fbpx
ದೇವರು

ಮೊದಲ ಪ್ರನಾಳ ಶಿಶು (test tube baby) ದ್ರೋಣ ಚಾರ್ಯರ ಹುಟ್ಟಿನ ಹಿಂದೆ ಇಂತದೊಂದು ರಹಸ್ಯ ಇದೆ ಅಂತ ಈಗ್ಲೇ ಗೊತ್ತಾಗಿದ್ದು !

ದ್ರೋಣಾಚಾರ್ಯರ  ಜನ್ಮ ರಹಸ್ಯ.

ಗುರು ದ್ರೋಣಾಚಾರ್ಯರು ಮಹಾಭಾರತದಲ್ಲಿ ಕೌರವ ಮತ್ತು ಪಾಂಡವರ ಗುರುಗಳಾಗಿದ್ದವರು. ಇವರ ಜನ್ಮ ಹೇಗಾಯಿತು ಎಂಬುದರ ಹಿಂದೆ ಒಂದು ಕುತೂಹಲಕಾರಿ ಯಾಗಿರುವಂತಹ ರಹಸ್ಯ ವಿಷಯ ಅಡಗಿದೆ. ದ್ರೋಣಾಚಾರ್ಯರು  ಇಡೀ ವಿಶ್ವದಲ್ಲಿಯೇ ಮೊದಲ ಪ್ರನಾಳ ಶಿಶು  (ಟೆಸ್ಟ್  ಟ್ಯೂಬ್ ಬೇಬಿ) ಎಂದು ಹೇಳಿದರು ಸಹ  ತಪ್ಪಾಗುವುದಿಲ್ಲ. ಇವರ ತಂದೆ ಭಾರದ್ವಾಜ ಋಷಿಗಳು ಮತ್ತು ತಾಯಿ ಕ್ರಿತಜಿ ಎಂದು ಹೇಳಬಹುದು.

ಒಂದು ದಿನ ಸಂಜೆ ಭಾರದ್ವಜ ಋಷಿಗಳು ತಮ್ಮ ಪೂಜೆಯ ತಯಾರಿಯಲ್ಲಿದ್ದರು. ಆಗ ಪೂಜೆಗೂ ಮುನ್ನ  ಸ್ನಾನ ಮಾಡಲೆಂದು ಗಂಗಾ ನದಿಯ ತೀರಕ್ಕೆ ಹೋದರು.ಗಂಗಾ ನದಿಯಲ್ಲಿ ಒಬ್ಬಳು ಸುಂದರಿಯು ಸ್ನಾನ ಮಾಡುವುದನ್ನು  ನೋಡಿದರು.ಅವಳು  ಕ್ರಿತಜಿ ಎಂಬ ಹೆಸರಿನ  ಅಪ್ಸರೆಯಾಗಿದ್ದಳು. ಅಪ್ಸರೆಯು ಸ್ನಾನ ಮಾಡುವ ಸಲುವಾಗಿ ಅಲ್ಲಿಗೆ ಬಂದಿದ್ದಳು.

ಅಪ್ಸರೆಯು  ಋಷಿ ಭಾರದ್ವಜರನ್ನು ಕಂಡ ತಕ್ಷಣವೇ  ಒಂದು ಅಂಚಿನಷ್ಟಿರುವ ಬಟ್ಟೆಯನ್ನು ಅಂದರೆ ಒಂದು ತುಂಡು ಉಡುಗೆಯನ್ನು ಧರಿಸಿ  ನದಿಯಿಂದ ಹೊರಗೆ ಬಂದಳು.ಅಪ್ಸರೆಯ ಸೌಂದರ್ಯವನ್ನು ನೋಡಿ ಭಾರದ್ವಜರು ಆಶ್ಚರ್ಯ ಚಕಿತರಾಗಿ ಅಲ್ಲಿಯೇ ಅವಳನ್ನೇ ನೋಡುತ್ತಾ ನಿಂತುಬಿಟ್ಟರು.ಅವಳನ್ನು ನೋಡಿ ಮೋಹಿತರಾದರು. ಆವರಿಗೆ  ಅರಿಯದೇ, ಮನಸ್ಸಂಕಲ್ಪವಿಲ್ಲದೆ ಸಂತಾನೋತ್ಪತ್ತಿಯ ದ್ರವ ಅಂದರೆ ವೀರ್ಯ ಬಿಡುಗಡೆಯಾಯಿತು. ಅದನ್ನು ಅವರು ಎಲೆಯಿಂದ ಮಾಡಿದ ಒಂದು ಪಾತ್ರೆಯಲ್ಲಿ ಹಿಡಿದಿಟ್ಟುಕೊಂಡರು.

ದ್ರೋಣಾಚಾರ್ಯರೇ  ಮೊದಲ ಪ್ರನಾಳ ಶಿಶು (test tube baby).

ಹಾಗೆ ಒಂದು ಎಲೆಯಿಂದ ಮಾಡಿದ  ಪಾತ್ರೆಯಲ್ಲಿ ವೀರ್ಯವನ್ನು ಹಿಡಿದುಟ್ಟು ಕೊಂಡ ಭಾರದ್ವಜ ಋಷಿಮುನಿಗಳು.

ಸ್ನಾನಾದಿಗಳನ್ನು ಮುಗಿಸಿ ನಂತರ ಆಶ್ರಮಕ್ಕೆ ಬಂದ ಋಷಿಗಳು ವೀರ್ಯವನ್ನು ಒಂದು ಮಣ್ಣಿನ ಮಡಿಕೆಯಲ್ಲಿ  ಸಂರಕ್ಷಿಸಿ ಬೆಳಕು ಇಲ್ಲದೆ   ಇರುವ ಸ್ಥಳದಲ್ಲಿ ಅಂದರೆ ಕತ್ತಲಲ್ಲಿ  ಇಟ್ಟರು.ಇದೇ ಮುಂದೆ ಮಗುವಾಗಿ ಮಡಿಕೆಯಲ್ಲಿ ಬೆಳೆಯಿತು .ಈ ಮಗುವು ಮಣ್ಣಿನ  ಮಡಿಕೆಯಲ್ಲಿ ಬೆಳೆದ ಕಾರಣ ಇವರಿಗೆ ದ್ರೋಣಾ ಎಂಬ ಹೆಸರು ಬಂತು.

ದ್ರೋಣಾಚಾರ್ಯರ  ರೀತಿಯಲ್ಲೇ ಸ್ವತಃ  ಕ್ರಿಪಿ ಮತ್ತು ಅವಳ ತಮ್ಮ ಕೃಪ ಗರ್ಭದಿಂದ ಜನಿಸಿದವರಲ್ಲ. ಬದಲಾಗಿ ಮನುಷ್ಯ ದೇಹದಿಂದ ಹೊರಗೆ ಜನ್ಮ  ತಾಳಿದವರು. ದ್ರೋಣ ಮತ್ತು ಕೃಪ ಇಬ್ಬರು ಆತ್ಮೀಯ  ಸ್ನೇಹಿತರಾಗಿದ್ದರು. ದ್ರೋಣಾಚಾರ್ಯರು ಕ್ರಿಪಿಯನ್ನು ಮದುವೆಯಾದರು.ಇವರಿಗೆ ಒಬ್ಬ ಮಗನೂ ಇದ್ದ ಅವನೇ ಅಶ್ವತ್ಥಾಮ.

ಇವನು ಶಿವನಂತೆಯೇ  ಅತ್ಯಂತ ಶಕ್ತಿಶಾಲಿ, ಧೀರ,ವೀರ ಶೂರನಾಗಬೇಕೆಂದು  ದ್ರೋಣಾಚಾರ್ಯರು ತಪ್ಪಸ್ಸನ್ನು ಮಾಡಿದರು. ಆದ್ದರಿಂದ ಅಶ್ವತ್ಥಾಮನು ಚೀರಂಜೀವಿ ಯಾಗಿದ್ದನು.ಯಾರಿಂದಲೂ ಅವನಿಗೆ ಸಾವು ಸಂಭವಿಸುವುದಿಲ್ಲ ಎಂಬ ಅಮರತ್ವವನ್ನು ಪಡೆದಿದ್ದನು. ಇದೂ ಕೂಡಾ ದ್ರೋಣಾಚಾರ್ಯರಿಂದಲೇ ಸಾಧ್ಯವಾಯಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top