ನಿಮ್ಮ ಕಿಡ್ನಿಗಳನ್ನ ಹಾಳು ಮಾಡುವ 7 ಕೆಟ್ಟ ಚಟಗಳು
ಕೆಲವೊಂದು ನಿರ್ದಿಷ್ಟ ಹವ್ಯಾಸಗಳು ನಮ್ಮ ಮೂತ್ರಪಿಂಡಗಳಿಗೆ (ಕಿಡ್ನಿ) ಹಾನಿ ಮಾಡುತ್ತವೆಯೆಂದು ನಿಮಗೆ ತಿಳಿದಿದಿಯೇ? ನಾವು ಆರೋಗ್ಯಕರವಾಗಿರಬೇಕು ಎಂದಾದಲ್ಲಿ ನಮ್ಮ ಮೂತ್ರ ಪಿಂಡಗಳು ಆರೋಗ್ಯವಾಗಿರಬೇಕು. ಒಂದು ವೇಳೆ ಮೂತ್ರಪಿಂಡಗಳು ಏನಾದರು ಹಾನಿಗೊಳಗಾದಲ್ಲಿ, ನಮ್ಮ ಆರೋಗ್ಯವು ನಮಗೆ ತಿಳಿಯದಂತೆ ಅಪಾಯಗಳಿಗೆ ಸಿಲುಕುವುದು ಖಂಡಿತ.ಇದೇ ಕಾರಣಕ್ಕಾಗಿಯೇ ನಾವು ಮೂತ್ರಪಿಂಡಗಳನ್ನು ಅಪಾಯಕ್ಕೆ ಸಿಲುಕಿಸುವ ಹವ್ಯಾಸಗಳ ಕುರಿತಾಗಿ ಎಚ್ಚರವಹಿಸಬೇಕು. ನಿಮ್ಮ ಕಿಡ್ನಿಗಳನ್ನು ಹಾಳುಮಾಡುವ ಕೆಟ್ಟ ಚಟಗಳನ್ನು ಈ ಕೆಳಗೆ ಓದಿ ತಿಳಿದುಕೊಳ್ಳಿ.
*ದೇಹಕ್ಕೆ ಸಾಕಾಗುವಷ್ಟು ನೀರನ್ನು ಕುಡಿಯದೆ ಇರುವುದು:
ನಿಮ್ಮ ಕಿಡ್ನಿಯು ಮುಖ್ಯವಾಗಿ ರಕ್ತವನ್ನು ಶೋಧಿಸಿ ವಿಷ ಮತ್ತು ತ್ಯಾಜ್ಯ ವಸ್ತುಗಳನ್ನು ನಿರ್ಮೂಲನೆ ಮಾಡುವ ಕೆಲಸವನ್ನು ಮಾಡುವುದರಿಂದ
ದೇಹಕ್ಕೆ ಅವಶ್ಯಕವಾಗಿ ಬೇಕಾಗುವ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
*ನೀವು ಸೇವಿಸುವ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಕಿಡ್ನಿಗಳ ಮೇಲೆ ಪರಿಣಾಮಗಳನ್ನೂ ಬೀರುತ್ತದೆ.
* ಮಧ್ಯಪಾನ ಸೇವಿಸುವುದರಿಂದ ಕೇವಲ ಕರುಳು ಮಾತ್ರ ಹಾನಿಗೊಳಗಾಗದೆ ಇದರ ಜೊತೆಗೆ ನಿಮ್ಮ ಮೂತ್ರಪಿಂಡಗಳನ್ನು ಸಹ ಹಾನಿ
ಮಾಡುತ್ತವೆ.
*ಧೂಮಪಾನವು ಸಹ ಮೂತ್ರಪಿಂಡಗಳಿಗೆ ಹಾನಿಕಾರಕವಾದ ಹವ್ಯಾಸವಾಗಿರುತ್ತದೆ. ಇದು ರಕ್ತಪರಿಚಲನೆಗೆ ಅಡಚಣೆಯನ್ನುಂಟು ಮಾಡುತ್ತದೆ.
ಯಾವಾಗ ರಕ್ತ ಪರಿಚಲನೆಯು ಅಡ್ಡಿಗೊಳಗಾಗುತ್ತದೆಯೋ, ಆಗ ಮೂತ್ರಪಿಂಡಗಳು ಭಾದೆಗೊಳಗಾಗುತ್ತವೆ.
*ಒಂದು ದಿನದಲ್ಲಿ ಒಂದಕ್ಕಿಂತ ಅಧಿಕ ಸೋಡಾ(ಪೆಪ್ಸಿ ,ಕೋಲಾ.)ಗಳನ್ನು ಸೇವಿಸುವ ಅಭ್ಯಾಸ ನಿಮಗೆ ಇದ್ದಲ್ಲಿ, ಬಹುಬೇಗ ನಿಮ್ಮ ಮೂತ್ರಪಿಂಡಗಳು
ಕಳೆದುಕೊಳ್ಳಬೇಕಾಗುತ್ತದೆ.
*ನಿಮ್ಮ ಶೌಚದ ಹವ್ಯಾಸಗಳು ಸಹ ನಿಮ್ಮ ಮೂತ್ರಪಿಂಡಗಳ ಮೇಲೆ ಪ್ರಭಾವ ಬೀರುತ್ತವೆ. ಒಂದು ವೇಳೆ ನಿಮಗೆ ನಿಮ್ಮ ಪ್ರಕೃತಿ ಕರೆಯನ್ನು
ಮುಂದೂಡುವ ಅಭ್ಯಾಸವಿದ್ದಲ್ಲಿ, ಅದು ನಿಜಕ್ಕು ನಿಮಗೆ ಅಪಾಯವನ್ನು ತಂದೊಡ್ಡುವುದರಲ್ಲಿ ಯಾವುದೇ ಸಂಶಯವಿಲ್ಲ.
*ನಿದ್ರೆಯ ಕೊರತೆಯು ಸಹ ಮೂತ್ರಪಿಂಡಗಳನ್ನು ಹಾಳು ಮಾಡುತ್ತವೆ.ಕನಿಷ್ಠ 8 ಗಂಟೆಗಳ ಅಡೆತಡೆಗಳಿಲ್ಲದ ನಿದ್ರೆಯನ್ನು ನೀವು ಮಾಡುತ್ತಿದ್ದೀರಾ ಎಂದು
ಪರೀಕ್ಷಿಸಿಕೊಳ್ಳಿ. ಏಕೆಂದರೆ ಮೂತ್ರಪಿಂಡಗಳು ನಿದ್ದೆಯಲ್ಲಿ ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತವೆ.
*ನೀವು ಸೇವಿಸುವ ಆಹಾರದಲ್ಲಿ ಜೀವಸತ್ವಗಳ ಕೊರತೆಯು ಸಹ ನಿಮ್ಮ ಮೂತ್ರಪಿಂಡ ಹಾನಿಯಾಗುವುದಕ್ಕೆ ಒಂದು ಕಾರಣವಾಗಿದೆ.ನೀವು ಹೆಚ್ಚಾಗಿ
ತಾಜಾ ತರಕಾರಿಗಳು ಹಣ್ಣುಗಳನ್ನು ಸೇವಿಸಿದರೆ ಒಳ್ಳೇದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
