fbpx
ದೇವರು

ನವಗ್ರಹಗಳನ್ನು ಯಾವ ರೀತಿ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು..

ನವಗ್ರಹಗಳನ್ನು ಯಾವ ರೀತಿ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

ನವಗ್ರಹ ಪ್ರದಕ್ಷಿಣೆಯನ್ನು ಯಾವ ರೀತಿ ಮಾಡಬೇಕು ಎಂಬ ಅನುಮಾನ ದೇವಸ್ಥಾನಕ್ಕೆ ಹೋದಾಗ  ಎಲ್ಲರನ್ನು  ಕಾಡುತ್ತದೆ. ಇಂದು ನಾವು ಹೇಗೆ ಪ್ರದಕ್ಷಿಣೆ ಹಾಕಬೇಕು ಎಂದು  ತಿಳಿದುಕೊಳ್ಳೋಣ.

ಗ್ರಹ ಗತಿಗಳಿಂದ ಎದುರಾಗುವ ತೊಂದರೆಗಳನ್ನು ಎದುರಿಸಲು ಸುಲಭವಾದ ವಿಧಾನ ನವಗ್ರಹ ಪ್ರದಕ್ಷಿಣೆ ಎಂದು ಆಧ್ಯಾತ್ಮಿಕ ಪಂಡಿತರು ಹೇಳುತ್ತಾರೆ. ಇವುಗಳಿಂದ ಉತ್ಪತ್ತಿಯಾಗುವ ದೈವಿಕ ಶಕ್ತಿಯು ಮನುಷ್ಯರನ್ನು ಕಾಪಾಡುವುದು. ನಿರ್ದಿಷ್ಟವಾದ ಪದ್ದತಿಯ ಪ್ರಕಾರ ನವಗ್ರಹಗಳ ಪ್ರದಕ್ಷಿಣೆ ಮಾಡಿದರೆ ವಿಶೇಷ ಫಲಿತಾಂಶ ದೊರೆಯುತ್ತದೆ. ಬಹಳಷ್ಟು ಜನ ಪ್ರದಕ್ಷಿಣೆ ಮಾಡುತ್ತಾ ನವಗ್ರಹ ಮೂರ್ತಿಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಸಾಧ್ಯವಾದಷ್ಟು ಅವುಗಳನ್ನು ಮುಟ್ಟದೇ ಪ್ರದಕ್ಷಿಣೆ  ಮಾಡುವುದು ತುಂಬಾ ಒಳ್ಳೆಯದು.

ನವಗ್ರಹಗಳ ಮದ್ಯೆ ಸೂರ್ಯ ಪೂರ್ವ ದಿಕ್ಕಿನಲ್ಲಿ ಇರುತ್ತಾನೆ.ಸೂರ್ಯನಿಗೆ ಬಲಭಾಗದಲ್ಲಿ ಕುಜನು (ಮಂಗಳ ಗ್ರಹ ಅಥವಾ ಅಂಗಾರಕ) ದಕ್ಷಿಣಾಭಿಮುಖವಾಗಿ ಇರುತ್ತಾನೆ.

ಶುಕ್ರನಿಗೆ ಬಲಭಾಗದಲ್ಲಿದ್ದು,  ಪಶ್ಚಿಮಾಭಿಮುಖವಾಗಿ  ಚಂದ್ರನಿದ್ದು ಎಡಭಾಗದಲ್ಲಿ ಬುಧನು ಉತ್ತಾರಾಭಿಮುಖವಾಗಿ ಇರುತ್ತಾನೆ.

ಸೂರ್ಯನ ಹಿಂಬಾಗ ಶನಿಮಹಾತ್ಮ,ಪಶ್ಚಿಮಾಭಿಮುಖವಾಗಿ ಇರುತ್ತಾನೆ.

ಶನಿಗೆ ಎಡಭಾಗದಲ್ಲಿ ರಾಹು ಮತ್ತು ಕೇತು ಉತ್ತಾರಾಭಿಮುಖವಾಗಿ ಒಬ್ಬರನ್ನೊಬ್ಬರು ಪರಸ್ಪರ  ನೋಡಿಕೊಳ್ಳುತ್ತಾ ಇರುತ್ತಾರೆ.ಇದು ಅತ್ಯಂತ  ಪ್ರಶಸ್ತವಾದ ಪ್ರತಿಷ್ಠಾಪನೆ.

ನವಗ್ರಹಗಳಿಗೆ ಹೇಗೆ, ಎಷ್ಟು ಪ್ರದಕ್ಷಿಣೆ ಮಾಡಬೇಕು ?

ಸೂರ್ಯನನ್ನು ನೋಡುತ್ತಾ ಒಳಗೆ ಪ್ರವೇಶ ಮಾಡಿ ಎಡಭಾಗದಿಂದ ಚಂದ್ರನ ಕಡೆಯಿಂದ ಬಲ ಭಾಗಕ್ಕೆ ಒಂಬತ್ತು ಸುತ್ತು ಪ್ರದಕ್ಷಿಣೆ ಹಾಕುವುದು ಶ್ರೇಷ್ಠ.ಪ್ರದಕ್ಷಿಣೆ ಪೂರ್ಣಗೊಂಡ ನಂತರ ಬಲಭಾಗದಿಂದ ಎಡಭಾಗಕ್ಕೆ ಬುಧನ ಕಡೆಯಿಂದ ರಾಹುವನ್ನು ,ಕೇತುವನ್ನು ಸ್ಮರಿಸುತ್ತಾ ಎರಡು ಪ್ರದಕ್ಷಿಣೆ ಮಾಡಬಹುದು.

ಕೊನೆಗೆ ಸಾಲಾಗಿ  ಸೂರ್ಯನನ್ನು,ಚಂದ್ರನನ್ನು, ಕುಜ,ಬುಧ,ಬೃಹಸ್ಪತಿ (ಗುರು), ಶುಕ್ರ, ಶನಿ, ರಾಹು, ಕೇತುವನ್ನು ಸ್ಮರಿಸುತ್ತಾ ಒಂದೊಂದು ಪ್ರದಕ್ಷಿಣೆ ಮಾಡಿ ನವಗ್ರಹಗಳಿಗೆ ಬೆನ್ನು ತೋರಿಸದೇ ಬರಬೇಕು.

ಗ್ರಹ ದೋಷದಿಂದ ಹೊರಬರಲು ನವಗ್ರಹ ಪ್ರದಕ್ಷಿಣೆಗಿಂತ  ಉತ್ತಮ ಮಾರ್ಗ ಮೊತ್ತೊಂದಿಲ್ಲ ಎಂದು ಆಧ್ಯಾತ್ಮಿಕ ಪಂಡಿತರು ತಿಳಿಸಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top