ಮದುವೆಯಾಗಿ ಗಂಡನ ಮನೆಗೆ ಬರುವ ವಧು ಸೇರು ಅಕ್ಕಿ ಒದ್ದು ಮನೆ ಒಳಗೆ ಕಾಲಿಡುವುದು ಏಕೆ ?
ಹಿಂದುಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಆಚರಣೆಗಳು ರೂಢಿಯಲ್ಲಿವೆ. ಅವುಗಳಲ್ಲಿ ಒಂದು ಮದುಮಗಳು ವರನ ಮನೆಯೊಳಗೆ ಮೊದಲ ಬಾರಿ ತನ್ನ ಪಾದವನ್ನು ಹೇಗೆ ಹಾಕಬೇಕೆಂಬುದನ್ನು ಸಂಬಂಧಿಸಿದೆ.
ಮದುಮಗಳು ವರನ ಮನೆಗೆ ಮೊದಲ ಬಾರಿಗೆ ತನ್ನ ಪಾದವನ್ನು ಇಡುವಾಗ ಅವಳು ಅಕ್ಕಿಯಿಂದ ತುಂಬಿದ ಸೇರನ್ನು ನಿಧಾನವಾಗಿ ಕಾಲಿನಿಂದ ಒದೆಯುತ್ತಾಳೆ. ಅಕ್ಕಿಯನ್ನು ಮನೆಯೊಳಗೆ ಚಲ್ಲುವ ರೀತಿಯಲ್ಲಿ ಅವಳ ಬಲ ಪಾದಗಳಿಂದ ಇದನ್ನು ಮಾಡಲಾಗುತ್ತದೆ.
ಮದುಮಗಳಿಂದ ಈ ಆಚರಣೆಯನ್ನು ಮಾಡಿಸುವ ಉದ್ದೇಶವೆಂದರೆ ಮದುಮಗಳನ್ನು ಇಲ್ಲಿ ಲಕ್ಷ್ಮಿಗೆ ಹೋಲಿಕೆ ಮಾಡುತ್ತಾರೆ.ಅಕ್ಕಿ ನಮ್ಮ ಆಹಾರ ಮಾತ್ರವಲ್ಲ ಸಂಪತ್ತು ಸಮೃದ್ಧತೆಯ ಸಂಕೇತ. ಅದರ ಬೆಳ್ಳಗಿನ ಬಣ್ಣ ಪರಿಶುದ್ಧವಾದ ಮನಸಿನ ಸಂಕೇತವಾಗಿದೆ.
ಆದ್ದರಿಂದ ಮನೆ ಸೊಸೆ( ಲಕ್ಷ್ಮಿ) ಮೊದಲಬಾರಿಗೆ ಮನೆಯೊಳಗೆಬರುವ ಮುನ್ನ ಸೇರಕ್ಕಿಯನ್ನು ಒದ್ದು ಮನೆ ತುಂಬಾ ಅಕ್ಕಿ(ಸಂವೃದ್ದತೆ) ಚೆಲ್ಲುವಂತೆ ಸಮೃದ್ಧತೆ ತನ್ನ ಗಂಡನ ಮನೆಯೊಳಗೆ ತುಂಬಿ ತುಳುಕುತ್ತಿರಲಿ ಎಂಬ ಮನೋಬಾವದಿಂದ ಮದುಮಗ ಸಾಕ್ಷಾತ್ ಲಕ್ಷ್ಮಿಯೇ ಮನೆ ಪ್ರವೇಶ ಮಾಡುವಂತೆ ಗಂಡನ ಮನೆಯನ್ನು ಪ್ರವೇಶ ಮಾಡುತ್ತಾಳೆ.
ಮನೆ ಪ್ರವೇಶ ಮಾಡುತ್ತಿರುವ ಸೊಸೆಯು ಒಳ್ಳೆ ಗುಣ ಮತ್ತು ನಡತೆಗಳನ್ನು ಹೊತ್ತು ಮನೆ ಪ್ರವೇಶಿಸಬೇಕು ಆಕೆಯ ಒಳ್ಳೆಯ ಗುಣದಿಂದ ಮನೆಯಲ್ಲಿ ಕೆಟ್ಟ ಭಾವನೆಗಳು ದೂರವಾಗಬೇಕು.ಧವಸ ಧಾನ್ಯಗಳಿಂದ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತಿರಬೇಕು ಎಂದು ಹಿರಿಯರು ಇಂತಹದ್ದೊಂದು ಉತ್ತಮ ಕ್ರಮವನ್ನು ಹುಟ್ಟು ಹಾಕಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
