fbpx
ಜೀವನ ಕ್ರಮ

ಈ ಲವ್ ಸ್ಟೋರೀಸ್ ನ ನೀವು ಓದಿದ್ರೆ ಸಿನಿಮಾ ಲವ್ ಸ್ಟೋರಿಗಳನ್ನು ಮರೆತೇ ಬಿಡುತ್ತೀರಿ..

ಈ ಲವ್ ಸ್ಟೋರೀಸ್ ನ  ನೀವು ಓದಿದ್ರೆ ಸಿನಿಮಾ ಲವ್ ಸ್ಟೋರಿಗಳನ್ನು ಮರೆತೇ ಬಿಡುತ್ತೀರಿ…

 

ಈ ಕಾಲದಲ್ಲಿ ಪ್ರೀತಿ ಎಂದ್ರೆ ಎಲ್ಲರೂ ಹಳೆಯ ಷಹಜಹಾನ್ ರೋಮಿಯೋ ಜೂಲಿಯಟ್ ಕತೆಗಳನ್ನ ಮತ್ತು ಸಿನಿಮಾ ಕತೆಗಳನ್ನ ನೆನಪಿಸಿಕೊಳ್ಳುತ್ತಾರೆ. ಆದ್ರೆ ಈ ಕೆಳಗೆ ಬರ್ದಿರುವ ಕತೆಗಳನ್ನ ನೀವು ಓದಿದ್ರೆ ಸಿನಿಮಾ ಕತೆಗಳಿಗೂ ಕಮ್ಮಿ ಇಲ್ಲ ಅಂದ್ಕೊತೀರಾ.
1.ಉತ್ತರ ಪ್ರದೇಶದ ನಿವೃತ್ತ ಪೋಸ್ಟ್ ಮಾಸ್ಟರ್ ಅವರು ತಮ್ಮ ಹೆಂಡತಿಗಾಗಿ ತಾಜ್ ಮಹಲ್ನ ಪ್ರತಿರೂಪವನ್ನು ನಿರ್ಮಿಸಿದ ಕತೆ.


ಫೈಝುಲ್ ಹಸನ್ ಖಾದ್ರಿ ಮತ್ತು ಅವರ ಪತ್ನಿ ಸಂತೋಷವಾಗಿ ಬದುಕಿನಲ್ಲಿ ಬಾಳಿದ್ದರು.ಅವ್ರಿಬ್ಬರಿಗೆ ಮಕ್ಕಳಿರ್ಲಿಲ್ಲ. ಅಕಸ್ಮಾತ್ ಅವನ ಹೆಂಡತಿ ಅವನಿಗಿಂತ ಮುಂಚೆ ಸತ್ತರೆ ನೆನಪಿಟ್ಟುಕೊಳ್ಳಲು ಅವಳ ಹೆಸ್ರಲ್ಲಿ ಒಂದು ಸ್ಮಾರಕವನ್ನ ಕಟ್ಟಿಸುವುದಾಗಿ ಅವರ ಪತ್ನಿಗೆ ಮಾತು ಕೊಟ್ಟಿದ್ರು.2011 ರಲ್ಲಿ ಕ್ಯಾನ್ಸರ್ನಿಂದ ಖಾದ್ರಿರವರ ಪತ್ನಿ ಸತ್ತಾಗ ಅವಳ ನೆನಪಿಗಾಗಿ ಥೇಟ್ ತಾಜ್ ಮಹಲ್ ನಂತೆಯೇ ಚಿಕ್ಕದಾಗಿ ಒಂದು ಸ್ಮಾರಕವನ್ನು ಕಟ್ಟಿಸಿದನು.ಅವ್ನು ಮಾಡಿದ್ದ ಎಲ್ಲ ಉಳಿತಾಯಗಳನ್ನು ಇದನ್ನ ನಿರ್ಮಿಸಿದನು. ಇವನು ಸತ್ತಾಗ ಷಹಜಹಾನ್ ನಂತೆಯೇ ಆ ಸ್ಮಾರಖದ ಪಕ್ಕದಲ್ಲೇ ಇವನ ಹೆಣವನ್ನ ಹೂಳಲಾಯಿತು.

2.ತನ್ನ ಪತ್ನಿಯನ್ನು ನೋಡಲು ಭಾರತದಿಂದ ಸ್ವೀಡನ್ ಗೆ ಸೈಕಲ್ ತುಳಿದ ಶೂರ:


ಪ್ರದ್ಯುಮ್ನ ಕುಮಾರ್ ಎಂಬ ಡೆಲ್ಲಿ ಕಲೆ ಕಾಲೇಜ್ ನ ವಿದ್ಯಾರ್ಥಿ ಷಾರ್ಲೆಟ್ ವಾನ್ ಶೆಡಿವಿನ್ ರನ್ನ ಮೊದಲ ಭಾರಿ ನೋಡಿ ಅವಳನ್ನು ಪ್ರೀತಿ ಮಾಡಲು ಶುರು ಮಾಡ್ದ. ಮುಂದೆ ಇವ್ನು ಟೈಮ್ ವೆಸ್ಟ್ ಮಾಡ್ದೆ ಅವಳನ್ನ ಮದ್ವೆಗೆ ಒಪ್ಪಿಸಿ ಅವಳನ್ನ ಮದ್ವೆ ಮಾಡ್ಕೊಂಡ. ಷಾರ್ಲೆಟ್ ವಾನ್ ಶೆಡಿವಿನ್ ಗೆ ಸ್ವೀಡನ್ ಗೆ ಹೋಗುವ ಅನಿವಾರ್ಯತೆ ಬಂದಾಗ ಇನ್ನು ಒಂದು ವರ್ಷ ವ್ಯಾಸಂಗ ಉಳಿದಿದ್ದರಿಂದ ಅವಳನ್ನ ಕಳಿಸಿ ನಂತರ ಅವನು ಹೋಗುವುದಾಗಿ ಮಾತುಕೊಟ್ಟನು . ಅವನ ಓದು ಮುಗಿಯಿತು ಆದರೆ ಅವನ ಮಾತಿನಂತೆ ಅವ್ನು ಸ್ವೀಡನ್ ಗೆ ಹೂಗಳು ಅವ್ನ ಬಳಿ ಬೇಕಾದ ದುಡ್ಡು ಇರ್ಲಿಲ್ಲ. ಆಗ ಅವ್ನು ಒಂದು ಸೈಕಲನ್ನು ತೆಗೆದುಕೊಂಡು ಅದರಲ್ಲೇ ಅವ್ನು ಸ್ವೀಡನ್ ನನ್ನ 1978ರಲ್ಲಿ ತಲುಪಿದ. ಈಗ ಅವರಿಬ್ಬರು ಯಶಸ್ವೀ ನಲವತ್ತು ವರ್ಷಗಳ ದಾಂಪತ್ಯ ಜೀವನವನ್ನು ಸಾಗಿಸಿದ್ದಾರೆ.

 

3.ಆಘಾತಕಾರಿ ಆಸಿಡ್ ದಾಳಿಗೊಳಗಾದ ಮಹಿಳೆಯ ಸಂತೋಷವಾದ ಬದುಕು.


ಲಕ್ಷಿ ಎಂಬ ಹುಡುಗಿ ಹದಿನಾರು ವರ್ಷದವಳಾಗಿದ್ದಾಗ ಅವಳ ಮೇಲೆ ಆಸಿಡ್ ದಾಳಿ ಆಗುತ್ತದೆ. ಇದ್ರಿಂದ ಅವ್ಳು ಅವಳ ಮುಖದ ಅಂದವನ್ನ ಕಳ್ಕೊಂಡಳು.ಅವಳನ್ನು ಮದುವೆಯಾಗಲೂ ಯಾರೂ ಸಹ ಒಪ್ಪೋದಿಲ್ಲ. 2014 ರಲ್ಲಿ ಅಲೋಕ್ ದೀಕ್ಷಿತ್ ಎಂಬ ಪತ್ರಕರ್ತ ಇವಳನ್ನ ನೋಡಿ. ಇವಳನ್ನು ಪ್ರೀತಿಸುತ್ತಾನೆ. ಈ ಸಮಾಜದ ನೀತಿಗಳಿಗೆ ವಿರುದ್ಧವಾಗಿ ಅವರು ಮಾಡುವೆ ಮಾಡ್ಕೊಳ್ದೆ ಒಟ್ಟಿಗೆ ಜೀವನವನ್ನು ನಡೆಸ್ತಿದ್ದಾರೆ. ಇವರಿಬ್ಬರಿಗೆ ಒಂದು ಹೆಣ್ಣು ಮಗುವಿದೆ.

4.ಅವನ ಹೆಂಡತಿ ಸತ್ತಿದ್ದಾಳೆ ಅಂತ ಅಧಿಕೃತ ವಾಗಿ ಘೋಷಣೆ ಯಾದ ನಂತರವೂ ಅವ್ನ ಹೆಂಡತಿಯನ್ನು ಬಿಡದ ಗಂಡ.


ವಿಜಯಕಾಂತ್ ಮತ್ತು ಅವನ ಹೆಂಡತಿಯಾದ ಲೀಲಾ ಸುಖವಾಗಿ ಸಂಸಾರ ನಡೆಸಿಕೊಂಡು ಬಂದಿದ್ದರು. ಒಮ್ಮೆ ಇವರು ಅವರ ಸ್ವಂತ ಊರಾದ ರಾಜಸ್ತಾನದ ಅಲ್ವರ್ ನಿಂದ ತೀರ್ಥಯಾತ್ರೆ ಗೆಂದು ಪ್ರಯಾಣ ಬೆಳೆಸಿದರು.ಅಲ್ಲಿ ಅಪಾಯಕಾರಿ ಪ್ರವಾಹವು ಬಂದು ಅವನ ಹೆಂಡ್ತಿ ಲೀಲಾ ಕಾಣೆಯಾದಳು. ಎಷ್ಟು ಹುಡುಕಿದರು ಸಿಗಲಿಲ್ಲ. ಆದ್ರೆ ವಿಜಯ್ ಕಾಂತ್ ಮಾತ್ರ ಹುಡುಕುವುದನ್ನು ನಿಲ್ಲಿಸಲಿಲ್ಲ. ಸ್ಥಳೀಯ ಸರ್ಕಾರ ಅವ್ನ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಅಧಿಕೃತವಾಗಿ ಘೋಷಿಸಿದರೂ ಅವನು ಮಾತ್ರ ಅವಳನ್ನು ಹುಡುಕುವುದನ್ನು ನಿಲ್ಲಿಸಲಿಲ್ಲ.

ಅವಳ ಒಂದು ಫೋಟೋವನ್ನು ಇಟ್ಟುಕೊಂಡು ಸುತ್ತ ಮುತ್ತ ಎಲ್ಲ ಊರು ಕೇರಿಗಳಲ್ಲಿ ಹುಡುಕುತ್ತ ಸಿಕ್ಕ ಜನರ ಹತ್ರ ಆ ಫೋಟೋ ತೋರಿಸಿ. ಎಲ್ಲಾದರು ಇವರನ್ನ ನೋಡಿದ್ದೀರಾಅಂಥ ಕೇಳುತ್ತ ಸತತ ಎರಡು ವರ್ಷಗಳ ಕಾಲ ಹುಡುಕಿದ. ಒಮ್ಮೆ ಗಂಗೋಲಿ ಎಂಬ ಹಳ್ಳಿಯಲ್ಲಿ ತನ್ನ ಹೆಂಡ್ತಿ ಯನ್ನ ಕಂಡನು. ಆದರೆ ಅವಳು ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ ಅವನನ್ನು ಗುರುತಿಸಲಿಲ್ಲ. ಅವ್ನು ತಕ್ಷಣ ಅವಳನ್ನು ಮನೆಗೆ ಕರೆದುಕೊಂಡು ಬಂದನು. ಈಗ ಅವಳು ಮನೆ ಮಂದಿಯ ಪ್ರೀತಿಗೆ ಪಾತ್ರಳಾಗಿ ಗುಣಮುಖವಾಗಿದ್ದಾಳೆ.

5. ಈ ಮನುಷ್ಯನು ಸಮಯಕ್ಕೆ ತನ್ನ ಹೆಂಡತಿಯನ್ನು ನೋಡಲು ನೀರಿನ ಮೇಲೆ ಸವಾರಿ ಮಾಡುವ ಬೈಸಿಕಲ್ ಅನ್ನು ಕಂಡುಹಿಡಿದ.


ಬಿಹಾರದ ಮೋತಿಹಾರಿಯ ಮೊಹಮ್ಮದ್ ಸೈದುಲ್ಲಾ ಅವರ ಹಳ್ಳಿಯಲ್ಲಿ ಯಾವಾಗಲೂ ದೋಣಿಗಳು ಜನರಿಂದ ಕಿಕ್ಕಿರಿಯುತ್ತಿದ್ದವು ಮತ್ತು ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿರಲಿಲ್ಲ.ಅವನು ಕೆಲಸ ಮುಗಿದ ಮೇಲೆ ಮನೆಗೆ ಹೋಗಲು ತುಂಬಾ ಹಿಂಸೆ ಪಡಬೇಕಾಗಿತ್ತು ಮತ್ತು ಅವನ ಹೆಂಡಿತಿಯನ್ನು ಕಾಯಿಸುವುದು ಅವನಿಗೆ ಇಷ್ಟ ಇರ್ಲಿಲ್ಲ ಹಾಗಾಗಿ ಭೂಮಿಯ ಮೇಲೆ ಮತ್ತು ನೀರಿನಮೇಲೆ ಈರದು ಕಡೆಯಲ್ಲೂ ಚಲಿಸುವ ಸೈಕಲನ್ನು ಸಂಶೋದಿಸುತ್ತಾನೆ.ಇವನು ಕೇವಲ ಸೈಕಲ್ ಮಾತ್ರವಲ್ಲದೆ ಮಿನಿ ಟ್ರಾಕ್ಟರ್, ಸ್ವಯಂಚಾಲಿತ ಟೇಬಲ್ ಫ್ಯಾನ್, ಮತ್ತು ವಿದ್ಯುತ್ ಉತ್ಪಾದನೆಗೆ ಮಿನಿ ಟರ್ಬೈನ್ ಗಳನ್ನು ಸಹಾ ಇವನೇ ಶಂಶೋದಿಸಿದ್ದನು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top