಎಣ್ಣೆ ಕಲಸಿ ನೋವಿರುವ ಜಾಗಕ್ಕೆ ದಿನಕ್ಕೆ ಮೂರು ಸಲದಂತೆ ಮಾಲೀಶ್ ಮಾಡಿ ಬೆಚ್ಚನೆ ನೀರಿಂದ ಬಾಯಿ ಮುಕ್ಕಳಿಸಿ ನೋಡಿ ನೋವೆಲ್ಲಾ ಮಾಯಾ ಆಗಿ ಬಿಡುತ್ತೆ. ಪ್ರತಿದಿನ ಇದೇ ನಿಯಮ ಪಾಲಿಸಿ ಹಲ್ಲುಜ್ಜುವುದು ಇನ್ನೂ ಒಳ್ಳೆಯದು.

10. ಸಿಕ್ಕಾಪಟ್ಟೆ ತಲೆ ನೋವು , ನೆಗಡಿ, ಗಂಟಲು ನೋವು, ಗಂಟಲು ಕೆರೆತ ಅಂತ ಹಿಂಸೆ ಪಡೋರು ಅರಿಶಿನದ ಕೊಂಬನ್ನ ದೀಪದಲ್ಲಿ ಸುಟ್ಟು ಅದರ ವಾಸನೆ ತೆಗೆದುಕೊಳ್ಳುವುದರಿಂದ ಬಹಳ ಬೇಗನೆ ಸಮಸ್ಯೆ ದೂರವಾಗುತ್ತದೆ.


11. ನಾವು ಚಿಕ್ಕಮಕ್ಕಳಾಗಿದ್ದಾಗ ಎದ್ದು ಬಿದ್ದು ಕೈ ಕಾಲು ಗಾಯ ಮಾಡಿಕೊಂಡಾಗಲೆಲ್ಲಾ ನಮ್ಮ ಅಜ್ಜಿ ಅರಿಶಿನ ಹಚ್ಚಿ ಸರಿಹೋಗುತ್ತೇಳೋ ಏನಾಗಿಲ್ಲ ಅಂತಿದ್ರು ನೆನಪಿದ್ಯಾ!? ವಿಷ್ಯ ಏನಪ್ಪಾ ಅಂದ್ರೆ ಈ ಅರಿಶಿನಕ್ಕೆ ಹಾಗೆ ಗಾಯ ವಾಸಿ ಮಾಡೋ ಗುಣ ಖಂಡಿತ ಇದೆ.

12. ಸಂಧಿವಾತದಿಂದ ನರಳೋರು ಪ್ರತಿದಿನ ದಿನಕ್ಕೆ ಮೂರು ಸಾಲದ ಹಾಗೆ ಅರಿಶಿನದ ಪುಡಿ ತೆಗೆದುಕೊಳ್ಳೋದ್ರಿಂದ ಸಮಸ್ಯೆ ದೂರವಾಗುತ್ತದೆ.

ಅರಿಶಿಣವನ್ನ ” ಭಾರತದ ಕೇಸರಿ” ಅಂತಲೇ ಕರೀತಾರೆ ಇದರ ಶಕ್ತಿ ಏನು ಅಂತ ಈಗ ಗೊತ್ತಾಯ್ತಲ್ಲಾ!?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top