ಕ್ಯಾಪ್ಸಿಕಂ(ದೊಡ್ಡ ಮೆಣಸಿನ ಕಾಯಿ)ಯಿಂದಾಗುವ ಆರೋಗ್ಯಕಾರಿ ಪ್ರಯೋಜನಗಳು.
ಸಾಮಾನ್ಯವಾಗಿ ನಾವೆಲ್ಲರೂ ಕ್ಯಾಪ್ಸಿಕಂ(ದೊಡ್ಡ ಮೆಣಸಿನಕಾಯಿಯನ್ನು) ಅಡುಗೆಯಲ್ಲಿ ರುಚಿ ಹೆಚ್ಚಿಸಲು ಮತ್ತು ಆಕರ್ಷಕವಾಗಿ ಕಾಣಲು ಬಳುಸುತ್ತೇವೆ.ಆದರೆ ಈ ಕ್ಯಾಪ್ಸಿಕಂನನ್ನು ಬಳಸುವುದು ಆರೋಗ್ಯಕರವಾಗಿ ತುಂಬ ಪ್ರಯೋಜನಕಾರಿಯಾದುದು ಎಂಬುದು ಎಷ್ಟೋ ಜನಕ್ಕೆ ತಿಳಿದೇ ಇಲ್ಲ. ಅಡುಗೆಯ ಹೊರತಾಗಿ ಕ್ಯಾಪ್ಸಿಕಂ ನ ಆರೋಗ್ಯಕರ ಪ್ರಯೋಜನವನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ.
1.ಜೀರ್ಣಾಂಗ ಸಂಬಂಧಿಸಿದ ತೊಂದರೆಗಳ ನಿವಾರಣೆ :
ದೊಡ್ಡ ಮೆಣಸಿನಕಾಯಿಯು ಜಠರ ಮತ್ತು ಕರುಳುಗಳಿಗೆ ಸಂಬಂಧಪಟ್ಟ ಕಾಯಿಲೆಗಳಾದ ಹೊಟ್ಟೆ ಹುರಿ, ಹೊಟ್ಟೆನೋವು, ಅತಿಸಾರ ಹಾಗೂ ಹೊಟ್ಟೆ ಸೆಳೆತಗಳ ತೊಂದರೆಗಳನ್ನು ಗುಣಪಡಿಸಲು ಸಹಾಯಮಾಡುತ್ತದೆ.ಇದು ಜೀರ್ಣಾಂಗ ಕ್ರಿಯೆಯು ಸುಲಭವಾಗಿ ನಡೆಯುವಂತೆ ಮಾಡುತ್ತದೆ.
2.ಮಧುಮೇಹದ ನಿಯಂತ್ರಣೆ:
ಕ್ಯಾಪ್ಸಿಕಂನಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಅಂಶಗಳು ಕಡಿಮೆ ಇರುತ್ತವೆ, ಹಾಗಾಗಿ ಮಧುಮೇಹಿಗಳು ಇದನ್ನು ಹೆಚ್ಚಾಗಿ ಬಳಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.
3.ಬೊಜ್ಜನ್ನು ಕರಗಿಸಲು:
ಕ್ಯಾಪ್ಸಿಕಂನಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಂಶಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಇದನ್ನು ಕ್ರಮೇಣವಾಗಿ ಸೇವಿಸಿದರೆ ದೇಹದ ಬೊಜ್ಜಿನ ಪ್ರಮಾಣವನ್ನು ಕಡಿಮೆಮಾಡಿಕೊಳ್ಳಬಹುದು.
4.ನೋವುಗಳ ನಿವಾರಕ:
ಕ್ಯಾಪ್ಸಿಕಂ ಕೇನ್(cane)ಎಂಬ ಅಂಶವಿದ್ದು ಅದು ನೋವು ನಿವಾರಣೆಗೆ ಬಹಳ ಸಹಕಾರಿಯಾಗಿದೆ. ಕ್ಯಾಪ್ಸಿಕಂ ನನ್ನ ರುಬ್ಬಿಕೊಂಡು ನೋವಾಗುತ್ತಿರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗಬಹುದು.
5.ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ:
ಇದರಲ್ಲಿರುವ ಕೇನ್ ಎಂಬ ಅಂಶವು ಬೊಜ್ಜನ್ನು ಕರಗಿಸಲು ಸಹಕಾರಿಯಾಗಿ ರಕ್ತ ಪರಿಚಲನೆಯನ್ನು ಸರಾಗವಾಗಿ ನಡೆಯಲು ಸಹಕಾರಿಯಾಗುತ್ತದೆ.ರಕ್ತ ಪರಿಚಲನೆಯು ಸರಾಗವಾಗಿ ನಡೆಯುದರಿಂದ ಹೃದಯದ ಆರೋಗ್ಯವು ಸಹ ಹೆಚ್ಚಾಗುತ್ತದೆ.
6.ಕ್ಯಾನ್ಸರ್ ತಡೆಗಟ್ಟುವಿಕೆ:
ಕ್ಯಾಪ್ಸಿಕಂ ನಲ್ಲಿರುವ ಜೀವಸತ್ವಗಳು ಕ್ಯಾನ್ಸರ್ ರೋಗಗಳು ಬರದಂತೆ ಮಾಡುವ ಅಂಶಗಳನ್ನು ಹೊಂದಿದೆ. ನೀವು ಸೇವಿಸುವ ಊಟದಲ್ಲಿ ಪ್ರತಿನಿತ್ಯ ಅಗತ್ಯದ ಪ್ರಮಾಣದಲ್ಲಿ ಕ್ಯಾಪ್ಸಿಕಂ ನನ್ನ ಸೇವಿಸುವುದರಿಂದ ಕ್ಯಾನ್ಸರ್ ರೋಗವು ಬರದಂತೆ ತಡೆಗಟ್ಟಬಹುದು.
7.ರಕ್ತದ ಒತ್ತಡದ ನಿವಾರಣೆ:
ದೊಡ್ಡ ಮೆಣಸಿನ ಕಾಯಿಯಲ್ಲಿ ಚಿಕ್ಕ ಮೆಣಸಿನಕಾಯಿಗಳಿಗಿಂತ ಕಡಿಮೆ ಕ್ಯಾಲೋರಿಗಳು ಇರುವುದರಿಂದ ರಕ್ತದೊತ್ತಡ ಇರುವ ರೋಗಿಗಳು ದೊಡ್ಡ ಮೆಣಸಿನ ಕಾಯಿಯನ್ನು ತಮ್ಮ ಆಹಾರದಲ್ಲಿ ಬಳಸಬಹುದು.
ಈ ಆರೋಗ್ಯ ಮಾಹಿತಿಯು ನಿಮಗೆ ಮಾರ್ಗದರ್ಶಿಯಾಗಿದೆ.ಇದನ್ನು ನಿಮ್ಮ ವೈದ್ಯರ ಸಲಹೆಯ ಅನುಗುಣವಾಗಿ ಪಾಲನೆ ಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
