fbpx
ಆರೋಗ್ಯ

ಮದುವೆಯಾದ ಹೆಣ್ಮಕ್ಕಳು ಕಾಲುಂಗುರ ಯಾಕೆ ಹಾಕೋಬೇಕು ? ವೈಜ್ಞಾನಿಕ ಕಾರಣಗಳು..

ಬೆಳ್ಳಿಯ ಕಾಲುಂಗುರಗಳ ಮಹತ್ವ.

ಮದುವೆಯಾದ ನಂತರ ಗಂಡನಾದವನು ಹೆಂಡತಿಗೆ ಕಾಲುಂಗುರ ತೊಡಿಸುತ್ತಾನೆ.ಇದು ಕೇವಲ ಸಂಪ್ರದಾಯ ಅಷ್ಟೇ,ಮದುವೆ ಆದೋವರು ಹಾಕಿಕೊಳ್ಳಲೇ ಬೇಕು .ಇದು ಮದುವೆ ಆಗಿದೆ ಅನ್ನೋದರ ಸಂಕೇತ ಕೂಡ ಹೌದು . ಅಂತ ಮಾತ್ರ ನಮಗೆಲ್ಲರಿಗೂ ಗೊತ್ತು ? ಆದರೆ ನಮ್ಮಹಿರಿಯರು ಇದನ್ನು ಸಂಪ್ರದಾಯವಾಗಿ ಏಕೆ ಮಾಡಿದ್ರು ಅಂತ ನಮಗೆ ಗೊತ್ತಿಲ್ಲ ? ಅಲ್ವಾ.ಆದರೆ ಕಾಲುಂಗುರ ಹಾಕಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ.ಅದನ್ನ ತಿಳ್ಕೊಳ್ಳಿ.ನಮ್ಮ ಹಿರಿಯರು ಏನೇ ಮಾಡಿದ್ರು ಅದು ಕಾರಣ ಇಲ್ಲದೇನೆ ಮಾಡಿರೋಲ್ಲ.
1.ಮದುವೆಯಾದ ಮಹಿಳೆಯರು ಕಾಲುಂಗುರ ಧರಿಸಿದರೆ ಶೋಭೆ ಮತ್ತು ಶುಭ ಕೂಡ ಹೌದು.

2.ವೇದಗಳ ಅನುಸಾರ ಎರಡು ಕಾಲುಗಳ ಬೆರಳುಗಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ತಿಂಗಳ ಮುಟ್ಟು ಸರಿಯಾಗಿ ಆಗುತ್ತದೆ. ಇದು ಗರ್ಭಧಾರಣೆಗೂ ಸಹಾಯಕವಾಗಿದೆ.


3.ಹೆಬ್ಬೆರಳಿನ ಪಕ್ಕದಲ್ಲಿರುವ ಬೆರಳಿನಲ್ಲೊಂದು ವಿಶೇಷವಾದ ನರವಿದೆ. ಅದು ನೇರವಾಗಿ ನಮ್ಮ ಗರ್ಭ ಕೋಶದೊಂದಿಗೆ ಸಂಪರ್ಕ ಹೊಂದಿದೆ.ಅದು ಗರ್ಭಕೋಶವನ್ನು ನಿಯಂತ್ರಿಸುತ್ತದೆ.ಅಲ್ಲದೆ ರಕ್ತದೊತ್ತಡವನ್ನೂ ಸಹ ನಿಯಂತ್ರಣದಲ್ಲಿ ಇಡುತ್ತದೆ.
4.ಕಾಲುಂಗುರ ನರಕ್ಕೆ ನೇರವಾಗಿ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿದ್ದು. ಒತ್ತಡ ಜೀವನ ಶೈಲಿಯಿಂದಾಗಿ ಮಹಿಳೆಯರು ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಂತವರು ಕಾಲುಂಗುರ ಧರಿಸುವುದು ಉತ್ತಮ. ಇದು ಋತುಚಕ್ರವನ್ನು ನಿಯಮಿತ ರೂಪದಲ್ಲಿ ಆಗಲು ಸಹಕಾರಿಯಾಗಿದ್ದು, ಸಂತಾನೋತ್ಪತ್ತಿಗೂ ಕೂಡ ಅಂಗಗಳನ್ನು ಸದೃಢವಾಗಿ,ಆರೋಗ್ಯವಾಗಿಡಲು ಕಾಲುಂಗುರ ನೆರವಾಗುತ್ತದೆ.


5.ಇನ್ನೂ ಕಾಲುಂಗುರವನ್ನು ಕೆಲವರು ಬಂಗಾರದಲ್ಲಿ ಸಹ ಮಾಡಿಸಿಕೊಂಡು ಹಾಕಿಕೊಳ್ಳುತ್ತಾರೆ .ಅದು ಅಷ್ಟೇನು ದೇಹಕ್ಕೆ ಒಳ್ಳೆಯದಲ್ಲ. ಬೆಳ್ಳಿಯಲ್ಲಾದರೆ ಅನೇಕ ಆರೋಗ್ಯಕಾರಿ,ಔಷದೀಯ ಅಂಶಗಳು ಅಡಗಿವೆ. ಬೆಳ್ಳಿ ಕಾಲುಂಗುರ ಉಷ್ಣ ದೇಹವನ್ನು ಹೊಂದಿರುವವರ ದೇಹದ ತಾಪಮಾನವನ್ನು ತಗ್ಗಿಸಿ ಕಡಿಮೆ ಮಾಡಿ ಸದಾಕಾಲ ತಂಪಾಗಿ ಇರುವಂತೆ ಮಾಡುತ್ತದೆ.


6.ಇನ್ನೂ ಕಾಲುಂಗುರವನ್ನು 6 ತಿಂಗಳಿಗೊಮ್ಮೆ ಇಲ್ಲ ವರ್ಷಕ್ಕೊಮ್ಮೆಯಾದರೂ ಬದಲಾಯಿಸುತ್ತಾ ಇರಬೇಕು.ಗ್ರಹಣ ಸಂಭವಿಸಿದ ನಂತರ ಅಂದರೆ ಸೂರ್ಯ ಗ್ರಹಣ,ಚಂದ್ರ ಗ್ರಹಣ ಸಂಭವಿಸಿದ ನಂತರ ಹಳೆಯದನ್ನು ತೆಗೆದುಹಾಕಿ ಹೊಸದನ್ನು ಗಂಡನ ಕೈಯಿಂದಲೇ ಹಾಕಿಸಿ ಕೊಳ್ಳಬೇಕು ಎಂದು ಜ್ಯೋತಿಶ್ಶಾಸ್ತ್ರಾದಲ್ಲಿ ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top