fbpx
ದೇವರು

ಆಷಾಢದ ಮೊದಲ ಏಕಾದಶಿಯ ವಿಶೇಷ, ಆ ದಿನದಂದು ಪಾಲಿಸಬೇಕಾದ ಉಪವಾಸ ನಿಯಮಗಳು.

ಪ್ರಥಮ ಏಕಾದಶಿಯ ವಿಶೇಷ.

ಆಷಾಢದ ಮೊದಲ ಏಕಾದಶಿಯ ದಿನದಂದು ಪಾಲಿಸಬೇಕಾದ ಉಪವಾಸ ನಿಯಮಗಳು.

ಯಾವ ಶುಭ ಕಾರ್ಯಗಳನ್ನು  ಪ್ರಾರಂಭ ಮಾಡಬೇಕಾದರೂ, ದಶಮಿ,ಏಕಾದಶಿ ಗೋಸ್ಕರ ಕಾಯುತ್ತಾ ಇರುವುದು ಜನರಿಗೆ  ಅಭ್ಯಾಸ ಆಗಿಬಿಟ್ಟಿದೆ.

ವರ್ಷದ ಪೂರ್ತಿಯಲ್ಲಿ  ಬರುವ 24 ಎಕಾದಶಿಯಲ್ಲಿ ಆಷಾಢ ಶುಕ್ಲ ಏಕಾದಶಿಯನ್ನು ಮೊದಲ ಆಷಾಢ ಏಕಾದಶಿ ಅಥವಾ ಶಯನ ಏಕಾದಶಿ ಎಂದು ಪರಿಗಣಿಸುತ್ತಾರೆ.

ಪೂರ್ವ ಕಾಲದಲ್ಲಿ  ಈ ದಿನವನ್ನು ವರ್ಷದ ಪ್ರಾರಂಭದ  ದಿನವೆಂದು ಪರಿಗಣಿಸುತ್ತಿದ್ದರು.ಉಪವಾಸವನ್ನೇ ಒಂದು ಪರಮ  ಔಷಧವೆಂದು ಭಾವಿಸಿ ಉಪವಾಸ ಮಾಡುವ ಈ ದಿನವೇ ಆಷಾಢ ಏಕಾದಶಿಯ ಪರ್ವದಿನ.

ಆಷಾಢ ಮಾಸದ ಶುಕ್ಲ ಪಕ್ಷ ಏಕಾದಶಿಯ ದಿನದಂದು ವಿಷ್ಣುಮೂರ್ತಿ ಹಾಲಿನ ಕಡಲಿನ ಮೇಲೆ ಯೋಗ ನಿದ್ದೆಯಲ್ಲಿ ಇರುವ ಸಂದರ್ಭದಲ್ಲಿ  ಆಷಾಢ ಮೊದಲ ಏಕಾದಶಿಯಾಗಿ ಪರಿಗಣಿಸುತ್ತಾರೆ.

ಸ್ವಾಮಿಯು  ನಿದ್ದೆ ಮಾಡುವ ದಿನವಾಗಿರುವುದರಿಂದ ಇದನ್ನು ಶಯನ ಏಕಾದಶಿ ಎಂದು ಸಹ ಕರೆಯುತ್ತಾರೆ.

ಸತಿ ಸಕ್ಕು ಬಾಯಿಯವರಿಗೆ ಆಷಾಢ ಏಕಾದಶಿ ದಿನದಂದೇ ಮೋಕ್ಷ ಪ್ರಾಪ್ತಿ ಸಿಕ್ಕಿದ್ದು ಎಂದು ಪುರಾಣಗಳು ಹೇಳುತ್ತವೆ.

ಏಕಾದಶಿ ದಿನದಂದು ಇಡೀ ದಿನವೆಲ್ಲ ಉಪವಾಸ ಮಾಡುತ್ತಾರೆ. ಹಲವಾರು ಜನರು ಪ್ರತಿ ಏಕದಶಿಯನ್ನು ಶ್ರದ್ಧೆ ಭಕ್ತಿಯಿಂದ ಉಪವಾಸವನ್ನು ಮಾಡುತ್ತಾರೆ.

ಆದರೆ ಮುಖ್ಯವಾಗಿ ಮೂರು ಏಕದಶಿ  ಮಾತ್ರ ತುಂಬಾ ಶ್ರೇಷ್ಠವಾದದ್ದು. ಅಂದರೆ ಆಷಾಢದ ಮೊದಲ ಏಕಾದಶಿ,ವೈಕುಂಠ ಏಕಾದಶಿ, ಭೀಷ್ಮ ಏಕಾದಶಿಯಂದು ಉಪವಾಸವನ್ನು ಮಾಡಿದರೆ ಇನ್ನೂ ತುಂಬಾ ಶ್ರೇಷ್ಠವಾದುದು.

ಉಪವಾಸವೆಂದರೆ ಆಹಾರವನ್ನು ತ್ಯಜಿಸುವುದು ಮಾತ್ರವೇ ಅಲ್ಲದೆ. ಅದರ ಜೊತೆಗೆ ಕೀರ್ತನೆಯನ್ನು ಕೇಳುವುದು,ಭಜನೆ ಮಾಡುವುದು ಮತ್ತು ಜಪವನ್ನು ಮಾಡುವುದು, ದೇವರಿಗೆ ಪೂಜೆಯನ್ನು ಮಾಡುವುದು, ದೇವಸ್ಥಾನಕ್ಕೆ  ಹೋಗುವುದು,ದಾನವನ್ನು ಕೊಡುವುದು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡಬೇಕು.

ಉಪವಾಸ ಮಾಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನು ಮಹಾಭಾರತದಲ್ಲಿ ಭೀಮನ ಸಂದೇಹ ದೂರ ಮಾಡಲು 4 ರೀತಿಯ ಉಪವಾಸ ನಿಯಮಗಳನ್ನು ವಿವರಿಸಿದ್ದಾನೆ…

ನಿಯಮ 1- ನೀರನ್ನು ಸಹ ಕುಡಿಯದೇ,ಮರುದಿನ ಸೂರ್ಯೋದಯವಾಗಿ  ದೈವಾರಾಧನೆ ಆಗುವವರೆಗೂ ಭಕ್ತಿ,ಶ್ರದ್ಧೆಯಿಂದ ಉಪವಾಸ ಮಾಡುವುದು.

ನಿಯಮ 2-  ಕೇವಲ ದ್ರವ ಪದಾರ್ಥಗಳಾದ ಹಾಲು,ನೀರನ್ನು ಮಾತ್ರ  ಸೇವಿಸುತ್ತಾ ದೇವರನ್ನು ನೆನೆದು ಉಪವಾಸ ಮಾಡುವುದು.

ನಿಯಮ 3- ಕೇವಲ ಹಣ್ಣು ಹಂಪಲುಗಳನ್ನು ಮಾತ್ರ ಸೇವಿಸಿ ಉಪವಾಸ ಮಾಡಬಹುದು.

ನಿಯಮ 4- ಅಲ್ಪ ಆಹಾರವನ್ನು ಸೇವಿಸುತ್ತಾ ಆ ದಿನದಂದು ಉಪಾವಸ ವ್ರತವನ್ನು ಆಚರಿಸುವುದು.

ಅವರವರ ದೇಹದ ಶಕ್ತಿಯ ಅನುಸಾರವಾಗಿ, ಈ ನಿಯಮದಲ್ಲಿ ಯಾವುದಾದರೂ ಒಂದು ಉಪವಾಸ ನಿಯಮವನ್ನು ಆಯ್ಕೆ ಮಾಡಿ ಅನುಸರಿಸುವುದರಿಂದ ಜನ್ಮ ಜನ್ಮದ ಪಾಪಗಳು ತೊಲಗಿ,ಮುಕ್ತಿ ದೊರಕುತ್ತವೆ ಎಂದು ಮಹಾಭಾರತದಲ್ಲಿ ಶ್ರೀ ಕೃಷ್ಣನು ಭೀಮನಿಗೆ ಉಪದೇಶ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top