fbpx
ದೇವರು

12 ರಾಶಿಯವರು ನಿಮ್ಮ ರಾಶಿಯ ಅನುಸಾರ ಯಾವ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು..

  ಈ 12 ರಾಶಿಯವರು  ನಿಮ್ಮ ರಾಶಿಯ ಅನುಸಾರ ಯಾವ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂದು ತಿಳಿಯಿರಿ.

ಆಯಾ ರಾಶಿಗಳ ಪ್ರಕಾರ ಆಯಾ ದೇವರನ್ನು ಪೂಜಿಸಿದರೆ ಸಕಲ ಸಂತೃಪ್ತಿ,ಸುಖ,ಶಾಂತಿ ಪಡೆಯಬಹುದು.ಹಿಂದೂ ಧರ್ಮಗಳಲ್ಲಿ ಒಂದಾದ ಅತೀ ಪ್ರಾಚೀನ ಪುರಾಣಗಳಲ್ಲಿ ಒಂದಾದ ಅಗ್ನಿ ಪುರಾಣದ ಪ್ರಕಾರ ಒಂದೆಡೆ ಹೀಗೆ ಬರೆಯಲಾಗಿದೆ. ಜ್ಯೋತಿಶ್ಶಾಸ್ತ್ರ ಅಥವಾ ಜ್ಯೋತಿಷ್ಯ ಎಂಬುದು ಒಂದು ನಂಬಿಕೆ ಮಾತ್ರವಲ್ಲ. ಇದೊಂದು ಸುಸ್ಪಷ್ಟವಾದ ವಿಜ್ಞಾನವಾಗಿದೆ. ಓರ್ವ ವ್ಯಕ್ತಿಯ ಹುಟ್ಟಿದ  ದಿನಾಂಕ ರಾಶಿಗಳನ್ನು ಪರಿಗಣಿಸಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯಬಹುದು.

ಭಾರತದಲ್ಲಿ ಹಿಂದೂ ಧರ್ಮವು  ಅತೀ  ಪುರಾತನವಾಗಿದ್ದು ಜ್ಯೋತಿಶ್ಶಾಸ್ತ್ರವನ್ನು  ಬಲವಾಗಿ ಪ್ರತಿಪಾದಿಸಿಸುವ  ಒಂದು ಪ್ರಮುಖ ಕೆಲಸವನ್ನು ಜ್ಯೋತಿಶ್ಶಾಸ್ತ್ರಾದ ಪ್ರಕಾರವೇ  ಪರಿಗಣಿಸಿ, ಪ್ರಾರಂಭಿಸುವ ಮತ್ತು ಕೊನೆಗೊಳಿಸುವ ವಿಧಿಯನ್ನು ಅನುಸರಿಸುತ್ತದೆ.ಹಿಂದೂ ಧರ್ಮದಲ್ಲಿ ಪ್ರಮುಖವಾಗಿ ಮೂರು ಪಂಥಗಳಿವೆ.

ಶ್ರೀ ವಿಷ್ಣುವನ್ನು ಆರಾಧಿಸುವವರನ್ನು ವೈಷ್ಣವರು

ಶಿವನನ್ನು  ಆರಾಧಿಸುವವರು ಶೈವರು

ಶಕ್ತಿಯನ್ನು ಆರಾಧಿಸುವವರು  ಶಾಂತರು ಎಂದು ಕರೆಯಲಾಗಿದೆ.

ಹಿಂದೂ ಪುರಾಣಗಳ  ಪ್ರಕಾರ  ಒಟ್ಟು 33  ಕೋಟಿ ದೇವರಿದ್ದಾರೆ. ಇವರೆಲ್ಲರೂ ವಿಷ್ಣು,ಶಿವ,ಶಕ್ತಿಯ  ಅವತಾರಗಳೆಂದು ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿ ಹಲವಾರು ಒಳ ಪಂಗಡಗಳಿದ್ದು ಆಯಾ ಪಂಗಡಗಳು ವಿವಿಧ ದೇವರನ್ನು ಪೂಜಿಸುತ್ತಾರೆ. ಆದರೆ ಒಂದೇ  ದೇವರನ್ನು ಪೂಜಿಸಬೇಕು ಎಂಬ ಕಾನೂನು, ಕಡ್ಡಾಯವೇನು  ಇಲ್ಲ.ಮನೆತನದ ದೇವರುಗಳನ್ನು ಮನೆ ದೇವರೆಂದು, ತಮಗೆ ಇಷ್ಟವಾದ ದೇವರನ್ನು ಇಷ್ಟದೇವರೆಂದು ಕರೆಯುವ ವಾಡಿಕೆ.

ಆಗ್ನಿ ಪುರಾಣದ ಪ್ರಕಾರ  ಮತ್ತು ನಿಮ್ಮ ರಾಶಿ ಚಕ್ರದ ಪ್ರಕಾರ ಯಾವ ದೇವರು ಆ ರಾಶಿಯಲ್ಲಿ ಪ್ರಾಬಲ್ಯವನ್ನು ಪಡೆದಿರುತ್ತಾರೋ ಆ ದೇವರನ್ನು ಪೂಜಿಸುವುದರಿಂದ ಹೆಚ್ಚಿನ ಹೆಚ್ಚಿನ ಫಲ ದೊರೆಯುತ್ತದೆ. ರಾಶಿ ಫಲವನ್ನು ಕಂಡುಕೊಳ್ಳಲು ಹಿಂದೂ ಪುರಾಣದಲ್ಲಿ ಹುಟ್ಟಿದ ಸಮಯ ಮತ್ತು ದಿನಾಂಕವನ್ನು ಪರಿಗಣಿಸಲಾಗುತ್ತದೆ.

ಈ ಎರಡು ವಿಷಯಗಳು ಸರಿಯಾಗಿ ಗೊತ್ತಾದರೆ ರಾಶಿ ಫಲದ ಪ್ರಕಾರ ಯಾವ ದೇವರು ಪ್ರಾಭಲ್ಯವನ್ನು ಹೊಂದಿರುತ್ತಾರೆ ಎಂದು ಗೊತ್ತಾಗುತ್ತದೆ. ಒಂದು ವೇಳೆ ನಿಮ್ಮ ರಾಶಿ ಯಾವುದೆಂದು ನಿಮಗೆ ಗೊತ್ತಿದ್ದೂ, ಯಾವ ದೇವರನ್ನು ಪೂಜಿಸಬೇಕು ಎಂದು ನಿಮಗೆ ಗೊತ್ತಿಲದೇ ಹೋದರೆ ಈ ಕೆಳಗಿನ ವಿವರಣೆಯನ್ನು ನೀವು ನೋಡಿ ತಿಳಿಯಬಹುದು.

1.ಮೇಷ ರಾಶಿ-   ಮೇಷ ರಾಶಿಯನ್ನು   ಮಂಗಳನು ಅಧಿಪತ್ಯವನ್ನು ವಹಿಸಿತ್ತಿರುತ್ತಾನೆ. ಆದ್ದರಿಂದ ಮಂಗಳನ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

2.ವೃಷಭ –  ವೃಷಭ ರಾಶಿಗೆ ಅಧಿಪತಿ ಶುಕ್ರ.ಆದ್ದರಿಂದ ಶುಕ್ರ ಗ್ರಹದ ಅಧಿಪತಿಯಾಗಿರುವ ಲಕ್ಷ್ಮೀಯನ್ನು ಪೂಜಿಸುವುದರ ಮೂಲಕ ಧನಾತ್ಮಕ ಶಕ್ತಿಯು ಹೆಚ್ಚಾಗಿ, ಸಂಪತ್ತು, ಸಮೃದ್ಧಿ ಅದೃಷ್ಟವನ್ನು ಪಡೆಯಬಹುದು.

3.ಮಿಥುನ -ಮಿಥುನ ರಾಶಿಯ ಅಧಿಪತಿ ಬುಧ.ಆದ್ದರಿಂದ ಬುಧನ ಅಧಿಪತ್ಯವನ್ನು ಹೊಂದಿರುವ ಶ್ರೀಮನ್ನಾರಾಯಣನನ್ನು ಆರಾಧಿಸುವ ಮೂಲಕ ಬಹಳಷ್ಟು ಒಳ್ಳೆಯದಾಗುವುದು.

4.ಕಟಕ-ಕಟಕ ರಾಶಿಯನ್ನು ಕರ್ಕಾಟಕ ರಾಶಿ ಎಂದು ಸಹ ಕರೆಯುತ್ತಾರೆ. ಈ ರಾಶಿಯ ಅಧಿಪತಿ ಚಂದ್ರ. ಚಂದ್ರನಿಗೆ ಅಧಿಪತಿಯಾದ ದೇವತೆ ಗೌರಿ. ಗೌರಿ ಎಂದರೆ ಶಾಂತಿ,ಸಹಾನುಭೂತಿ, ಕರುಣೆಯ ಸಾಕಾರ ರೂಪವಾಗಿರುವ ಗೌರಿಯನ್ನು ಪೂಜಿಸುವುದರಿಂದ ಈ ಗುಣಗಳನ್ನು ಪಡೆಯಬಹುದು.

5.ಸಿಂಹ-ಸಿಂಹ ರಾಶಿಗೆ ಅಧಿಪತಿ ಸೂರ್ಯ.ಸೂರ್ಯನ ಅಧಿಪತ್ಯವನ್ನು ಹೊಂದಿರುವ ಆ ಶಿವನೇ ಲೋಕಾಧಿಪತಿಯಾಗಿದ್ದು, ಶಿವನನ್ನು ಆರಾಧಿಸುವುದು ಸುಲಭ. ಶಿವ ಸುಲಭವಾಗಿ ಒಲಿಯುವವನಾಗಿದ್ದು. ಆದ್ದರಿಂದ ಈ ರಾಶಿಯವರು ಶಿವನನ್ನು ಆರಾಧಿಸಿದರೆ ಸಕಲ ಇಷ್ಟಾರ್ಥವು ಸಿದ್ಧಿಸುತ್ತವೆ.

6.ಕನ್ಯಾ- ಕನ್ಯಾ ರಾಶಿಗೆ ಅಧಿಪತಿ ಬುಧ,ಆದ್ದರಿಂದ ಬುಧನ  ಅಧಿಪತಿಯಾಗಿರುವ ವಿಷ್ಣುವನ್ನು ,ವಿಷ್ಣುವಿನ ಇನ್ನೊಂದು  ಅವತಾರವೇ ಆಗಿರುವ ಶ್ರೀಮನ್ನಾರಾಯಣನನ್ನು ಪೂಜಿಸಿದರೆ ಆದಾಯ ಹೆಚ್ಚುವುದು.

7.ತುಲಾ-ತುಲಾ ರಾಶಿಯನ್ನು ಶುಕ್ರ ಗ್ರಹ ಆಳುತ್ತಾನೆ.ಶುಕ್ರ ಗ್ರಹದ ಅಧಿಪತ್ಯವನ್ನು ಹೊಂದಿರುವ ಲಕ್ಷ್ಮೀಯನ್ನು ಆರಾಧಿಸಿದರೆ ಸಕಲ ಸಮೃದ್ಧಿ, ಧನ ಸಂಪತ್ತು ಹೆಚ್ಚುತ್ತದೆ.

8 ವೃಶ್ಚಿಕ- ವೃಶ್ಚಿಕ ರಾಶಿಯನ್ನು ಮಂಗಳ ಗ್ರಹ ಆಳುತ್ತಾನೆ.ಮಂಗಳ ಗ್ರಹದ ಅಧಿಪತಿ ಶಿವ ಆದ್ದರಿಂದ ಶಿವನನ್ನು ಆರಾಧಿಸಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ.

9.ಧನಸ್ಸು- ಧನಸ್ಸು ರಾಶಿಯ ಅಧಿಪತಿ ಗುರು ಗ್ರಹ,ಗುರು ಗ್ರಹದ ಅಧಿಪತ್ಯವನ್ನು ಹೊಂದಿರುವ ದಕ್ಷಿಣಾಮೂರ್ತಿಯನ್ನು ಆರಾಧಿಸಿದರೆ ಜ್ಞಾನ, ಬುದ್ದಿ ಮತ್ತು ತಿಳುವಳಿಕೆ ಹೆಚ್ಚುತ್ತದೆ.ದಕ್ಷಿಣಾ ಮೂರ್ತಿಯೂ ಸಹ ಶಿವನ ಅವತರಾಗಳಲ್ಲಿ ಒಂದು ಅವತಾರವೇ ಆಗಿರುವುದು.

10.ಮಕರ-ಮಕರ ರಾಶಿಯನ್ನು ಆಳುವುದು ಶನಿ ಗ್ರಹ.ಆದ್ದರಿಂದ ಪರಮೇಶ್ವರನಾದ ಶಿವನನ್ನು ಪೂಜಿಸಿದರೆ ಒಳ್ಳೆಯದು.

11.ಕುಂಭ-ಕುಂಭ ರಾಶಿಯ ಅಧಿಪತಿಯೂ ಸಹ  ಶನಿ. ಆದ್ದರಿಂದ ಶಿವನನ್ನೇ ಆರಾಧನೆ ಮಾಡಿದರೆ ಸಕಲವನ್ನು ಕರುಣಿಸುವನು.

12.ಮೀನ-ಮೀನ ರಾಶಿಯ  ಅಧಿಪತಿ  ಗುರು ಗ್ರಹ .ಗುರು ಗ್ರಹದ ಅಧಿಪತಿಯಾಗಿರುವ ದಕ್ಷಿಣಾಮೂರ್ತಿಯನ್ನು ಆರಾಧಿಸಿದರೆ ಒಳ್ಳೆಯದು,ಉತ್ತಮ ಫಲವನ್ನು ಪಡೆಯಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top