fbpx
ದೇವರು

ಅಪ್ಸರೆ,ಗಂಧರ್ವ,ಮತ್ತು ಪ್ರೇತಗಳು ಬ್ಯಾಕ್ಟೀರಿಯಾ ಹುಳುಗಳು ಮತ್ತು ರೋಗರುಜಿನಗಳಂತೆ ಹೇಗೆ ನೀವೇ ಓದಿ..

ಅಪ್ಸರೆ ಮತ್ತು ಗಂಧರ್ವರು ಬ್ಯಾಕ್ಟೀರಿಯಾ ಮತ್ತು ಹುಳುಗಳು.

 

ಅಪ್ಸರೆಯರು ನೀರಿನಲ್ಲಿ ಹುಟ್ಟುತ್ತಾರೆ, ಗಂಧರ್ವರು ಗಾಳಿಯಲ್ಲಿ ಚಲಿಸುತ್ತಿರುತ್ತಾರೆ, ಪ್ರೇತಾತ್ಮಗಳು ಮನುಷ್ಯರನ್ನು ಕಾಡಿಸುತ್ತವೆ ಎಂದು ಜನಸಾಮಾನ್ಯರಲ್ಲಿ ನಂಬಿಕೆ ಇದೆ. ಕೆಲವರು ವೇದಗಳನ್ನು ಓದಿದ್ದಾರೆ ಮತ್ತು ಕೆಲವರು ಓದಿರುವುದಿಲ್ಲ.ಅಥರ್ವ ವೇದದ ಒಂದನೇ ಪಠ್ಯ  ನಾಲ್ಕನೇ ಕಂದ ಮತ್ತು 37ನೇ ಅಧ್ಯಾಯದಲ್ಲಿ ಪ್ರಾಚೀನ ಋಷಿಯೊಬ್ಬರು ಅಪ್ಸರೆ,ಗಂಧರ್ವ,ಮತ್ತು ಪ್ರೇತಗಳನ್ನು ಕ್ರಮವಾಗಿ ಬ್ಯಾಕ್ಟೀರಿಯಾ  ಹುಳುಗಳು ಮತ್ತು ರೋಗರೋಜಿನಗಳಿಗೆ ಹೋಲಿಸಿದ್ದಾರೆ. ಬ್ಯಾಕ್ಟೀರಿಯಾಗಳು ನೀರಿನಲ್ಲಿ ಹುಟ್ಟುವುದರಿಂದ ಅವನ್ನು ಅಪ್ಸರೆಯರಿಗೆ, ಕೀಟಗಳು ಗಾಳಿಯಲ್ಲಿ ಹಾರಾಡಿವುದರಿಂದ ಅವುಗಳನ್ನು ಗಂಧರ್ವರಿಗೆ, ಹಾಗು ರೋಗಗಳು ಮನುಷ್ಯರನ್ನು ಕಾಡಿಸುವುದರಿಂದ ಅವನ್ನು ಪ್ರೇತಾ ಪಿಶಾಚಿಗಳಿಗೆ ಹೋಲಿಕೆ ಮಾಡಲಾಗಿದೆ. ಅವುಗಳಿಗೆ ಆ ಕಾಲದಲ್ಲಿ ರಚಿತವಾಗಿರುವ ಕೆಲವು ಶ್ಲೋಕಗಳು ಪುಷ್ಠಿನೀಡಿವೆ.

ಯಾತ್ರಾಸ್ವತ್ತ ನ್ಯಗ್ರೋಧ ಮಹಾವ್ ರಕ್ಪಹ ಶಿಖಂಡಿನಃ|

ತತ್ ಪಾರೇತಪ್ಸರಸಃ ಪ್ರತಿಬುದ್ಧಾ ಅಭೂತಮ್ |

ಎಂಬ ಶ್ಲೋಕದಲ್ಲಿ ಸೂಚಿಸಿರುವಹಾಗೆ ಕಶ್ಯಪ ಎಂದು ಕರೆಯಲ್ಪಡುವ ಅಥರ್ವ ಋಷಿಯು ಅಪ್ಸರವನ್ನು ಮನುಷ್ಯರಲ್ಲಿ ರೋಗಗಳನ್ನು ತರುವ ಬ್ಯಾಕ್ಟೀರಿಯಾಗಳಿಗೆ, ಗಂಧರ್ವರನ್ನು ಹುಳುಗಳಿಗೆ, ಮತ್ತು ಪ್ರೇತಗಳನ್ನು ರೋಗಗಳಿಗೆ ಹೋಲಿಕೆಮಾಡಿದ್ದಾನೆ.ಹೀಗೆ ಹೋಲಿಕೆ ಮಾಡಿ ಈ ಬ್ಯಾಕ್ಟೀರಿಯಾ ಹುಳು ಹಾಗು ರೋಗಗಳನ್ನು ನಾಶ ಮಾಡಲು ಕೆಲವು ಗಿಡಮೂಲಿಕೆಗಳ ಹೆಸರುಗಳನ್ನೂ ಸೂಚಿಸಿದ್ದಾರೆ.  ಅಶೃಂಗಿ ಎಂಬ ಔಷಧೀಯ ಮೂಲಿಕೆಯನ್ನು ಉಪಯೋಗಿಸಿ ಅಪ್ಸರೆ (ನೀರಿಂದ ಹುಟ್ಟುವ ಬ್ಯಾಕ್ಟೀರಿಯಾಗಳು)ಯಾರನ್ನು ಮಟ್ಟ ಹಾಕಬಹುದು ಎಂದು ಕಶ್ಯಪ ಮುನಿಗಳು ಹೇಳಿದ್ದಾರೆ.

ಯಾತ್ರಾಶ್ವತ್ಥ ನ್ಯಗ್ರೋಧ ಮಹಾವ್ ರಕ್ಷಕಃ ಶಿಖಂಡಿನಃ |

ತತ್ ಪರೇತ್ ಅಪ್ಸರಹ್ ಪ್ರತಿಬದ್ದ ಅದ್ಭುತಂ|

ಈ ಮೇಲ್ಕಂಡ ಶ್ಲೋಕದಲ್ಲಿ ಕಶ್ಯಪ ಮುನಿಗಳು ಅಪ್ಸರಾವನ್ನು ಬಾಕ್ಟೀರಿಯಗೆ ಹೋಲಿಕೆಮಾಡುತ್ತ ಅವುಗಳ  ಸಮಸ್ಯೆಯಿಂದ ಮುಕ್ತಿಪಡೆಯಲು ಆಲದ ಮರ ಮತ್ತು ಅಶ್ವತ್ತಾಮ ಮರದ ಎಲೆಗಳನ್ನು ಬಳಸಬೇಕು ಎಂದು ಹೇಳಿದ್ದಾರೆ.

 

ಅನ್ನ್ರುತ್ಯತಃ ಶಿಖಂಡಿನೋ ಗಾಂಧಾರವಾಸ್ಯ ಅಪ್ಸರಾ ಫತೇಹ್ |

ಬಿನ್ನದ್ದಿ ಮುಸ್ಕವಾಪಿ ಯಾಮಿ ಶಿಪಾಹ್

ಈ ಶ್ಲೋಕದಲ್ಲಿ ಕಶ್ಯಪ ಮುನಿಗಳು ಗಂಧರ್ವರನ್ನು ಗಾಳಿಯಲ್ಲಿ ಹಾರಾಡುವ ಸೊಳ್ಳೆಗಳಿಗೆ ಹೋಲಿಕೆಮಾಡಿ ಅಪ್ಸರಗಳನ್ನು ಸೊಳ್ಳೆಯಗಳ ಪತ್ನಿಯಂದು ಹೇಳಿದ್ದಾರೆ.ಹಾಗಾಗಿ ಮಲೇರಿಯಾ ಕಾಯಿಲೆಯನ್ನು ಹರಡುವ ಬ್ಯಾಕ್ಟೀರಿಯಾವಾದ  ಅನಾಫಿಲಿಸ್ ಹೆಣ್ಣು ಸೊಳ್ಳೆಯು  ಅಪ್ಸರೆಯರು ಎಂದು ಹೇಳಿದ್ದಾರೆ.ಇದರಿಂದ ಬರುವ ಕಾಯಿಲೆಯು ಮನುಷ್ಯರನ್ನು ದೆವ್ವದಂತೆ ಕಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನು ಮೂಢನಂಬಿಕೆ ಎಂದು ಕೆಲವರು ಹೇಳಿದರು ನಮ್ಮ ಪೂರ್ವಜರ ಮಾತುಗಳನ್ನು ಅಲ್ಲೆಗಳಿಯುವಂತಿಲ್ಲ. ಪ್ರಾಚೀನ  ವೇದಗಳ ಋಷಿ ಮುನಿಗಳು ತಮ್ಮ ಶ್ಲೋಕಗಳ ಮೂಲಕ ಜನರಿಗೆ ಅದರ ಮನವರಿಕೆ ಮಾಡಿಸಲು ಪ್ರಯತ್ನ ಪಟ್ಟಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top