ಹಳೆಯ 500 ಮತ್ತು 1000 ರೂಪಾಯಿಗಳ ನೋಟಿಗೆ ಮತ್ತೆ ಜೀವ…
ಭಾರತ ಸರ್ಕಾರವು ಹಳೆಯ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಬ್ಯಾನ್ ಮಾಡಿದ ನಂತರ ಐವತ್ತು ದಿನಗಳ ಕಾಲ ಅಂದರೆ ಡಿಸೆಂಬರ್ 31 ರವರೆಗೆ ಜನರಿಗೆ ಹಳೆಯ ನೋಟನ್ನು ಬ್ಯಾಂಕಿನ ಖಾತೆಗೆ ಠೇವಣಿ ಇಡುವ ಮತ್ತು ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಅದಾದ ನಂತರವೂ ಅನೇಕರ ಬಳಿ ಆ ನೋಟುಗಳು ಹಲವು ಕಾರಣಗಳಿಂದ ಅವರ ಬಳಿಯೇ ಸೇರಿಕೊಂಡು ಬಿಟ್ಟಿವೆ ಈಗ ಆ ನೋಟುಗಳನ್ನು ಬಾಳಲಾಯಿಸಿಕೊಳ್ಳಲು ಮತ್ತೊಂದು ಅವಕಾಶವನ್ನು ನೀಡುವ ಮುನ್ಸೂಚನೆ ಸುಪ್ರೀಂಕೋರ್ಟ್ ಕೊಟ್ಟಿದೆ.
“ಯಾವ ವ್ಯಕ್ತಿಯು ಪ್ರಾಮಾಣಿಕವಾಗಿ ಹಳೆಯ ಅಮಾನ್ಯ ನೋಟುಗಳನ್ನು ಈಗಲೂ ಸಹ ತನ್ನ ಬಳಿ ಇಟ್ಟುಕೊಂಡಿದ್ದಾರೋ ಅಂತಹ ವ್ಯಕ್ತಿಗಳಿಗೆ ಮತ್ತೊಮ್ಮೆ ಹಣವನ್ನು ಠೇವಣಿ ಇಡಲು ಅಥವಾ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಈ ಬಗ್ಗೆ ನಿಮ್ಮ ನಿಲುವು ಏನು ಎನ್ನುವುದನ್ನು ತಿಳಿಸಿ” ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಈ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಜೂಲೈ 18ಕ್ಕೆ ದಿನಾಂಕವನ್ನು ನಿಗಧಿಪಡಿಸಲಾಗಿದ್ದು. ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ರವರು ಪ್ರಾಮಾಣಿಕವಾಗಿ ಹಣವನ್ನು ಇಟ್ಟುಕೊಂಡವರಿಗೆ ಮತ್ತೊಮ್ಮೆ ಠೇವಣಿ ಇಡಲು ಅವಕಾಶ ನೀಡಬೇಕು. ಒಂದು ವೇಳೆ ಆ ಅವಕಾಶವನ್ನು ನೀಡದೇ ಇದ್ದಲ್ಲಿ ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
“RBI (ಭಾರತೀಯ ರೆಸೆರ್ವ್ ಬ್ಯಾಂಕ್ ) ಮತ್ತು ಕೇಂದ್ರ ಹಣಕಾಸು ಸಚಿವಾಲಯ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಬೇಕು. ಇದಕ್ಕಾಗಿ ಎರಡು ವಾರಗಳ ಕಾಲ ಕಾಲಾವಕಾಶ ನೀಡುತ್ತಿದ್ದೇವೆ. ಈ ಕುರಿತು ಒಂದುವೇಳೆ ನೀವು ಸ್ಪಷ್ಟ ಉತ್ತರ ನೀಡದೇ ಇದ್ದಲ್ಲಿ. ಈ ಕ್ರಮವನ್ನು ಒಂದು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ ಈ ಆದೇಶದ ಕುರಿತು “ಕೇಂದ್ರ ಸರ್ಕಾರ ಮತ್ತು ಅದರ ಹಣಕಾಸು ಸಚಿವಾಲಯದ ಅನುಮತಿಯಿಲ್ಲದೆ ಹಳೆಯ ಅಮಾನ್ಯ ನೋಟುಗಳನ್ನು ಪಡೆಯಲು ಸಾಧ್ಯವಿಲ್ಲ” ಎಂದು ಭಾರತೀಯ ರಿಸೆರ್ವೆ ಬ್ಯಾಂಕ್ ಹೇಳಿಕೆ ಕೊಟ್ಟಿದೆ.
ಈ ಬಗ್ಗೆ ಕೇಂದ್ರದ ಹಣಕಾಸು ಸಚಿವಾಲಯ ಯಾವ ನಿಲುವನ್ನು ಕೈಗೊಳ್ಳಲಿದೆ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
