ಋಣಾತ್ಮಕ ಶಕ್ತಿಗಳ ಸಮಸ್ಯೆಗೆ ಉಪ್ಪು
ಸಾಧಾರಣ ಉಪ್ಪು ನಮ್ಮ ದಿನನಿತ್ಯದ ಆಹಾರಗಳಲ್ಲಿ ಮಸಾಲೆ ಮಾಡುವ ಉದ್ದೇಶಕ್ಕಾಗಿ ಬಳಸಲಾಗುವ ಸರ್ವವ್ಯಾಪಕ ಘಟಕಾಂಶವಾಗಿದೆ. ಉದ್ದೇಶಿತ ಬಳಕೆಗೆ ಅನುಗುಣವಾಗಿ ಇದರ ವೈವಿಧ್ಯಮಯ ಸ್ವರೂಪಗಳಲ್ಲಿ ಮತ್ತು ಕಣದ ಗಾತ್ರಗಳಲ್ಲಿ ಲಭ್ಯವಿದೆ. ಉಪ್ಪನ್ನು ಅಡುಗೆಯಲ್ಲಿ ಬಳಸುವುದರಿಂದ ರುಚಿ ಹೆಚ್ಚಾಗುತ್ತದೆ.ಆರೋಗ್ಯಕ್ಕೂ ಇದು ಉಪಯೋಗಕಾರಿ ಎಂಬುದು ನಿಮಗೆ ಗೊತ್ತು.
ಆದರೆ ಇದೇ ಉಪ್ಪಿನಲ್ಲಿ ಕೆಟ್ಟ ಶಕ್ತಿಗಳನ್ನು ತಡೆಯುವ ಶಕ್ತಿಯಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅನೇಕ ಕಡೆಗಳಲ್ಲಿ ಜನರು ಕೆಟ್ಟಶಕ್ತಿ(ಭೂತ,ಮಾತಾ-ಮಂತ್ರ)ಗಳಂತಹ ಋಣಾತ್ಮಕ ಶಕ್ತಿಗಳಿಂದ ಮುಕ್ತಿಪಡೆಯಲು ಉಪ್ಪನ್ನು ವಿವಿಧ ರೂಪಗಳಲ್ಲಿ ಬಳಸುತ್ತಾರೆ.ಅವುಗಳನ್ನು ಈ ಕೆಳಗೆ ಓದಿ ತಿಳಿದುಕೊಳ್ಳಿ.
*ಸ್ವಲ್ಪ ಕಲ್ಲುಪ್ಪನ್ನು ನೀವು ಮನೆ ಒರೆಸುವ ನೀರಿನಲ್ಲಿ ಬೆರೆಸಿ ನಿಮ್ಮ ಮನೆಯ ಎಲ್ಲ ಭಾಗಗಳನ್ನು ಒರೆಸಿದರೆ ನಿಮ್ಮ ಮನೆಯಲ್ಲಿರುವ ಋಣಾತ್ಮಕ ಅಂಶಗಳನ್ನು ಹೋಗಾಲಾಡಿಸಬಹುದು.
*ಒಂದು ಗಾಜಿನ ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆಯಷ್ಟು ಕಲ್ಲುಪ್ಪು ಬೆರೆಸಿ. ಈ ಲೋಟವನ್ನು ನಿಮ್ಮ ಮನೆಯ ನೈಋತ್ಯ ಭಾಗದ ಮೂಲೆಯಲ್ಲಿರಿಸಿ. ಈ ಮೂಲಕ ಮನೆಯಲ್ಲಿದ್ದ ದಾರಿದ್ರ್ಯ ಹೊರಹೋಗಲು ಸಾಧ್ಯವಾಗುತ್ತದೆ.
*ಸ್ನಾನ ಮಾಡುವ ಮೊದಲು ನೀರಿಗೆ ಒಂದು ಕಪ್ ಅಥವಾ ಎರಡು ಕಪ್ ಕಲ್ಲುಪ್ಪನ್ನು ಸೇರಿಸಿ ಈ ನೀರಿನಿಂದ ಸ್ನಾನ ಮಾಡುವ ಮೂಲಕ ದೇಹದಿಂದ ಋಣಾತ್ಮಕ ಅಂಶಗಳು ನಿವಾರಣೆಯಾಗಿ ತಾಜಾತನ ದೊರಕುತ್ತದೆ.
*ನಿಮ್ಮ ಮನೆಯ ಹೊಸಲಿನ ಎರಡು ಕಡೆಗಳನ್ನು ಒಂದೆರಡು ಕಲ್ಲುಪ್ಪನ್ನು ಇಡಿ.ಇದು ನಿಮ್ಮ ಮನೆಗೆ ಋಣಾತ್ಮಕ ಅಂಶಗಳು ಪ್ರವೇಶಿಸದಂತೆ ಮಾಡುತ್ತದೆ.
*ಒಂದು ಚಿಕ್ಕ ಕೆಂಪು ಬಣ್ಣದ ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ಗಂಟುಕಟ್ಟಿ ಈ ಗಂಟನ್ನು ನಿಮ್ಮ ಮನೆಯ ಮುಖ್ಯ ಬಾಗಿಲಿನ ಮೇಲೆ ನೇತುಹಾಕಿ. ಈ ಮೂಲಕ ನಿಮ್ಮ ಮನೆಗೆ ಪ್ರವೇಶಿಸುವ ಋಣಾತ್ಮಕ ಶಕ್ತಿಯಿಂದ ರಕ್ಷಣೆ ಸಿಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
