fbpx
ಭವಿಷ್ಯ

2 ಜೂಲೈ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೨ ಜುಲೈ ೨೦೧೭
ಸೂರ್ಯೋದಯ : ೦೫:೩೧
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಶುಕ್ಲ ಪಕ್ಷ
ತಿಥಿ : ನವಮೀ
ನಕ್ಷತ್ರ : ಚೈತ್ರ
ಯೋಗ : ಶಿವ
ಅಮೃತಕಾಲ : ೧೭:೦೨ – ೧೮:೪೬

ರಾಹು ಕಾಲ: ೧೭:೩೫ – ೧೯:೧೮
ಗುಳಿಕ ಕಾಲ: ೧೫:೫೧ – ೧೭:೩೫
ಯಮಗಂಡ: ೧೨:೨೫ – ೧೪:೦೮

ಮೇಷ (Mesha)


ನೂತನ ವೃತ್ತಿ ಕೈಗೊಳ್ಳದಿರಿ. ಬಂಧುಗಳಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕದಿರಿ. ವೃತ್ತಿರಂಗದಲ್ಲಿ ಚಿಂತಿತ ಕಾರ್ಯಗಳು ವಿಳಂಬ ಗತಿಯಲ್ಲಿ ನಡೆಯಲಿವೆ. ಆಗಾಗ ಸಮಸ್ಯೆಗಳೇ ತೋರಿ ಬಂದು ಸಮಾಧಾನ ಸಿಗಲಾರದು.

ವೃಷಭ (Vrushabh)


ಆರೋಗ್ಯ ವೃದ್ಧಿ. ಧನಾಭಿವೃದ್ಧಿ ಅನುಭವಕ್ಕೆ ಬರಲಿದೆ. ಆದರೂ ಅನೇಕ ರೀತಿಯ ಖರ್ಚುವೆಚ್ಚಗಳು ತೋರಿ ಬರಲಿವೆೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗವನ್ನು ಹೊಂದಲಿದ್ದಾರೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ.

ಮಿಥುನ (Mithuna)


ದಾಂಪತ್ಯದಲ್ಲಿ ಸುಖ ಸಂತೋಷಗಳು ತೋರಿ ಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ತೋರಿ ಬರಲಿದೆ. ನಿರುದ್ಯೋಗಿಗಳಿಗೆ ಸದ್ಯದಲ್ಲೇ ಉದ್ಯೋಗ ಲಾಭವಿದೆ.

ಕರ್ಕ (Karka)


ಅಹಂಭಾವದಿಂದ ಮುಂದುವರಿಯದಿರಿ. ಕೆಲಸಕಾರ್ಯಗಳಲ್ಲಿ ಯೋಚಿಸಿ, ಚಿಂತಿಸಿ, ಮುಂದುವರಿಯಿರಿ. ಆರ್ಥಿಕವಾಗಿ ಆಗಾಗ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಿತಶತ್ರುಗಳು ನಿಮ್ಮನ್ನು ಕೆಣಕಲಿದ್ದಾರೆ. ಜಾಗ್ರತೆ ಇರಲಿ.

ಸಿಂಹ (Simha)


ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗೆ ಒಳಗಾಗದೆ ದೃಢ ನಿರ್ಧಾರದಿಂದ ಮುಂದುವರಿಯಿರಿ. ದೈವಾನುಗ್ರಹ ಉತ್ತಮವಿರುವುದರಿಂದ ಒಂದೊಂದಾಗಿ ನಿಮ್ಮ ಕಷ್ಟನಷ್ಟಗಳು ದೂರವಾಗಲಿವೆ. ಪ್ರಾರ್ಥಿಸಿರಿ.

ಕನ್ಯಾರಾಶಿ (Kanya)


ಕೊಟ್ಟ ಹಣವು ಹಿಂದಿರುಗದೆ ಚಿಂತಿತರಾಗ ಬೇಕಾಗುತ್ತದೆ. ಸಾಂಸಾರಿಕವಾಗಿ ಅಭಿವೃದ್ಧಿ. ಮಕ್ಕಳಿಂದ ಸುಖ ಶಾಂತಿ ತೋರಿ ಬಂದೀತು. ಅನಿರೀಕ್ಷಿತ ಧನ ಲಾಭ ಅಚ್ಚರಿ ತಂದೀತು. ದಿನಾಂತ್ಯ ಶುಭ.

ತುಲಾ (Tula)


ನಿಮ್ಮ ಮನೋಕಾಮನೆ ಒಂದೊಂದಾಗಿ ಸದ್ಯದಲ್ಲೇ ನೆರವೇರಲಿವೆ. ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು ಹೊಸ ಚಿಂತನೆಗಳು ಮುನ್ನಡೆಗೆ ಸಾಧಕವಾದೀತು. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಫ‌ಲಿತಾಂಶ ಪಡೆಯಲಿದ್ದಾರೆ.

ವೃಶ್ಚಿಕ (Vrushchika)


ನೂತನ ವ್ಯಾಪಾರ ವ್ಯವಹಾರಗಳನ್ನು ಸಮಾಧಾನ ಚಿತ್ತರಾಗಿ ಮುಂದುವರಿಸಿರಿ. ಯೋಗ್ಯ ವಯಸ್ಕರ ವಿವಾಹ ಪ್ರಸ್ತಾವಗಳಿಗೆ ಅಡೆತಡೆಗಳು ತೋರಿ ಬಂದಾವು. ಹಣಕಾಸಿನ ಬಗ್ಗೆ ಹೆಚ್ಚಿನ ಹಿಡಿತ ಇರಲಿ.

ಧನು ರಾಶಿ (Dhanu)


ಆಗಾಗ ಅತಿಥಿಗಳ ಆಗಮನದಿಂದ ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಲಾಭಸ್ಥಾನದ ಕೇತು ಅನಿರೀಕ್ಷಿತ ಉತ್ತಮ ಅನುಕೂಲತೆಯನ್ನು ಕೊಡಲಿದ್ದಾರೆ. ಬಂಧುಮಿತ್ರರ ಸಹಕಾರ ಮುನ್ನಡೆಗೆ ಸಾಧಕವಾದರೂ ಪ್ರಯತ್ನಬಲ ಆಗತ್ಯ.

ಮಕರ (Makara)


ಅಷ್ಟಮದ ರಾಹು ಸಾಂಸಾರಿಕವಾಗಿರಲಿ, ಕೌಟುಂಬಿಕವಾಗಿರಲಿ, ವೃತ್ತಿರಂಗದಲ್ಲಿ ಆಗಾಗ ಪ್ರತಿಕೂಲ ಪರಿಣಾಮಗಳನ್ನು ನೀಡಬಹುದು. ಜಾಗ್ರತೆಯಿಂದ ಮುಂದುವರಿದಲ್ಲಿ ದೈವಾನುಗ್ರಹಬಲ ಸಾಧಕ ವಾಗಲಿದೆ.

ಕುಂಭರಾಶಿ (Kumbha)


ಅನಿರೀಕ್ಷಿತ ಖರ್ಚುವೆಚ್ಚಗಳು ಆರ್ಥಿಕವಾಗಿ ಹಿನ್ನಡೆಯನ್ನು ತರಬಹುದು. ಸಾಂಸಾರಿಕವಾಗಿ ಹೊಂದಾಣಿಕೆಯ ಮನೋಭಾವದಿಂದ ಮುಂದುವರಿದಲ್ಲಿ ಭವಿಷ್ಯದಲ್ಲಿ ಅನುಕೂಲ ಸ್ಥಿತಿಯನ್ನು ಕೊಡಲಿದೆ. ದಿನಾಂತ್ಯ ಶುಭವಿದೆ.

ಮೀನರಾಶಿ (Meena)


ದೇಹಾರೋಗ್ಯ ಉತ್ತಮ ರೀತಿಯಲ್ಲಿ ಸುಧಾರಣೆ ತಂದರೂ ಜಾಗ್ರತೆ ಅತೀ ಆಗತ್ಯವಿದೆ. ಆಗಾಗ ಧನಾಗಮನದಿಂದ ಕಾರ್ಯಸಿದ್ಧಿ ಉಂಟಾಗಲಿದೆ. ನೆರೆಹೊರೆಯವರು ನಿಮ್ಮ ವಿಶ್ವಾಸದ ದುರುಪಯೋಗವನ್ನು ಪಡೆದಾರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top