ಕೇವಲ ಒಂದು ರೂಪಾಯಿಯಿಂದ ರಿಂದ 450ಕೋಟಿ ರೂ ಗಳಿಸಿದ ಕಥೆ.
ರಮೇಶ್ ಅಗರವಾಲ್ ಎನ್ನುವವರು ಭಾರತೀಯ ವಾಯುದಳದಲ್ಲಿ ಕೆಲಸ ಮಾಡುತ್ತಿದ್ದರು. ಇವರು 1987ರಲ್ಲಿ ನಿವೃತ್ತಿಯನ್ನು ಹೊಂದಿದರು. ಅವರು ನಿವೃತ್ತಿಯನ್ನು ಹೊಂದುವ ಹೊತ್ತಿಗೆ ಅವರ ಬಳಿ ಇದ್ದಿದ್ದ ಹಣ ಕೇವಲ ಒಂದು ರೂಪಾಯಿ ಮಾತ್ರ.ಹೌದು, ಅವರು ಸಂಪಾದನೆ ಮಾಡಿದ್ದ ಎಲ್ಲ ಹಣವನ್ನು ಬಡವರಿಗೆ,ನಿರ್ಗತಿಕರಿಗೆ ದಾನವನ್ನು ಮಾಡಿದ್ದರು.
ಆದರೂ ಅವರು ಒಂದು ಹೊಸ ವ್ಯವಹಾರವನ್ನು ಪ್ರಾರಂಭ ಮಾಡುವ ಯೋಚನೆಯಲ್ಲಿದ್ದರು ಆದರೆ ಅವರ ಬಳಿ ಬಂಡವಾಳವೇ ಇರಲಿಲ್ಲ. ಆಗ ಭಾರತೀಯ ವಾಯುಪಡೆಯ ಅಧಿಕಾರಿ, ಶ್ರೀ ಸುಭಾಷ್ ಗುಪ್ತಾ ಅವರು ‘ಪ್ಯಾಕರ್ ಮತ್ತು ಮೋವರ್'(ರಿಪೇರಿ ಮಾಡುವ ಮತ್ತು ಸಾಗಾಟನೆ ಮಾಡುವ) ಸೇವೆಯನ್ನು ಪ್ರಾರಂಭಿಸಲು ಒಂದು ಐಡಿಯಾವನ್ನು ಕೊಟ್ಟರು.ಇವರ ಮಾತಿನಿಂದ ಪ್ರಭಾವಿತರಾದ ಅಗರ್ವಾಲ್ ರವರು ಇವರು ತಿಂಗಳಿಗೆ 250 ರೂ.ಬಾಡಿಗೇಯ ಒಂದು ಮನೆಯನ್ನು ಬಾಡಿಗೆಯನ್ನು ಪಡೆದು ಅದರಲ್ಲಿ ‘ಅಗರ್ವಾಲ್ ಪ್ಯಾಕರ್ಸ್ & ಮೊವೆರ್ಸ್’ ಈ ಸೇವಾ ವ್ಯವಹಾರವನ್ನು ಪ್ರಾರಂಭ ಮಾಡುತ್ತಾರೆ.
ಅಲ್ಲಿ ಅವರು ಭಾರತೀಯ ವಾಯುಪಡೆಯ ಟ್ರಕ್ಗಳನ್ನು ಬಳಸಿ ವಸ್ತುಗಳನ್ನು ಸಾಗಾಟನೆಯನ್ನು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರು ನಡೆಸುತ್ತಿದ್ದ ವ್ಯವಹಾರವು ಅವರ ಮನೆಯ ಬಾಡಿಗೆಯನ್ನು ಕಟ್ಟಲೂ ಸಹ ಸಾಲುತ್ತಿರಲಿಲ್ಲ. ಅಗರ್ವಾಲ್ ರಿಗೆ ವ್ಯವಹಾರವನ್ನು ವಿಸ್ತರಣೆ ಮಾಡುವುದು ಅಗತ್ಯವಾಗಿತ್ತು. ಆಗ ಹಣದ ಅವಶ್ಯಕತೆ ಇದ್ದಾಗ ಇವರಿಗೆ ಇವರ ಗೆಳೆಯನಾದ ವಿಜಯ್ ಎಂಬುವವರು 4000.ರೂಗಳ ಸಾಲವನ್ನು ನೀಡುತ್ತಾರೆ. ವ್ಯವಹಾರದಲ್ಲಿ ಅಗರ್ವಾಲ್ ರವರಿಗೆ ಈ ನಾಲ್ಕು ಸಾವಿರ ಅಗರ್ವಾಲ್ ರವರಿಗೆ ಎಂಟು ಸಾವಿರವಾಗುತ್ತದೆ ಮತ್ತು ಗೆಳೆಯ ವಿಜಯ್ ರ ಸಾಲವನ್ನು ತೀರಿಸುತ್ತಾರೆ.
ಕೆಲವು ಸ್ನೇಹಿತರ ಮತ್ತು ಸಂಬಂಧಿಕರ ಸಹಾಯದಿಂದ, ಅವರು ತಮ್ಮ ಸೇವೆಗಳನ್ನು ಪ್ಯಾಕರ್ ಮತ್ತು ಮೂವರ್ ಸೇವೆಗಳನ್ನು ನೀಡಿದರು.ಅವರ ಸ್ವಂತ ಕೆಲಸದಿಂದ ಒಂದು ಟ್ರಕ್ ಅನ್ನು ಖರೀದಿ ಮಾಡಿದರು.1993 ರಲ್ಲಿ, ಅಗರ್ವಾಲ್ ರಿಪೇರಿ ಮತ್ತು ಸಾಗಣೆದಾರರು GE ಹಣಕಾಸು ಸಹಾಯದಿಂದ ಮೂಲಕ ಹೆಚ್ಚಿನ ಟ್ರ್ಯಾಕ್ ಗಳನ್ನೂ ಖರೀಧಿ ಮಾಡಿದರು.ಮುಂದೆ ಇವರು ದೇಶೀಯ ವರ್ಗಾವಣೆ, ಅಂತರರಾಷ್ಟ್ರೀಯ ವರ್ಗಾವಣೆ, ಮತ್ತು ಕಾರು ಸಾರಿಗೆಯನ್ನು ಪ್ರಾರಂಭ ಮಾಡಿ ತಮ್ಮ ವ್ಯವಹಾರವನ್ನು ವಿಸ್ತರಿಸುತ್ತಾರೆ.ಅವರ ಅತ್ಯುತ್ತಮ ಸೇವೆಗಳನ್ನು ರಾಷ್ಟ್ರೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಗುರುತಿಸಲಾಯಿತು.
ಪ್ರಾರಂಭದ ದಿನಗಳಲ್ಲಿ ಎಷ್ಟೊಂದು ಸಮಸ್ಯೆಯನ್ನು ಎದುರಿಸುತ್ತಿದ್ದ ಆ ಸಂಸ್ಥೆಯು ಇಂದು 450 ಕೋಟಿ ರುಪಾಯಿಗೆ ಬೆಲೆ ಬಾಳುತ್ತದೆ.ವ್ಯವಹಾರಕ್ಕಾಗಿ ವಾಯುಪಡೆಯ ಟ್ರಕ್ ಗಳನ್ನೂ ಬಳಸುತ್ತಿದ್ದ ಸಂಸ್ಥೆಯಲ್ಲಿ ಒಂದು ಸಾವಿರ ಟ್ರಕ್ ಗಳು ಇವೆ.
ಶ್ರೀ ಅಗರ್ ವಾಲ್ ರವರ ಕಠಿಣ ಶ್ರಮ ಛಲದಿಂದ ಅವರು ಇಂದು ಸಾಧನೆಯ ಉತ್ತುಂಗ ಶಿಖರದಲ್ಲಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
