ಏಷ್ಯಾದ ಅತ್ಯುಚ್ಚ ಪ್ರಶಸ್ತಿಯನ್ನು ಪಡೆದ ಒಂದು ಕಾಲದಲ್ಲಿ ಮಲಹೊರುತ್ತಿದ್ದ ದಲಿತನ ಮಗ…
ಭಾರತದ ದೇಶದಲ್ಲಿದ್ದ ಕೆಲವು ಅನಿಷ್ಟ ಆಚರಣೆಗಳು ಈಗಲೂ ರೂಢಿಯಲ್ಲಿದವು ಅವುಗಳಲ್ಲಿ ಮಲಹೊರುವ ಪದ್ದತಿಯು ಸಹ ಒಂದು. ಈ ಕತೆಯು ಮಲಹೊರುವ ಪದ್ಧತಿ ವಿರುದ್ಧ 32 ವರ್ಷಗಳಿಂದ ಆಂದೋಲನ ನಡೆಸುತ್ತಿರುವ ಕೋಲಾರ ಜಿಲ್ಲೆಯ ಕೆಜಿಎಫ್ ನ ಬೇಜ್ವಾಡ ವಿಲ್ಸನ್ ನ ಜೀವನದ ಹೋರಾಟದ ಕತೆಯಾಗಿದ್ದು ಅದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು.ಇವರ ಬದುಕು ಎಲ್ಲರಿಗು ಮಾದರಿಯಾದದ್ದು.
ಬೇಜ್ವಾಡ ವಿಲ್ಸನ್ ರವರು ಮೂಲತಃ ಕರ್ನಾಟಕದವರು ಇವರು 1966ರಲ್ಲಿ ಕೋಲಾರ್ ಗೋಲ್ಡ್ ಫೀಲ್ಡ್ ನ ಒಂದು ಕಾಲೋನಿಯ ದಲಿತ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸುತ್ತಾರೆ.ಇವರ ತಂದೆ ನಗರದ ಶೌಚಾಲಯಗಳಲ್ಲಿ ಮಲವನ್ನು ಹೊತ್ತು ಸಾಗಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಅವರ ತಂದೆ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬೇರೆ ಕೆಲ್ಸಮಾಡು ಎಂದು ಒಂದು ದಿನ ಬೇಜ್ವಾಡ ವಿಲ್ಸನ್ ರವರು ಕೇಳಿದಾಗ ಅವರ ತಂದೆ “ನನಗೂ ಈ ಕೆಲಸವನ್ನು ಮಾಡುವುದಕ್ಕೆ ಇಷ್ಟ ಇಲ್ಲ, ಇದನ್ನು ಬಿಟ್ಟರೆ ನಮ್ಮ ಜಾತಿಯರಿಗೆ ಬೇರೆ ಕೆಲಸವನ್ನು ಕೊಡುವುದಿಲ್ಲ, ಹಾಗಾಗಿ ನಾವು ಇದನ್ನೇ ಮಾಡಬೇಕು “ಎಂದು ಹೇಳುತ್ತಾನೆ. ಅವರ ತಂದೆ ಆಡಿದ ಮಾತಿನಿಂದ ಪ್ರಭಾವಿತರಾದ ಬೇಜ್ವಾಡ ವಿಲ್ಸನ್ ರವರು ಹೇಗಾದರೂ ಮಾಡಿ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಬೇಕು ಎಂದು ಪಣ ತೊಟ್ಟಿದರು.
ಬೇಜ್ವಾಡ ವಿಲ್ಸನ್ ರವರು ಹಾಸ್ಟೆಲ್ ನಲ್ಲಿದ್ದುಕ್ಕೊಂದು ವ್ಯಾಸಂಗವನ್ನು ಮಾಡಿದರು. ಆ ಹಾಸ್ಟೆಲ್ ನಲ್ಲಿದ್ದ ಇತರೆ ವಿದ್ಯಾರ್ಥಿಗಳು ಅವರನ್ನು ಮನ ಬಂದಂತೆ ಹೀಯಾಳಿಸುತ್ತಿದ್ದರು. ಅವರನ್ನು ಬೇರೆ ವಿದ್ಯಾರ್ಥಿಗಳು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ ‘ತೊಟ್ಟಿ’ ಎಂಬ ಪದದಿಂದ ಬೇಜ್ವಾಡ ವಿಲ್ಸನ್ ರವರನ್ನು ಸಂಭೋದಿಸುತ್ತಿದ್ದರು.
ಇವರು ವ್ಯಾಸಂಗವನ್ನು ಮುಗಿಸಿದ ಮೇಲೆ ಕೆಲಸಕ್ಕೆ ಸೇರಿಕೊಳ್ಳಲು ಹೋದಾಗ ನಿಮ್ಮ ಸಮುದಾಯದವರಿಗೆ ಕಸ ಗುಡಿಸುವ ಕೆಲಸ ಮಾತ್ರ ಕೊಡುತ್ತೇವೆ ಮಾಡುತ್ತೀಯಾ ಎಂದು ಕೇಳಿದರು.ಅದಕ್ಕೆ ಬೇಜ್ವಾಡ ವಿಲ್ಸನ್ ರವರು ಕೋಪದಿಂದ ಕೆಲಸವನ್ನು ತಿರಸ್ಕರಿಸಿ ಮನೆಗೆ ವಾಪಸ್ಸಾದರು.
ಈ ಘಟನೆಯಿಂದ ಮನ ನೊಂದಿದ್ದ ಬೇಜ್ವಾಡ ವಿಲ್ಸನ್ ರವರು ಸಂಭಂದಪಟ್ಟ ಮಂತ್ರಿಗಳಿಗೆ,ಅಧಿಕಾರಿಗಳಿಗೆ, ಪ್ರಧಾನಿಗಳಿಗೆ ಸಮೀಕ್ಷೆಗಳ ವರದಿ ಮತ್ತು ಫೋಟೋಗಳ ಸಮೇತವಾಗಿ ಪಾತ್ರವನ್ನು ಬರೆಯುತ್ತಾರೆ. ನಂತರ ಈ ವಿಷಯ ಸದನದಲ್ಲಿ ತೀವ್ರವಾಗಿ ಚರ್ಚೆಯಾಗಿ ಮಲಹೊರುವ ಪದ್ದತಿಯನ್ನು ನಿಷೇದ ಮಾಡುವಂತೆ ಸರ್ಕಾರವು ಆದೇಶವನ್ನು ಹೊರಡಿಸುತ್ತದೆ.
ಮೊದಲ ಜಯದ ನಂತರ ಬೇಜ್ವಾಡ ವಿಲ್ಸನ್ ರವರು ರೈಲ್ವೆ ಟ್ರ್ಯಾಕ್ ಗಳ ಮೇಲೆ ಮನುಷ್ಯರ ಮಲಗಳನ್ನು ಗುಡಿಸುವುದನ್ನು ಖಂಡಿಸಿ ಅದರ ವಿರುದ್ಧ ಹೋರಾಟವನ್ನು ಕೈಗೊಂಡರು. ಈ ಹೋರಾಟದಲ್ಲೂ ಬೇಜ್ವಾಡ ವಿಲ್ಸನ್ ರವರು ಜಯ ಪಡೆದರು.
32 ವರ್ಷಗಳ ಕಾಲ ಹೋರಾಟ ನಡೆಸಿರುವ ಅವರು, ಸಫಾಯಿ ಕರ್ಮಚಾರಿ ಆಂದೋಲನ ಎಂಬ ಸಂಘಟನೆಯ ರಾಷ್ಟ್ರೀಯ ಸಂಚಾಲಕರಾಗಿದ್ದಾರೆ. ಭಾರತದಲ್ಲಿ ಮಲಹೊರುವ ಪದ್ಧತಿಯಲ್ಲಿ ತೊಡಗಿಸಿಕೊಂಡಿರುವ 6 ಲಕ್ಷ ಮಂದಿ ಪೈಕಿ ಬೇಜ್ವಾಡಾ ಸಂಘಟನೆ 3 ಲಕ್ಷ ಮಂದಿಯನ್ನು ವಿಮುಕ್ತಿಗೊಳಿಸಿದೆ. ಇವರ ಹೋರಾಟದಿಂದ 1993ರಲ್ಲಿ ಸಂಸತ್ತು, ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಅಂಗೀಕರಿಸಿತು.
ಬೇಜ್ವಾಡ ವಿಲ್ಸನ್ ಏಷ್ಯಾದ ಅತ್ಯುಚ್ಚ ಪುರಸ್ಕಾರ ಎಂದು ಪರಿಗಣಿತವಾಗಿರುವ 2016ನೇ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿದೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
