ಈ ಲಕ್ಷಣಗಳನ್ನು ಗುರುತಿಸಿದರೆ ಅದು ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಾಗಿರುತ್ತದೆ…
ನಾವು ದಿನನಿತ್ಯದ ಕಾರ್ಯಗಳಲ್ಲಿ ಎಷ್ಟು ಬ್ಯುಸಿಯಾಗಿರುತ್ತೇವೆ ಎಂದರೆ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನೂ ದೇಹವೇ ಸೂಚನೆ ನೀಡುತ್ತಿದ್ದರೂ ನಾವು ಗ್ರಹಿಸುವುದೇ ಇಲ್ಲ. ಅನೇಕ ಜನರು ಈ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ತಮಗೆ ಕಿಡ್ನಿ ಸಮಸ್ಯೆ ಇದೆ ಎಂಬುದು ಮಾತ್ರ ಅವರಿಗೆ ತಿಳಿದೇ ಇರುವುದಿಲ್ಲ.ಕಿಡ್ನಿ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಸುಲಭವವಾಗಿ ಗುಣಪಡಿಸಿಕೊಳ್ಳಬಹುದು. ಆ ಸಾಮಾನ್ಯ ಲಕ್ಷಣಗಳು ಯಾವುವೆಂದು ಈ ಕೆಳಗೆ ಓದಿ ತಿಳಿದುಕೊಳ್ಳಿ.
1.ಯಾವುದೆ ಕೆಲಸ ಮಾಡಿದರೂ ನಿಮಗೆ ತುಂಬಾನೆ ಸುಸ್ತು-ಆಯಾಸ ಆಗುತ್ತಿದ್ದರೆ ನಿಮ್ಮಲ್ಲಿ ಕಿಡ್ನಿ ಸಮಸ್ಯೆ ಇದೆ ಎಂದರ್ಥ.
2. ಬೇಸಿಗೆಯಲ್ಲೂ ಕೂಡ ನಿಮಗೆ ಯಾವಾಗಲೂ ಚಳಿಯ ಅನುಭವ ಆಗುವುದು ಕಿಡ್ನಿಯ ತೊಂದರೆಯ ಒಂದು ಲಕ್ಷಣವಾಗಿದೆ.
3. ಉಸಿರಾಟದಲ್ಲಿ ನಿಮಗೆ ಸಮಸ್ಯೆ ಯಾಗುತ್ತಿದ್ದರೆ ನೀವು ವೈದ್ಯರ ಬಳಿ ಹೋಗಿ ನಿಮ್ಮ ಸಮಸ್ಯೆಯನ್ನು ತೋರಿಸುವುದು ಒಳಿತು.
4. ದೇಹದ ಮೇಲ್ಭಾಗಗಳಲ್ಲಿ ಅತಿಯಾದ ತುರಿಕೆ ಆಗುತ್ತಿದ್ದರೆ ಅದು ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಬಂದಿರುತ್ತದೆ.
5.ನಿಮ್ಮಲ್ಲಿ ಕಿಡ್ನಿ ಸಮಸ್ಯೆ ಇದ್ದರೆ ನಿಮಗೆ ಬೇಗ ನಿದ್ರೆ ಬರುವುದಿಲ್ಲ, ನಿದ್ರೆಗೆ ಸಂಬಂಧಿಸಿದಂತೆ ನೀವು ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತೀರಿ.
6. ಕಿಡ್ನಿಯಲ್ಲಿ ಸಮಸ್ಯೆ ಬಂದರೆ ಬಾಯಿಯಿಂದ ಕೆಟ್ಟ ವಾಸನೆ ಹೊರಹೊಮ್ಮಬಹುದು.ಬಾಯಿ ರುಚಿ ಇರುವುದಿಲ್ಲ. ಏನೆ ತಿಂದರೂ ಸಹ ಅದಕ್ಕೆ ಕೆಟ್ಟ ರುಚಿ ಬರುತ್ತದೆ ಇದರಿಂದ ನಿಮಗೆ ಊಟ ಸೇರದೆ ಹೋಗಬಹುದು.
7.ನಿಮ್ಮ ಕಾಲು, ಕೈಗಳ ಗಂಟುಗಳಲ್ಲಿ ಊತ ಕಾಣಿಸಿಕೊಂಡಿದ್ದು, ವಿಪರೀತ ನೋವು ಉಂಟಾಗುವುದು ಸಹ ಕಿಡ್ನಿ ಸಂಭಂದಿತ ಕಾಯಿಲೆಯ ಲಕ್ಷಣವಾಗಿದೆ.
8.ನಿಮಗೆ ವಾಂತಿಯಾಗುವ ಮತ್ತು ವಾಕರಿಕೆ ಯಾಗುವ ಅನುಭವಗಳು ಆಗುತ್ತಿದ್ದರೆ ಅದು ಕಿಡ್ನಿ ಸಮಸ್ಯೆಗೆ ಸಂಬಂಧಪಟ್ಟಿರುತ್ತದೆ.
9.ಪದೇ ಪದೇ ಮೂತ್ರ ಬರುವುದು, ಮೂತ್ರವು ಗಾಢ ಬಣ್ಣದಿಂದ ಕೂಡಿರುವುದು ಕಂಡುಬಂದರೆ ಅದು ಕಿಡ್ನಿಗೆ ಸಂಬಂದಿಸಿದ ಸಮಸ್ಯೆಯಾಗಿರುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
