fbpx
ಇತರೆ

ಮಹಾಭಾರತ ಕಾಲದಿಂದಲೂ ಉಡುಪಿ ಹೊಟೆಲ್ಗಳು ಫೇಮಸ್ ಯಾಕೆ ಅಂತ ನೀವೇ ಓದಿ..

ಕುರುಕ್ಷೇತ್ರದ ಯೋಧರಿಗೆ ಊಟ ನೀಡುತ್ತಿದ್ದ ಉಡುಪಿಯ ರಾಜ.


ಪುರಾತನ ಭಾರತದ ಮಹಾಕಾವ್ಯಗಳಲ್ಲಿ ಮಹಾಭಾರತವು ಒಂದು. ಇದು ಒಂದು ಲಕ್ಷಕ್ಕಿಂತ ಹೆಚ್ಚು ಶಬ್ದಕೋಶಗಳನ್ನು ಹೊಂದಿದೆ.ಮಹಾಬಾರತದ ಕುರುಕ್ಷೇತ್ರ ಪ್ರಸಂಗವು ತುಂಬಾ ಜನಪ್ರಿಯವಾದುದು.
ಕುರುಕ್ಷೇತ್ರದ ಬಗ್ಗೆ ತಿಳಿಯದ ಅನೇಕ ವಿಷಯಗಳು ಇವೆ ಅದರಲ್ಲಿ ಉಡುಪಿರಾಜ ಮತ್ತು ಕುರುಕ್ಷೇತ್ರ ಯುದ್ಧಕ್ಕೆ ಸಂಭಂದಿಸಿದ ವಿಷಯವು ಒಂದು.ಅದನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಎಷ್ಟೋ ಜನರಿಗೆ ಈ ಕಥೆಯ ಬಗ್ಗೆ ತಿಳಿದಿಲ್ಲ. ಐದು ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರ ಯುದ್ಧವು ಪಾಂಡವರು ಹಾಗು ಕೌರವರ ಮಧ್ಯೆ ನಡೆದಾಗ ಹಲವು ರಾಜ್ಯಗಳಿಂದ ಆಯಾ ರಾಜ್ಯಗಳ ಆಳ್ವಿಕೆಯನ್ನು ಮಾಡುತ್ತಿದ್ದ ಎಲ್ಲಾ ರಾಜರುಗಳು ನೂರಾರು ಸಂಖ್ಯೆಯಲ್ಲಿ ಪಾಂಡವ ಅಥವ ಕೌರವರ ಕಡೆ ಸೇರಿ ಯುದ್ಧ ಮಾಡಲು ಸಜ್ಜಾದರು. ಆದರೆ ಆ ಸಮಯದಲ್ಲಿ ಉಡುಪಿಯನ್ನು ಆಳ್ವಿಕೆ ಮಾಡುತ್ತಿದ್ದ ರಾಜನು ಯುದ್ಧದಲ್ಲಿ ಯಾರಪರವೂ ಸೇರದೆ ತಟಸ್ಥನಾದನು.ಇದಕ್ಕೆ ಅವನು ಕೃಷ್ಣನ ಒಪ್ಪಿಗೆಯನ್ನೂ ಸಹ ಪಡೆಡಿದ್ದನು. ಯುದ್ಧದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಅದರ ಬದಲಾಗಿ ಈ ಮಹಾಯುದ್ಧದ ಸಮಯದಲ್ಲಿ ಹೋರಾಡುವ ಯೋಧರಿಗೆ,ಸೈನಿಕರಿಗೆ, ಕ್ಷತ್ರಿಯರಿಗೆ ಅವಾಶ್ಯಕವಾಗಿ ಬೇಕಾಗುವ ಆಹಾರ ಒದಗಿಸುತ್ತೇನೆ ಎಂದು ಕೃಷ್ಣನಲ್ಲಿ ಕೇಳಿ, ಒಪ್ಪಿಗೆಯನ್ನು ಪಡೆದನು.

ಕುರುಕ್ಷೇತ್ರ ಯುದ್ಧವು ಹದಿನೆಂಟು ದಿನಗಳ ಕಾಲ ನಡೆಯುತ್ತದೆ. ಆ ಸಂಧರ್ಭದಲ್ಲಿ ಉಡುಪಿಯ ರಾಜನು ಯುದ್ಧದ ಸಂಧರ್ಭದಲ್ಲಿ ಎಲ್ಲಾ ಸೈನಿಕರಿಗೆ ಆಹಾರವನ್ನು ಪೂರೈಸುತ್ತಿದ್ದನು.ಅಲ್ಲದೆ ಕುರುಕ್ಷೇತ್ರ ಮಹಾಯುದ್ಧದ ವೇಳೆಯಲ್ಲಿ ಶ್ರೀ ಕೃಷ್ಣ ಮತ್ತು ಯುಧಿಷ್ಟಿರರಿಗೆ ಸ್ವತಃ ಉಡುಪಿ ರಾಜನೇ ಆಹಾರ ಬಡಿಸುತ್ತಿದ್ದರು. ಇಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ವಿಚಾರವೊಂದಿತ್ತು. ಈ ಆಕರ್ಷಕ ಸಂಗತಿ ಏನು ಎಂದರೆ ಉಡುಪಿಯ ರಾಜನು ಪ್ರತಿದಿನ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ತಯಾರು ಮಾಡುತ್ತಿದ್ದನು, ಪ್ರತಿದಿನ ಸಾವಿರಾರು ಮಂದಿ ಸೈನಿಕರು ಸಾಯುತ್ತಿದ್ದರು, ಆದರೂ ಏಲ್ಲೂ ಸಹ ಸ್ವಲ್ಪ ಆಹಾರವು ವ್ಯರ್ಥವಾಗದ ರೀತಿಯಲ್ಲಿ ಅಡುಗೆ ಮಾಡಿಸುತ್ತಿದ್ದನು. ಇದರಿಂದ ಪ್ರತಿ ದಿನ ಎಷ್ಟು ಸೈನಿಕರು ಮರಣ ಹೊಂದುತ್ತಾರೆ ಅನ್ನುವುದು ಅವನಿಗೆ ಮೊದಲೇ ತಿಳಿದಿತ್ತು ಎಂದು ಎಲ್ಲರೂ ಊಹೆ ಮಾಡತೊಡಿಗಿದರು.

ಈ ಕುರಿತು ಒಬ್ಬ ವ್ಯಕ್ತಿಯು ಅವರನ್ನು ಇಷ್ಟೇ ಮಂದಿ ಸಾಯುತ್ತಾರೆ ಇಷ್ಟೇ ಪ್ರಮಾಣದ ಊಟವನ್ನು ತಯಾರಿ ಮಾಡಿಸಬೇಕು ಎಂದು ಹೇಗೆ ಗೊತ್ತಾಗುತ್ತಿತ್ತು ಎಂದು ಕೇಳಿದಾಗ. ಉಡುಪಿಯ ರಾಜನು “ಪ್ರತಿ ರಾತ್ರಿ ನಾನು ಕೃಷ್ಣನ ಶಿಬಿರಕ್ಕೆ ಹೋಗುತ್ತಿದ್ದೆ ಅಲ್ಲಿ ಕೃಷ್ಣನಿಗೆ ಪ್ರಿಯವಾದ ಮತ್ತು ರಾತ್ರಿ ತಿನ್ನಲು ಇಷ್ಟಪಡುತ್ತಿದ್ದ ಬೇಯಿಸಿದ ಕಡಲೆಕಾಯಿಯನ್ನು ಸಿಪ್ಪೆತೆಗೆದು ಒಂದು ಬಟ್ಟಲಿನಲ್ಲಿ ಇಡುತ್ತಿದ್ದೆ. ಕೃಷ್ಣ ಇದನ್ನು ತಿಂದು ಮುಗಿಸಿದ ನಂತರ ಬಟ್ಟಲಿನಲ್ಲಿ ತಿನ್ನದೆ ಹಾಗೆ ಬಿಡುತ್ತಿದ್ದ ಕಡಲೆ ಬೀಜಗಳ ಸಂಖ್ಯೆಯನ್ನು ಲೆಕ್ಕ ಮಾಡಿ ನಾಳೆ ಎಷ್ಟು ಪ್ರಮಾಣದ ಆಹಾರವನ್ನು ಸಿದ್ದ ಪಡಿಸಬೇಕು ಎಂದು ನಿರ್ಧರಿಸುತ್ತಿದ್ದೆ. ಅಂದರೆ, 10 ಕಡಲೆ ಬೀಜಗಳನ್ನು ಕೃಷ್ಣನು ತಿನ್ನದೆ ಹಾಗೆ ಬಿಡುತ್ತಿದರೆ ಮರುದಿನ 10,000 ಸೈನಿಕರು ಸಾಯುತ್ತಾರೆ ಎಂದು ತಿಳಿದು 10,000 ಜನರಿಗೆ ಕಡಿಮೆ ಆಗುವಷ್ಟು ಅಡುಗೆ ಮಾಡಿಸುತ್ತಿದ್ದೆ”.ಎಂದು ಎಲ್ಲರಿಗು ಉತ್ತರಿಸುತ್ತಾನೆ.

ಈಗಿನ ಕಾಲಕ್ಕೆ ಬಂದರೆ, ಈಗಲೂ ಸಹ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠ ದೇಶಾದ್ಯಂತ ಹೆಸರುವಾಸಿಯಾಗಿದೆ ಹಾಗೆಯೇ ಉಡುಪಿಯ ಜನರು ಈಗಲೂ ಸಹ ಅಡುಗೆಯ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಅನ್ನ ಬಡಿಸುವ ಕಾಯಕದಲ್ಲಿ ಹೆಸರು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top