ಭೀಮನ ಮದುವೆ ಮತ್ತು ಘಟೋತ್ಕಚನ ಜನನ.
ಹಿಡಂಬಿ ವನದಲ್ಲಿ ಪಾಂಡವರು.
ಹಿಡಂಬನೆಂಬ ರಾಕ್ಷಸನು ಇದ್ದುದರಿಂದಲೇ ಆ ವನಕ್ಕೆ ಹಿಡಿಂಬವನವೆಂದು ಹೆಸರಿಟ್ಟಿದ್ದರು.ಹಿಡಿಂಬನು ಬಹಳ ದಿನಗಳ ನಂತರದಲ್ಲಿ ಮಾನವರ ಮಾಂಸವನ್ನು ತಿನ್ನುವಂತಾಯಿತು ಎಂದು ಹಿಡಿಂಬೆಯನ್ನು ಅವರನ್ನೆಲ್ಲಾ ಕೊಂದು ತಾ ಎಂದು ಕಳಿಸಿದನು. ಭಯಂಕರ ರೂಪದ ಭೀಮನನ್ನು ಕಂಡಾಗ ಹಿಡಿಂಬೆಗೆ ಅವನ ಮೇಲೆ ಪ್ರೀತಿ ಉಂಟಾಯಿತು ಭೀಮನನ್ನು ಒಲಿಸಿಕೊಳ್ಳಬೇಕೆಂದು ಬಯಸಿದಳು.
ಭೀಮನು ‘ನೀನು ಯಾರು ?’ ಎಂದು ಕೇಳಿದಾಗ ಸತ್ಯವಾದ ಸಂಗತಿಯನ್ನೇ ಹೇಳಿದಳು. ನಾನು ನಿನ್ನನ್ನು ರಕ್ಷಿಸುತ್ತೇನೆ.ನೀನು ನನ್ನೊಂದಿಗೆ ಬಂದು ಬಿಡು ಎಂದಳು. ಆಗ ಭೀಮಸೇನನು ನಗುತ್ತಾ ನಿನ್ನಣ್ಣನಿಗೆ ಹೆದರುವವನಲ್ಲ.ಅವನನ್ನೇ ಕಳಿಸು ಎಂದು ಹೇಳಿ ಹಿಡಿಂಬೆಯನ್ನು ಕಳಿಸಿದನು.ಹಿಡಿಂಬೆ ಸಹ ಸುಂದರಿಯ ರೂಪದಿಂದ ಇರುವುದನ್ನು ಕಂಡು ಹಿಡಂಬನು ಅತ್ಯಂತ ಸಿಟ್ಟಿನಿಂದ ಕೂಗಾಡಿದನು. ತಂಗಿಯ ಮೇಲೆ ಸಿಟ್ಟು ಬಂದಿತು. ನಿನಗೆ ಬುದ್ದಿ ಕಲಿಸುತ್ತೇನೆ ಎಂದು ಅವಳ ಕಡೆಗೆ ಹಿಡಿಂಬನು ನುಗ್ಗಿದನು.
ಭೀಮ ಹಿಡಿಂಬರ ಯುದ್ಧ.
ಭೀಮನು ಅವನನ್ನು ತಡೆದು ಹೆಂಗಸಿನ ಮೇಲೆ ಪೌರುಷವನ್ನು ತೋರಿಸುವೆಯಾ ? ಎಂದು ಹೇಳಿ ಯುದ್ದವನ್ನು ಆರಂಭ ಮಾಡಿದನು. ಪರಸ್ಪರ ಮರಗಳನ್ನು ಎತ್ತಿ ಹೊಡೆದಾಡಿದರು. ಅವರಿಬ್ಬರು ಯುದ್ಧ ಮಾಡುತ್ತಿರುವಾಗ ಧರ್ಮರಾಯ ಮುಂತಾದವರಿಗೆ ಎಚ್ಚರವಾಯಿತು.ಹಿಡಿಂಬೆಯು ಕುಂತಿಗೆ ವಿಷಯವನ್ನು ತಿಳಿಸಿದಳು.
ಆವೇಳೆಗೆ ಭೀಮನು ರೋಷದಿಂದ ಹಿಡಿಂಬನನ್ನು ಹಿಡಿದು ನೆಲಕ್ಕೆ ಕುಕ್ಕಿದನು. ಅವನು ಜೋರಾಗಿ ಕಿರುಚುತ್ತಾ ಪ್ರಾಣವನ್ನೆ ಬಿಟ್ಟನು. ಭೀಮನ ಸಾಹಸವನ್ನು ಎಲ್ಲರೂ ಕೊಂಡಾಡಿದರು. ಆ ವೇಳೆಗೆ ಬೆಳಗಾದಾಗ ಕುಂತಿಯು ಭೀಮನಿಗೆ ಅಣ್ಣನನ್ನು ಕಳೆದುಕೊಂಡ ಹಿಡಿಂಬೆಯನ್ನು ಮದುವೆಯಾಗಲು ಸಮ್ಮತಿ ನೀಡಿದಳು.ಭೀಮನು ಹಿಡಿಂಬೆಯನ್ನು ಮದುವೆಯಾಗಿ ಕೆಲಕಾಲ ಆ ಅಡವಿಯಲ್ಲಿಯೇ ಉಳಿದು ನಂತರ ಅಲ್ಲಿಂದ ಮುಂದೆ ಹೋಗಬಯಸಿದನು.
ಘಟೋತ್ಕಜನ ಜನನ.
ಹಿಡಿಂಬೆಯು ಒಂದು ಮಗುವಿಗೆ ಜನ್ಮ ಕೊಟ್ಟಳು. ಅವನಿಗೆ ಘಟೋತ್ಕಚ ಎಂದು ಹೆಸರಿಟ್ಟರು.ಮಡಕೆಯಂತೆ ಬೋಡು ತಲೆ ಹೊಂದಿದ್ದರಿಂದ ಆ ಮಗುವಿಗೆ ಆ ಹೆಸರು ಬಂದಿತು.
ಅವನು ಯಾವುದೇ ಸಮಯದಲ್ಲಿ ನೆನೆದಲ್ಲಿ ಬಂದು ಕಾಣುತ್ತೇನೆ ಎಂದು ತನ್ನ ರಾಕ್ಷಸೀ ಶಕ್ತಿಯನ್ನು ಎಲ್ಲರಿಗೂ ತಿಳಿಸಿದನು.ಹಿಡಿಂಬೆ ಮತ್ತು ಘಟೋತ್ಕಜ ಆ ವನದಲ್ಲಿಯೇ ಉಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
