ಧನ ಪ್ರಾಪ್ತಿಗೆ ಕುಬೇರಲಕ್ಷ್ಮಿಯ ಪೂಜೆ
ಕುಬೇರಲಕ್ಷ್ಮಿಯು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಹಿಂದೂ ದೇವತೆ . ಕುಬೇರಲಕ್ಷ್ಮಿಯ ಪೂಜೆಯನ್ನು ಭಕ್ತರು ಮತ್ತು ಅವರ ಕುಟುಂಬಗಳಲ್ಲಿ ಮಾಡುವುದರಿಂದ ಅನೇಕ ಅದ್ಭುತ ಪ್ರಯೋಜನಗಳಿವೆ ಅವುಗಳನ್ನು ಕೆಳಗೆ ಓದಿ ತಿಳಿದು ಕೊಳ್ಳಿ.
ಕುಬೇರಲಕ್ಷ್ಮಿಯ ಪೂಜೆಯನ್ನು ಮಾಡುವ ವಿಧಾನ
1.ನಿಮ್ಮ ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ. ಗಂಗಾ ನದಿಯ ನೀರು ಅಥವಾ ನದಿಯ ನೀರು ಅಥವಾ ಗೋಮೂತ್ರವನ್ನು ಸಿಂಪಡಿಸಿ.ಕುಬೇರಲಕ್ಷ್ಮಿಯ ಹೆಸರಲ್ಲಿ ಲಘು ಉಪವಾಸ ಮಾಡುವುದು.
2.ಲಕ್ಷ್ಮಿ ಬೀಜಮಂತ್ರ(“ಓಂ ಹ್ರೀಂ ಶ್ರೀಮ್ ಲಕ್ಷ್ಮಿಭ್ಯೋ ನಮಃ)ಗಾಯತ್ರಿ ಮಂತ್ರ”(ಓಂ ಮಹಾಲಕ್ಷ್ಮಿಚಾ ವಿದ್ಮಹೇ ವಿಷ್ಣು ಪತ್ನಿಚಾ ದೀಮಹೇ
ತಾನೋ ಲಕ್ಷ್ಮಿ ಪ್ರಚೋದಯಾತ್ “) ಮತ್ತು ಮಹಾಲಕ್ಷ್ಮಿಯಾ ಇತರ ಮಂತ್ರವನ್ನು ಪಠಿಸುವುದು.
3.ಕುಬೇರಲಕ್ಷ್ಮಿಯ ವಿಗ್ರಹವನ್ನು ಕಳಸದಲ್ಲಿ ಇರಿಸಿ ಪಂಚಾಮೃತ ಅಭಿಷೇಕ ಮಾಡಿ.
4.ಕುಬೇರಲಕ್ಷ್ಮಿಯ ಹೆಸರಲ್ಲಿ ಪೂಜೆ ಮತ್ತು ಆರತಿಗಳನ್ನೂ ಮಾಡುವುದು:
5.ಪೂಜೆಯ ವೇಳೆಯಲ್ಲಿ ಬಿಳಿ ಬಣ್ಣದ ಹೂವು ಮತ್ತು ಅಕ್ಕಿಯ ಅಕ್ಷತೆಯನ್ನು ದೇವರ ಮೇಲೆ ಸಮರ್ಪಣೆ ಮಾಡಿ.
6. ನವಧಾನ್ಯವನ್ನು ದಾನವನ್ನು ಕೊಡುವುದು.
ಲಕ್ಷ್ಮಿ ಪೂಜಾ ಪ್ರಯೋಜನಗಳು:
1. ಪೂಜೆಯನ್ನು ಶ್ರದ್ದೆ ಯಿಂದ ಮಾಡಿದ ವ್ಯಕ್ತಿಯು ಶ್ರೀಮಂತ ಮತ್ತು ಆರ್ಥಿಕವಾಗಿ ಯಶಸ್ಸನ್ನು ಕಾಣುತ್ತಾನೆ.
2.ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅಡೆತಡೆಗಳನ್ನು ನಿವಾರಣೆ ಮಾಡಬಹುದು.
3.ಗೃಹ ದೋಷ ಹಾಗು ಮನೆಯ ಋಣಾತ್ಮಕ ಅಂಶಗಳನ್ನು ಕಡಿಮೆ ಮಾಡುತ್ತದೆ.
4. ಕೌಟುಂಬಿಕ ಜೀವನವು ಹೆಚ್ಚು ಸೌಹಾರ್ದಯುತವಾಗಿರುತ್ತದೆ.
ಹುಣ್ಣಿಮೆ ದಿನದ ರಾತ್ರಿಯಲ್ಲಿ ಲಕ್ಷ್ಮಿಯು ತನ್ನನ್ನು ಆರಾಧಿಸಿದ ಭಕ್ತರ ಮನೆಗೆ ಪ್ರವೇಶಿಸುತ್ತಾಳೆ ಮತ್ತು ಭಕ್ತರನ್ನು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ ಮತ್ತು ಆ ದಿನವನ್ನು ಲಕ್ಷ್ಮಿ ಪೂಜೆ ದಿನ ಎಂದು ಕರೆಯುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
