fbpx
ಸಮಾಚಾರ

ಕಂಬಳಕ್ಕೆ ಅಸ್ತು ಎಂದ ರಾಷ್ಟ್ರಪತಿಗಳು , ಇದು ಸಾಮಾನ್ಯ ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯ..

ಕಂಬಳಕ್ಕೆ ಅಸ್ತು ಎಂದ ರಾಷ್ಟ್ರಪತಿಗಳು , ಇದು ಸಾಮಾನ್ಯ ಕನ್ನಡಿಗರ ಹೋರಾಟಕ್ಕೆ ಸಿಕ್ಕ ಜಯ..

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟುಗೆ ಹಸಿರುನಿಶಾನೆ ಸಿಕ್ಕಂತೆಯೇ ಕರ್ನಾಟಕ ಕರಾವಳಿಯ ವಿಶಿಷ್ಟ ಕ್ರೀಡೆ ಕಂಬಳಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕಂಬಳಕ್ಕೆ ಕಾನೂನು ಸಮ್ಮತಿ ತರುವ ವಿಶೇಷ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಗೀಕಾರ ಹಾಕಿದ್ದಾರೆ. ಇದರೊಂದಿಗೆ, ಕಂಬಳ ಕ್ರೀಡೆಯು ಕಾನೂನುಬದ್ಧವಾಗಲಿದೆ.
ಜಲ್ಲಿಕಟ್ಟು, ಕಂಬಳ ಮೊದಲಾದ ಹಲವು ದೇಶೀಯ ಸಾಂಪ್ರದಾಯಿಕ ಕ್ರೀಡೆಗಳನ್ನು ಪ್ರಾಣಿಹಿಂಸೆ ಅಮಾನವೀಯತೆಯ ಕಾರಣವೊಡ್ಡಿ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು.

ಆದರೆ, ಕಳೆದ ವರ್ಷ ತಮಿಳುನಾಡಿನಾದ್ಯಂತ ತೀವ್ರ ಹೋರಾಟ ವ್ಯಕ್ತವಾದ ಬಳಿಕ ಜಲ್ಲಿಕಟ್ಟುಗೆ ಕಾನೂನು ಮಾನ್ಯತೆ ನೀಡಲಾಗಿತ್ತು.
ಮಂಗಳೂರಿನ ಮೂಲದ ಕಂಬಳ ಕ್ರಿಯಾ ಸಮಿತಿ ಎಂಬ ಸಂಸ್ಥೆಯು ಮತ್ತು ಬೆಂಗಳೂರಿನಲ್ಲಿ ಸಾಮಾನ್ಯ ಕನ್ನಡಿಗ ಎಂಬ ಸಂಸ್ಥೆ ಪ್ರತಿಭಟನೆ ಹಮ್ಮಿಕೊಂಡಿತ್ತು
ಅಷ್ಟೇ ಅಲ್ಲದೆ ಸಾವಿರಾರು ಜನ ಆನ್ಲೈನ್ ನಲ್ಲೂ ಇದರ ಬಗ್ಗೆ ಟೀಕೆ ವ್ಯಕ್ತ ಪಡಿಸಿದ್ದರು.

ಆ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ಕಂಬಳದ ರಕ್ಷಣೆಗಾಗಿ ವಿಧಾನಮಂಡಲದಲ್ಲಿ ವಿಶೇಷ ವಿಧೇಯಕ ಮಂಡಿಸಿತು. ಅದಕ್ಕೆ ವಿಧಾನಮಂಡಲ ಒಮ್ಮತದಿಂದ ಅನುಮೋದನೆ ಮಾಡಿತು. ಆನಂತರ, ಈ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲಾಯಿತು. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top