ಕತ್ತೆಯ ನಿಯತ್ತು ..
ಒಂದೂರಲ್ಲಿ ಒಬ್ಬ ಅಗಸನಿದ್ದನು. ಅವನ ಹತ್ರ ದಷ್ಟಪುಷ್ಟವಾಗಿ ಬೆಳೆದಿದ್ದ ಎರಡು ಕತ್ತೆಗಳಿದ್ದವು. ಅವನ ಎಲ್ಲ ಕೆಲಸಗಳಿಗೆ ಕೆಲ್ಸಗಳಿಗೆ ಅವನು ಆ ಎರಡು ಕತ್ತೆಗಳನ್ನೇ ಅವಲಂಬಿಸಿದ್ದನು. ಕತ್ತೆಗಳು ಆ ಅಗಸನು ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದವು. ಕತ್ತೆಯು ಭಾರದ ಬಟ್ಟೆಗಳನ್ನು ಹೊತ್ತುಕೊಂಡು ಊರಿನ ಆಚೆಯಿದ್ದ ಒಂದು ಕೆರೆಯಲ್ಲಿಗೆ ಹೋಗುತ್ತಿದ್ದವು. ಕತ್ತೆಯ ಮೇಲೆ ಬಟ್ಟೆ ಹೊರಿಸಿ ಅಗಸನು ಹಿಂದೆ ಬರುತ್ತಿದ್ದನು.
ಹೀಗೆ ದಿನ ಕಳೆದಂತೆ ಆ ಅಗಸನು ಆ ಕತ್ತೆಗಳ ಸಹಾಯದಿಂದ ತುಂಬ ಎತ್ತರಕ್ಕೆ ಬೆಳೆಯುತ್ತಾನೆ ತನ್ನ ಮನೆಯಲ್ಲೆ ಬಟ್ಟೆಗಳನ್ನೂ ಇಸ್ತ್ರೀ ಮಾಡುತ್ತಿದ್ದವನು ಈಗ ಮಳಿಗೆಯಲ್ಲಿ ಲಾಂಡ್ರಿ ಅಂಗಡಿಯನ್ನು ಪ್ರಾರಂಭಿಸಿದ್ದಾನೆ. ಅದೃಷ್ಟ ಖುಲಾಯಿಸಿ ಆ ಅಗಸನು ಶ್ರೀಮಂತನಾದನು.ನಂತರ ಅವನು ಮದುವೆಯನ್ನೂ ಮಾಡಿಕೊಂಡನು. ಆದರೆ ಅಗಸನ ಪತ್ನಿಗೆ ಕತ್ತೆಗಳು ಅವರ ಬಳಿ ಇರುವುದು ಇಷ್ಟವಾಗುವುದಿಲ್ಲ. ಅವಳು “ಈ ಹಾಳಾದ್ ಕತ್ತೆಗಳು ನಿಮಗೇಕೆ ಬೇಕು ಯಾವುದಾದರೂ ಕಾಡಿಗೆ ಬಿಟ್ಟುಬಿಡಿ’ ಎನ್ನುತ್ತಾಳೆ.
ಲಾಂಡ್ರಿಯಲ್ಲೆ ಬಟ್ಟೆಒಗೆಯುತ್ತದ್ದರಿಂದ ಈಗ ಕತ್ತೆ ತನಗೆ ಉಪಯೋಗವಿಲ್ಲ ಎಂದು ಅಗಸ ಕತ್ತೆಯನ್ನು ಕಾಡಿಗೆ ಬಿಡಲು ತೀರ್ಮಾನಿಸುತ್ತಾನೆ.ಆದರೆ ಅಗಸನ ತಾಯಿ “ಕತ್ತೆಗಳು ಅನಾದಿ ಕಾಲದಿಂದಲೂ ನಿಮ್ಮ ಅಪ್ಪ, ತಾತಂದಿರ ಕಾಲದಿಂದಲೂ ನಮ್ಮಲ್ಲಿ ದುಡಿಯುತ್ತಿವೆ. ಕತ್ತೆಯನ್ನು ಈ ಪರಿ ದುಡಿಸಿಕೊಂಡ ನಾವು ಈಗ ಈ ರೀತಿ ಮಾಡುವುದು ಸರಿಯಲ್ಲ. ಯಾವಾಗಲೂ ನಾವು ಹತ್ತಿದ ಏಣಿಯನ್ನು ಮರೆಯಬಾರದು ಮತ್ತು ಒದೆಯಬಾರದು, ಕತ್ತೆಗಳನ್ನು ಕಾಡಿಗೆ ಬಿಡುವ ಬದಲು ಕತ್ತೆಗಳ ಅವಶ್ಯಕತೆ ಇರೋ ಇನ್ನೊಬ್ಬ ಅಗಸನಿಗೆ ಕೊಟ್ಟಿಬಿಡು’ ಎಂದಳು.ಅದಕ್ಕೆ ಅಗಸನು “ಆಗಲಿ ಅಮ್ಮ’ ಎಂದು ಹೇಳುತ್ತಾನೆ.
ಆದರೆ ಅವಾಗ ನಗರದಲ್ಲಿ ಯಾವೊಬ್ಬ ಅಗಸನೂ ಈಗ ಕತ್ತೆ ಉಪಯೋಗಿಸುತ್ತಿರಲಿಲ್ಲ. ಹೀಗಾಗಿ ಅವನ್ನು ತೆಗೆದುಕೊಳ್ಳುವವರೇ ಇರಲಿಲ್ಲ. ಕಾಡಿಗೆ ಬಿಟ್ಟರೆ ಅಮ್ಮ ಬಯ್ಯುತ್ತಾಳೆ, ಬಿಡದಿದ್ದರೆ ಹೆಂಡತಿ ಸಿಡುಕುತ್ತಾಳೆ ಎಂದು ಅಗಸನಿಗೆ ಎನು ಮಾಡುವುದು ಎಂಬುದು ತಿಳಿಯದಾಯಿತು. ಹೀಗಿರುವಾಗ ಒಂದು ದಿನ ಅಗಸನ ತಾಯಿ ತೀರಿಕೊಂಡಳು.ಇದಾಗಿ ಕೆಲವೇ ದಿನಗಳಲ್ಲೇ ಕತ್ತೆಗಳನ್ನು ಹೊಡೆದು ಬಡೆದು ಕಾಡಿನತ್ತ ಓಡಿಸುತ್ತಾನೆ.ಕಾಡಿಗೆ ಹೋದ ಕತ್ತೆಗಳನ್ನು ಅಗಸನು ತಿರಿಗಿಯೂ ಸಹ ನೋಡಲಿಲ್ಲ ಆದರೆ ಕತ್ತೆಗಳು ಮಾತ್ರ ಅಗಸನು ಕಾಣುವವರೆಗೂ ಅವನನ್ನೇ ನೋಡುತ್ತಿದ್ದವು.
ಅಗಸ ಹೋದ ಸ್ವಲ್ಪ ಹೊತ್ತಿನಲ್ಲೇ ಕತ್ತೆಗಳು ಕಾಡಿನಿಂದ ಅಗಸನ ಮನೆಯ ದಾರಿ ಹಿಡಿದು ಮರಳಿ ಬಂದವು. ಅಷ್ಟರಲ್ಲಿ ಕತ್ತಲಾಗಿತ್ತು.ಅಗಸನ ಮನೆಗೆ ಕಳ್ಳರು ನುಗ್ಗಿ ಅಗಸನ ಕುತ್ತಿಗೆಗೆ ಚಾಕು ಹಿಡಿದು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಎರಡು ಕತ್ತೆಗಳು ಜೋರಾಗಿ ಕೂಗಲು ಪ್ರಾರಂಭಿಸಿದವು. ಕತ್ತೆಗಳ ಕೂಗಿನಿಂದ ಅಕ್ಕ ಪಕ್ಕದವರು ನಿದ್ದೆಯಿಂದೆದ್ದು ಹೊರಗಡೆ ಬಂದರು. ರಾತ್ರಿ ನಿದ್ದೆಗೆಡಿಸಿದ ಕತ್ತೆಗಳನ್ನು ಕೋಪದಿಂದ ಬಯ್ಯುತ್ತಾ ಅಗಸನಿಗೆ ಬಯ್ಯಲು ಹೋದಾಗ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದರು.ಅವರೆಲ್ಲರೂ ಒಂದೇಸಮನೆ ಮನೆಯೊಳಗಡೆ ನುಗ್ಗಿ ಅಗಸನ್ನು ರಕ್ಷಿಸಿದ್ದರಲ್ಲದೆ, ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
” ನಾನು ಕತ್ತೆಗಳನ್ನೂ ಹೊಡೆದು ಕಾಡಿಗೆ ಓಡಿಸಿದ್ದೆ . ಆದರೆ ಕತ್ತೆಗಳು ನಮ್ಮ ಮನೆಗೆ ಬಂದು ನನ್ನ ಜೀವವನ್ನೇ ಕಾಪಾಡಿವೆ.ಈ ಕತ್ತೆಗಳ ಋಣವನ್ನು ನಾನು ಹೇಗೆ ತೀರಿಸಲಿ” ಎನ್ನುತ್ತಾ ಭಾವುಕನಾಗಿ ಕತ್ತೆಯ ಮೈ ಸವರುತ್ತಾ ಒಳಗಡೆ ಕರೆದುಕೊಂಡು ಹೋದನು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
