ಹೊಟ್ಟೆಯ ಮೇಲೆ ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡ ಶ್ವೇತಾ ಶ್ರೀವಾತ್ಸವ್…!
ಗರ್ಭಿಣಿಯರು ತಮ್ಮ ತುಂಬು ಹೊಟ್ಟೆಯನ್ನು ಆದಷ್ಟು ಮುಚ್ಚಿಡಬೇಕು ಮತ್ತು ಸಾರ್ವಜನಿಕವಾಗಿ ತೋರಿಸಬಾರದು ಎನ್ನುವ ಕಾಲವಿತ್ತು.ಆದರೆ ಕಾಲ ಈಗ ಬದಲಾಗಿದೆ.ಸೆಲಿಬ್ರೆಟಿ ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯನ್ನು ಎಂಜಾಯ್ ಮಾಡಲು ತುಂಬುಹೊಟ್ಟೆಯ ಫೋಟೋ ತೆಗೆಸಿಕೊಳ್ಳುದು ಈಗ ಟ್ರೆಂಡ್ ಆಗಿದೆ. ಹಾಗೆಯೇ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ತುಂಬು ಗರ್ಭಿಣಿಯಾಗಿದ್ದು ಈಗ ಸುದ್ದಿಯಲ್ಲಿದ್ದಾರೆ.ಇವರು ತಮ್ಮ ಹೊಟ್ಟೆಯ ಮೇಲೆ ಮಗುವಿನ 3D ಬೆಲ್ಲಿ ಚಿತ್ರವನ್ನು ಬರೆಸಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.
3D ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಶ್ವೇತಾ ಶ್ರೀವಾತ್ಸವ್ ಹೊಟ್ಟೆಯಲ್ಲಿ ಮಲಗಿರುವ ಮಗುವಿನ ಚಿತ್ರವನ್ನು ಸುಂದರವಾಗಿ ಅವರ ಹೊಟ್ಟೆಯಮೇಲೆ ಬಿಡಿಸಿದ್ದಾರೆ.ಈ ರೀತಿ ಹೊಟ್ಟೆಯ ಮೇಲೆ ಬೆಲ್ಲಿ ಪೇಂಟಿಂಗ್ ಮಾಡಿಸಿರುವ ಶ್ವೇತಾ ಶ್ರೀವಾತ್ಸವ್ ರವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಈ ಚಿತ್ರವನ್ನು ಬಿಡಿಸಲು ಬಾದಲ್ ನಂಜುಂಡಸ್ವಾಮಿರವರು ಸತತ ಆರು ಗಂಟೆಗಳ ಕಾಲಗಳ ಸಮಯವನ್ನು ತೆಗೆದುಕೊಂಡಿದ್ದರು.
ಇನ್ನು ಈ ಚಿತ್ರದ ಕುರಿತು ಶ್ವೇತಾ ಶ್ರೀವಾತ್ಸವ್ ” ನನ್ನ ಗರ್ಭಾವಸ್ಥೆಯ ಕೊನೆಯ ಎರಡು ವಾರಗಳಲ್ಲಿ ನಾನು ಆಚರಿಸುತ್ತಿದ್ದೇನೆ ಮತ್ತು ಅದನ್ನು ಆಚರಿಸಲು ಬೇರೆ ಏನಾದರೂ ಮಾಡಲು ನನಗೆ ಬಯಕೆ ಇತ್ತು.ಈ ಬಯಕೆಯನ್ನು ಈಡೇರಿಸಲು ನನ್ನ ಪತಿ ಈ ಐಡಿಯಾ ಕೊಟ್ಟರು ಮತ್ತು ಅದು ನನನಿಗೂ ಇಷ್ಟವಾದ್ದರಿಂದ ಬಾದಲ್ ನಂಜುಂಡಸ್ವಾಮಿ ರನ್ನು ಕರೆಸಿ ಬೆಲ್ಲಿ ಚಿತ್ರವನ್ನು ಬರೆಸಿಕೊಂಡಿದ್ದೇನೆ. ಇದು ನನಗೆ ಬಹಳ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
ಈ ಹಿಂದೆ ತಾನು ತಾಯಿಯಾಗುತ್ತಿರುವ ವಿಷಯನ್ನು ಫೋಟೋ ಶೂಟ್ ಮಾಡಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ವೇತಾ ಶ್ರೀವಾತ್ಸವ್ ಹಂಚಿಕೊಂಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
