fbpx
ದೇವರು

ದ್ರೌಪದೀ ಸ್ವಯಂವರ – ಇದು ದ್ರೌಪದೀ ಐದು ಜನರನ್ನು ಮದುವೆಯಾದ ಕಥೆ..

ದ್ರೌಪದೀ ಸ್ವಯಂವರ.

ಪಾಂಡವರು ಪಾಂಚಾಲ ದೇಶಕ್ಕೆ ಹೊರಟಾಗ  ಗಂಗಾನದಿಯನ್ನು ದಾಟುತ್ತಿದ್ದಾಗ ಚಿತ್ರರಥನೆಂಬ ಗಂಧರ್ವನು ಇವರನ್ನು ಕೆಣಕಿದನು.

ಆಗ ಅರ್ಜುನನು ಗಂಧರ್ವನ ಮಾಯಾವಿದ್ಯೆಯನ್ನು ಖಂಡಿಸಿ ಆಗ್ನೇಯಾಸ್ತ್ರದಿಂದ ಚಿತ್ರರಥನನ್ನು ಸೋಲಿಸಿದನು. ಕೊನೆಗೆ ಅರ್ಜುನನಲ್ಲಿ ಪ್ರಾಣದಾನವನ್ನು ಕೇಳಿದ ಚಿತ್ರರಥನು ಚಾಕ್ಷುಷಿ ಎಂಬ ವಿದ್ಯೆಯನ್ನು ಅರ್ಜುನನಿಗೆ ಉಪದೇಶಿಸಿದನು. ಅದರಿಂದಾಗಿ ಮೂರು ಲೋಕದಲ್ಲಿ ನೆಡೆಯಬಹುದಾದ ಘಟನೆಯನ್ನು ಇದ್ದಲ್ಲಿಂದಲೇ ನೋಡಲು ಸಾಧ್ಯವಾಯಿತು.ವಿದ್ಯೆಯನ್ನು ಭೋದಿಸಿದ ಚಿತ್ರರಥ ಅರ್ಜುನನ ಮಿತ್ರನೂ ಆದನು.

ಈ ರೀತಿಯಲ್ಲಿ ಪಾಂಡವರು ಪಾಂಚಾಲ ದೇಶವನ್ನು  ಪ್ರವೇಶಿಸಿ ದ್ರುಪದ ರಾಜನ ಮಗಳ ಸ್ವಯಂವರವನ್ನು ನೋಡಲು ತಲುಪಿದರು.ದ್ರುಪದ ರಾಜನು ಅರ್ಜುನನು ತನ್ನನ್ನು ಬಂಧಿಸಿ ಗುರುವಾದ ದ್ರೋಣರ ಎದುರಿಗೆ ಕೆಡವಿದಾಗ ಅವಮಾನಿತನಾದನು. ಕೊನೆಗೆ ದ್ರೋಣರ ಮೇಲೆ ಪ್ರತೀಕಾರವನ್ನು ಮಾಡಬಯಸಿ ವೈಶಾನವೆಂಬ ಯಜ್ಞವನ್ನು ನೆಡೆಸಿದನು.

ಯಜ್ಞರು ಕೊನೆಯಲ್ಲಿ ಹವಿಸ್ಸನ್ನು ಸ್ವೀಕರಿಸಲು ತನ್ನ ಪತ್ನಿಗೆ ಬರಲು ದ್ರುಪದನು ತಿಳಿಸಿದನು.ಅವಳು ತಡಮಾಡಿದಾಗ ಹವಿಸ್ಸನ್ನು ಅಗ್ನಿಕುಂಡಕ್ಕೆ ಅರ್ಪಿಸಿದನು.ಆಗ ಆ ಕುಂಡದಿಂದ ತೇಜೋಮಯನಾದ ಕಿರೀಟಧಾರಿ ಬಾಲಕನು ಹೊರಬಂದನು.ಸ್ವಲ್ಪ ಸಮಯದ ನಂತರ ಸುಂದರಿಯೊಬ್ಬಳು  ಬಂದಳು. ಮಹಾ ಪರಾಕ್ರಮಿಯಾದ ಕೋಪಿಷ್ಠನಾದ ಬಾಲಕನಿಗೆ ಧ್ರುಷ್ಟದ್ಯುಮ್ನನೆಂದು ಅನಂತರ ಬಂದ ಬಾಲಕಿಗೆ ಕೃಷ್ಣೆ ಎಂದು ಹೆಸರಿಟ್ಟನು.ಪಾಂಚಾಲ ದೇಶದವಳಾಗಿದ್ದದರಿಂದ ಪಾಂಚಾಲಿ,ದ್ರುಪದನ ಮಗಳಾದ್ದರಿಂದ ದ್ರೌಪದೀ ಎಂದು ಅವಳಿಗೆ ಹೆಸರು ಬಂದಿತ್ತು.

ಧ್ರುಷ್ಟದ್ಯುಮ್ನನು ಸಹ ದ್ರೋಣಾಚಾರ್ಯರ ಬಳಿಯಲ್ಲಿಯೇ ವಿದ್ಯೆ ಕಲಿತನು. ಅವನಿಗೆ ಮೋಸ ಮಾಡದೇ ದ್ರೋಣರು ಶಿಕ್ಷಣ ನೀಡಿದರು. ಪಾಂಚಾಲಿಯು ತ್ರಿಲೋಕ ಸುಂದರಿಯಾಗಿ ಬೆಳೆಯುತ್ತಿದ್ದಳು.ತನಗೆ ಅವಮಾನ ಮಾಡಿದ ದ್ರೋಣರ ಶಿಷ್ಯ ಅರ್ಜುನನ್ನೇ ಪಾಂಚಾಲಿಯು ವರಿಸಬೇಕೆಂಬುದು ದ್ರುಪದನ ಆಸೆಯಾಗಿತ್ತು. ಆದರೆ ವಾರಣಾವತದಲ್ಲಿ ಪಾಂಡವರು ಸತ್ತರೆಂದು  ತಿಳಿದು ದ್ರುಪದನು ದುಃಖಪಟ್ಟನು.ಆದರೆ ದ್ರುಪದರ ಗುಪ್ತಾಚಾರರು ಪಾಂಡವರು ಸತ್ತಿಲ್ಲ.ಬೇರೆ ವೇಷದಲ್ಲಿ ದೇಶಗಳಲ್ಲಿದ್ದಾರೆಂದು ತಿಳಿಸಿದ್ದರು.

ಆ ದೃಷ್ಟಿಯಿಂದ ಕೇವಲ ಅರ್ಜುನನು ಮಾತ್ರ ಬೇಧಿಸ ಬಹುದಾದಂತಹ ಮತ್ಸ್ಯ ಯಂತ್ರವನ್ನು ಸ್ವಯಂವರದ  ಪಣವನ್ನಾಗಿಸಿದನು. ಮೇಲೆ ತಿರುಗುವ ಮೀನವನ್ನು ನಿರ್ಮಿಸಿದನು.ಅದರ ಕೆಳಗೆ ಧನಸ್ಸನ್ನು ಇಟ್ಟಿದ್ದನು.ಈ ತಿರುಗುವ ಮತ್ಸ್ಯ ಯಂತ್ರವನ್ನು ಭೇದಿಸುವವನಿಗೆ  ತನ್ನ ಮಗಳನ್ನು ಕೊಡುವೆನೆಂದು ಸ್ವಯಂವರದ ಸುದ್ದಿಯನ್ನು ದೇಶದ ಮೂಲೆ ಮೂಲೆಗಳಿಗೆ ಡಂಗುರ ಹೊಡೆಸುವ ಮೂಲಕ ಪ್ರಸಿದ್ಧಿಸಿದನು.

ದ್ರೌಪದೀ ಸ್ವಯಂವರದ ವಿಷಯ ತಿಳಿದು ಅನೇಕ ರಾಜ ಮಹಾರಾಜರು ಪಾಂಚಾಲ ದೇಶಕ್ಕೆ ಆಗಮಿಸಿದರು. ಸ್ವಯಂವರ ಮಂಟಪದಲ್ಲಿ ನೋಡುವವರ ಸಾಲಿನಲ್ಲಿ ಬ್ರಾಹ್ಮಣ ವೇಷದಲ್ಲಿದ್ದ ಪಾಂಡವರು ಸಹ ಕುಳಿತಿದ್ದರು. ಪ್ರಜೆಗಳು ಉತ್ಸಾಹದಿಂದ ಬಂದು ಸೇರಿದ್ದರು.ದ್ರುಪದನು ವಿವಿಧ ರಾಜ್ಯಗಳಲ್ಲಿ ಮಗಳ ಸ್ವಯಂವರದ ಸಂಗತಿ ಪ್ರಚಾರಪಡಿಸಿದ್ದನು.

ದ್ರುಷ್ಟದ್ಯುಮ್ನನು ತಂಗಿ ಕೃಷ್ಣೆಯ ಕೈ ಹಿಡಿದು ಸ್ವಯಂವರದ ಮಂಟಪಕ್ಕೆ ಬಂದು ಧನುಸ್ಸಿನ ಕಡೆಗೆ ಕೈ ಮಾಡಿ ಈ ರೀತಿ ಘೋಷಣೆ ಮಾಡಿದನು. “ ಈ ಧನುಸ್ಸಿಗೆ ಹೆದೆಯೇರಿಸಿ ಐದು ಬಾಣಗಳನ್ನು ಉಪಯೋಗಿಸಿ ತಿರುಗುವ ಮತ್ಸ್ಯ ಯಂತ್ರವನ್ನು ಯಾರು ಭೇಧಿಸುವರೋ ಅವರನ್ನು ನನ್ನ ತಂಗಿ ವರಿಸುತ್ತಾಳೆ.

ದ್ರುಷ್ಟದ್ಯುಮ್ನನ ಘೋಷಣೆಯಿಂದ ಸಭೆಯಲ್ಲಿ ಸಡಗರ ಉಂಟಾಯಿತು. ಸೇರಿದ ರಾಜರು ಯೊಬ್ಬಬ್ಬರಾಗಿ ಬಂದು  ಧನಸ್ಸನ್ನು ಹಿಡಿದು ಹೆದೆಯೇರಿಸಲು ಪ್ರಯತ್ನಿಸಿದರು. ಕೆಲವರು ಎತ್ತಲಾಗದೇ ಹೋದರೆ ಮತ್ತೆ ಕೆಲವರು ಬಗ್ಗಿಸಿ ಹೆದೆಯೇರಿಸಲಾರದೇ ಹೋದರು. ಕೆಲವರು ಮೈಮೇಲೆ ಹಾಕಿಕೊಂಡು ಬಿದ್ದಾಗ ಜನರು ನಗತೊಡಗಿದ್ದರು. ಅಪಮಾನಿತರಾಗಿ  ಅವರು ತಲೆತಗ್ಗಿಸಿ ತಮ್ಮ ಸ್ಥಾನಗಳಿಗೆ ಹೋದರು.ಮತ್ತೆ ಕೆಲವರು ಅಪಮಾನದಿಂದಾಗಿ ಸ್ವಯಂವರ ಮಂಟಪವನ್ನೇ ಬಿಟ್ಟು ಹೋದರು.

ಶಿಶುಪಾಲ ಚೇದಿ ರಾಜ್ಯದ ರಾಜನು,ಮಾಗಧನೆಂದು ಹೆಸರು ಪಡೆದ. ಜರಾಸಂಧ ವಿಫಲರಾದರು. ಕರ್ಣನು ಬಂದು ಧನುಸ್ಸಿಗೆ ಬಾಣವನ್ನು ಹೂಡ ಬಯಸಿದಾಗ “ ನಾನು ಸುತಪುತ್ರನನ್ನು ಮದುವೆಯಾಗುವುದಿಲ್ಲ” ಎಂದಳು ಕೃಷ್ಣೆ.ಕರ್ಣನು ಅವಮಾನದಿಂದ ಹೊರಗೆ ಹೋದನು.

ಕ್ಷತ್ರಿಯರು ಮುಗಿದ ನಂತರದಲ್ಲಿ  ದ್ರುಷ್ಟದ್ಯುಮ್ನನು ಬ್ರಾಹ್ಮಣರ ಕಡೆಗೆ ತಿರುಗಿ ನಿಮ್ಮಲ್ಲಿ  ಯಾರಾದರೂ ಪ್ರಯತ್ನಿಸುವವರಿದ್ದರೆ ಬನ್ನಿರಿ ಎಂದು ಆಹ್ವಾನಿಸಿದನು.

ಅರ್ಜುನನು ಯುಧಿಷ್ಠಿರನ ಮುಖ ನೋಡಿದನು.ಅವನು ಒಪ್ಪಿಗೆ ಸೂಚಿಸಿದಾಗ  ಅರ್ಜುನನು ಮೇಲೆದ್ದು ಮಂಟಪದ ಕಡೆಗೆ ಬಂದನು.ಬ್ರಾಹ್ಮಣನು ಮಂಟಪದ ಕಡೆ ಬಂದಾಗ ದಕ್ಷಿಣೆ ಆಸೆಯಿರುವವರಿಗೆ ಬೇಸರವಾಯಿತು. ಆದರೆ ಕೆಲವರು ಸಂತಸದಿಂದ ಇವನೇನೋ ಕಲಿತವನೇ ಇರಬೇಕು ಪ್ರಯತ್ನಿಸಲಿ ಎಂಬ ಭಾವನೆ ಹೊಂದಿದರು.ಲಕ್ಷ್ಯವನ್ನು ಬೇಧಿಸಲು ಬಹುದೆಂದು ಕೊಂಡರು.

ಅರ್ಜುನನು ನೇರವಾಗಿ ಧನಸ್ಸನ್ನು ಹಿಡಿದು ಅದರ ಹೆದೆಏರಿಸಿದನು. ಲಕ್ಷ್ಯದ ಕಡೆಗೆ ಬಾಣವನ್ನು ಬಿಟ್ಟನು.ಆಗ ಮೀನ ಯಂತ್ರವು ಕೆಳಗೆ ಬಿದ್ದಿತ್ತು.

ಮಂಗಳವಾದ್ಯವು ಮೊಳಗಿದವು.ಬ್ರಾಹ್ಮಣರು ಜಯದ ದನಿ ಮಾಡಿದರು.ದ್ರೌಪದೀ ಅರ್ಜುನನ ಕೊರಳಲ್ಲಿ ಮಾಲೆಯನ್ನು ಅರ್ಪಿಸಿದಳು.

ಅಪಮಾನಿತರಾದ ರಾಜರು ಆಶ್ಚರ್ಯಗೊಂಡರು, ಅವರೆಲ್ಲರೂ ದ್ರುಪದನ ಮೇಲೆ ಆಕ್ರಮಣ ಮಾಡಿದರು.ಆಗ ಭೀಮ ಮತ್ತು ಅರ್ಜುನರು ದ್ರುಪದನ ರಕ್ಷೆಣೆಗೆ ದಾವಿಸಿದರು.ಕೌರವ ಶಿಶುಪಾಲ, ಜರಾಸಂಧ ಮುಂತಾದವರನ್ನು ಹಿಮ್ಮೆಟ್ಟಿಸಿದರು.ಅರ್ಜುನನು ಬಾಣಗಳ ಮಳೆ ಗರೆದಾಗ ಅವನೇ ಅರ್ಜುನ ಎಂದು ತಿಳಿಯಿತು.

ಪಾಂಡವರು ದ್ರೌಪದಿಯೊಂದಿಗೆ ಮನೆಗೆ ಬಂದರು. ಅಮ್ಮಾ ಹೆಣ್ಣು ತಂದೆ ಎಂದಾಗ ಎಂದರೆ ಆಕೆ ಹಣ್ಣು ಎಂದುಕೊಂಡು ಎಲ್ಲರೂ ಹಂಚಿ ತಿನ್ನಿರಿ ಎಂದಳು.ಕುಂತಿ, ಹೊರಗೆ ಬಂದು ನೋಡಿದಾಗ ದ್ರೌಪದಿಯನ್ನು ನೋಡಿ ಅಯ್ಯೋ ನಾನೇನೆಂದು ಹೇಳಿದೆ ? ಎಂದು ನೊಂದುಕೊಂಡಳು.

ಅರ್ಜುನನು ತಾಯಿ ಹೇಳಿದಂತೆ ಎಲ್ಲರೂ ಒಪ್ಪಿದರು.ದ್ರೌಪದೀ ಸಹ ಸಮ್ಮತಿಸಿದಳು.

ಅದೇ ಸಮಯದಲ್ಲಿ ಶ್ರೀಕೃಷ್ಣ ಬಲರಾಮರು ಅಲ್ಲಿಗೆ ಬಂದರು.ಕೃಷ್ಣನು ಅರ್ಜುನನನ್ನು ಗುರುತಿಸಿದ್ದನು.ಅವರು ಕುಂತಿಗೆ ನಮನ ಸಲ್ಲಿಸಿದರು. ಪಾಂಡವರು ಕೌರವರ ಕಾರಸ್ಥಾನವನ್ನು  ತಿಳಿಸಿದರು.ಪರಸ್ಪರ ಸುಖದುಃಖಗಳ ಚರ್ಚೆ ನೆಡೆಸಿದರು.

ದ್ರುಪದನು ಅಳಿಯನು ಯಾರೆಂದು ತಿಳಿಯುವ ಕುತೂಹಲ ಉಂಟಾದಾಗ ಮಗನನ್ನು ಕಳಿಸಿದನು.ಅವನು ಅರ್ಜುನನೇ ಲಕ್ಷ್ಯ ಭೇದಿಸಿದವನೆಂದಾಗ ಸಂತಸಪಟ್ಟನು. ಆದರೆ ಐವರ ಪತ್ನಿಯಾಗುವಳು  ತನ್ನ ಮಗಳು ಎಂದಾಗ ಬೇಸರಪಟ್ಟನು.

ಅಲ್ಲಿಗೆ ಬಂದ ವ್ಯಾಸ ಮಹರ್ಷಿಗಳು ದ್ರೌಪದಿಯು ಐವರ ಪತ್ನಿಯೇ ಆಗುವಳು.ಹಿಂದೆ ಅವಳು ಈಶ್ವರನನ್ನು ಕುರಿತು ತಪಸ್ಸು ಮಾಡಿದವಳು. “ ಪತಿಂದೇಹಿ”  ಎಂದು ಐದು ಬಾರಿ ಹೇಳಿದ್ದರಿಂದ ಪರಶಿವನು ಐವರ ಪತ್ನಿಯಾಗುವಂತೆ ಕರುಣೆ ತೋರಿದ್ದನು.ಭರತ ವಂಶದವರಾದ ಐವರು ನಿನ್ನನ್ನು ವರಿಸುವರು ಎಂದು ಶಿವನೇ ಹೇಳಿದ್ದನು.

ನೀನು ಈ ಬಗ್ಗೆ ಚಿಂತೆ ಮಾಡಬೇಡವೆಂದು ದ್ರುಪದನಿಗೆ ವ್ಯಾಸರು ಹೇಳಿದರು. ಅನಂತರ ಐವರು ಪಾಂಡವರ ಜೊತೆಗೆ ದ್ರೌಪದಿಯ ಮದುವೆ ನೆಡೆಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top