fbpx
ಸಮಾಚಾರ

ಮಗಳ ಕೊನೆಯ ದಿನಗಳ ತಯಾರಿ ನಡೆಸುತ್ತಿರುವ ತಂದೆ ಇಲ್ಲೊಂದು ಮನ ಕಲುಕುವ ಘಟನೆ..

 ಮಗಳಿಗೋಸ್ಕರ ಪ್ರತಿದಿನ ಸಮಾಧಿಯಲ್ಲಿ ಮಲಗೋ ತಂದೆ..

 

ಪೋಷಕರು ಅವರ ಮಕ್ಕಳಿಗೆ ಕೆಲವು ಪ್ರಮುಖ ಜೀವನ ಪಾಠಗಳನ್ನು ಕಲಿಸಲು ಜವಾಬ್ದಾರರಾಗಿರುತ್ತಾರೆ. ಅವರು ತಮ್ಮ ಮಕ್ಕಳ ಭವಿಷ್ಯದಲ್ಲಿ ಬರುವ ಕಷ್ಟದ ಬಗ್ಗೆ ಮತ್ತು ಅವುಗಳನ್ನು ಎದುರಿಸಬೇಕು ಎಂಬ ಪಾಠವನ್ನು ತಮ್ಮ ಮಕ್ಕಳಿಗೆ ಹೇಳಿಕೊಡುತ್ತಾರೆ.ಆದರೆ ಚೀನಾದಲ್ಲಿ ಒಬ್ಬ ತಂದೆ ತನ್ನ ಮುಗ್ಧ 2 ವರ್ಷದ ಮಗಳಿಗೆ ಅತ್ಯಂತ ದುಃಖಕರವಾದ ಜೀವನ ಪಾಠವೊಂದನ್ನ ಹೇಳಿಕೊಡುತ್ತಿದ್ದಾನೆ.
ಅವರು ತಮ್ಮ ಎರಡು ವರ್ಷದ ಮಗಳೊಂದಿಗೆ ಪ್ರತಿದಿನ ಸಮಾಧಿಯಲ್ಲಿ ಮಲಗುತ್ತಾರೆ.ಮತ್ತು ದಿನದಲ್ಲಿ ಸಮಯ ಸಿಕ್ಕಾಗಲೆಲ್ಲ ಅವರು ಸಮಾಧಿಯಲ್ಲಿಯೇ ಆಟ ಆಡುತ್ತಾರೆ.


ಝಾಂಗ್ ಲೀಯೆಂಗ್ ಮತ್ತು ಡೇಂಗ್ ದಂಪತಿಯ ಎರಡು ವರ್ಷದ ಮುದ್ದಾದ ಮಗಳು ದೊಡ್ಡ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು ಅವಳು ದೊಡ್ಡವಳಾದ ಮೇಲೆ ತನಗಿರುವ ರೋಗ ದಿಂದ ಭಯ ಪಡಬಾರದೆಂದು ಈ ರೀತಿ ಮಾಡಲಾಗ್ತಿದೆ ಎಂದು ಬಾಲಕಿ ತಂದೆ ಝಾಂಗ್ ಹೇಳುತ್ತಾರೆ.
ತಮ್ಮ ಮಗಳು ದೊಡ್ಡವಳಾದ ಮೇಲೆ ಸಾವಿನ ಬಗ್ಗೆ ಭಯ ಪಡಬಾರದು ಎಂದು ಈ ದಂಪತಿ ಈ ರೀತಿ ಮಾಡುತ್ತಿದ್ದಾರೆ. ಹಾಗಾಗಿ ಇವರು ಮನೆಯ ಆವರಣದಲ್ಲಿ ಒಂದು ಸಮಾಧಿ ಗುಂಡಿಯನ್ನು ತೋಡಿದ್ದು ಪ್ರತಿದಿನ ಅಲ್ಲಿಯೇ ಮಗಳ ಜೊತೆ ಮಲಗುತ್ತಿದ್ದಾರೆ. ಇವರು ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕವಾಗಿ ದುರ್ಬಲರಾಗಿದ್ದು ಚಿಕಿತ್ಸೆಯ ಹಣಕ್ಕಾಗಿ ಕಷ್ಟಪಡುತ್ತಿದ್ದಾರೆ.

ಈ ಕುರಿತು ವೈದ್ಯರು ಅವರಿಗೆ “ಮುಂದೆ ತಾಯಿ ಗರ್ಭ ಧರಿಸಿ ಹೆರಿಗೆ ಸಮಯದಲ್ಲಿ ದೊರಕುವ ಕರುಳಬಳ್ಳಿಯ ರಕ್ತದಿಂದ ಈಗಿರುವ ಮಗಳ ರೋಗವನ್ನು ಗುಣಪಡಿಸಿ ಅವಳನ್ನು ಉಳಿಕೊಳ್ಳಬಹುದು” ಎಂದು ತಿಳಿಸಿದ್ದಾರೆ. ಈಗ ಅವಳು ಗರ್ಭಿಣಿಯಾಗಿದ್ದು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top