ಹಲ್ಲಿಯ ಬಾಲವು ಏಕೆ ತುಂಡಾಗುತ್ತದೆ
ಪ್ರಪಂಚವೇ ಒಂದು ವಿಚಿತ್ರ ವಿಸ್ಮಯಗಳ ಆಗರ.ಇಲ್ಲಿ ನಮಗೆ ತಿಳಿಯದೇ ಇರುವ ಅನೇಕ ಆಶ್ಚರ್ಯಕರ ಸಂಗತಿಗಳು ನೂರಾರಿವೆ.ಅಂತಹ ವಿಚಿತ್ರಗಳಲ್ಲಿ ಹಲ್ಲಿಯೂ ಒಂದು. ಅಷ್ಟಕ್ಕೂ ಹಲ್ಲಿಯಲ್ಲಿ ಅಂತಹ ವಿಶೇಷತೆ ಏನಿದೆ ಎನ್ನುತ್ತೀರಾ? ಬನ್ನಿ ಆ ವಿಶೇಷತೆಯ ಬಗ್ಗೆ ತಿಳಿದುಕೊಳ್ಳೋಣ.
ಹಲ್ಲಿಯನ್ನು ನೀವು ಗಮನಿಸಿದ್ದೀರಾ? ಒಮ್ಮೊಮ್ಮೆ ಅದರ ಬಾಲ ತನ್ನಷ್ಟಕ್ಕೆ ತಾನಾಗಿಯೇ ಬೀಳುತ್ತದೆ ಮತ್ತು ಬೆಳೆಯುತ್ತದೆ ಎಂಬುದನ್ನು ನೋಡಿರಬಹುದು.ಇದಕ್ಕೆ ಕಾರಣವೇನೆಂದರೆ ಹಲ್ಲಿಯ ಮೇಲೆ ಇತರೆ ಪರಭಕ್ಷಕ ಪ್ರಾಣಿಗಳು ಆಕ್ರಮಣ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಮತ್ತು ಅದರಿಂದ ಪಾರಾಗಲು ಹಲ್ಲಿಗಳು ತಾವಾಗಿವೆ ತಮ್ಮ ಬಾಲಗಳನ್ನು ತುಂಡರಿಸಿಕೊಳ್ಳುತ್ತವೆ ಎಂದು ವಿಜ್ಞಾನ ಹೇಳುತ್ತದೆ.ಇದರಿಂದಾಗಿ ಆಕ್ರಮಣಮಾಡಲು ಬಂದ ಪ್ರಾಣಿಯ ಗಮನ ಕೆಳಗೆ ಬಿದ್ದು ಒದ್ದಾಡುತ್ತಿರುವ ಬಾಲದ ಮೇಲೆ ಕೇಂದ್ರೀಕೃತವಾಗುತ್ತದೆ.ಆಗ ಸಮಯ ನೋಡಿ ಹಲ್ಲಿ ಅಲ್ಲಿಂದ ಓಡಿ ಹೋಗಿ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುತ್ತದೆ.
ಹಲ್ಲಿಯು ಅದರ ಬಾಲವನ್ನು ತುಂಡರಿಸಿಕೊಂಡರೂ ಸಹ ಮತ್ತೆ ಮತ್ತೆ ಅದು ಬೆಳೆಯುತ್ತದೆ ಎಂಬ ವಿಷಯವು ನಿಮಗೆ ಗೊತ್ತಾ? ಹೌದು ಹಲ್ಲಿಯ ಬಾಲ ತುಂಡಾದರೂ ಮತ್ತೆ ಮತ್ತೆ ಬೆಳೆಯುತ್ತದೆ.ಹಲ್ಲಿಯ ಬಾಲವು ತುಂಡಾದ ತಕ್ಷಣ ಅದರಲ್ಲಿರುವ ಜೀವಕೋಶಗಳು ಅಲ್ಲಿಗೆ ಹೋಗಿ ತುಂಡಾಗಿರುವ ಕೋಶಗಳನ್ನು ಪುನಃನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗುತ್ತವೆ ಹೀಗೆ ಹೊಸ ಕೋಶಗಳ ಗುಂಪನ್ನು ವೇಗವಾಗಿ ರಚಿಸಿ ಕೆಲವು ದಿನಗಳಲ್ಲೇ ಹಲ್ಲಿಯ ಬಾಲ ಮೊದಲಿದ್ದ ಸ್ಥಿತಿಗೆ ಬರುವಂತೆ ಮಾಡುತ್ತವೆ. ಹೊಸದಾಗಿ ಬೆಳೆದ ಬಾಲಕ್ಕೆ ಮುಂಚೆ ಇದ್ದ ಬಾಲದಷ್ಟು ಸಂಪೂರ್ಣವಾದ ಶಕ್ತಿ ಇರುವುದಿಲ್ಲ.
ಚಿಕ್ಕ ವಯಸ್ಸಿನ ಹಲ್ಲಿಗಳಲ್ಲಿ ಬಾಲವು ಬೇಗ ಬೆಳೆಯುವುದಿಲ್ಲ. ಆದರೆ ದೊಡ್ಡ ಹಳ್ಳಿಗಳಲ್ಲಿ ಬಾಲವು ಬಹುಬೇಗ ಬೆಳೆಯುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
