fbpx
ದೇವರು

ಹಳೆ ಕಾಲದ ಸೂರ್ಯ ದೇವಾಲಯಗಳ ಈ 5 ರಹಸ್ಯಗಳು ತಿಳ್ಕೊಂಡ್ರೆ ಹೆಮ್ಮೆಪಡ್ತೀರಾ..

ಭಾರತದಲ್ಲಿರುವ ಸೂರ್ಯ ದೇವಾಲಯಗಳ ವಿಶೇಷತೆಗಳು…

ಪ್ರಪಂಚದ ಎಲ್ಲ ಧರ್ಮದ ಜನರುಗಳು ಸೂರ್ಯನನ್ನು ದೇವರ ರೂಪದಲ್ಲಿ ಕಾಣುತ್ತಾರೆ.ಮುಖ್ಯವಾಗಿ ಸೂರ್ಯನು ನಮ್ಮ ಹಿಂದೂ ಪುರಾಣಗಳಲ್ಲಿ ಅತ್ಯಂತ ಬಲಶಾಲಿ ದೇವತೆ. ದಿನ ಬೆಳಗಾದರೆ ಸೂರ್ಯ ನಮಸ್ಕರದ ಮೂಲಕ ದಿನವನ್ನು ಆರಂಭಿಸುವ ನಾವು ದಿನನಿತ್ಯದ ಕೆಲಸ ಕಾರ್ಯಗಳನ್ನು ಆರಂಭಿಸುತ್ತೆವೆ. ವೇದಗಳಕಾಲದಿಂದಲೂ ಹಿಂದೂಗಳು ಸೂರ್ಯನ್ನು ಪೂಜಿಸುತ್ತಾ ಬಂದಿದ್ದಾರೆ.
ಭಾರತದಲ್ಲಿ ಅನೇಕ ಸೂರ್ಯ ದೇವಾಲಯಗಳಿವೆ ಅವುಗಳ ಪೈಕಿ ಪ್ರಮುಖ ನಾಲ್ಕು ಸೂರ್ಯ ದೇವಾಲಯಗಳು ಕಾಕತಾಳೀಯವೆಂಬಂತೆ 23 ಡಿಗ್ರಿ ಕರ್ಕಾಟಕ ವೃತ್ತಕ್ಕೆ ಸಮನಾಗಿ ಒಂದೇ ಸಾಲಿನಲ್ಲಿ ಇವೆ. ಈ ದೇವಾಲಯಗಳ ವಿಶೇಷತೆಯನ್ನು ಇಲ್ಲಿ ಓದಿ ತಿಳಿದುಕೊಳ್ಳಿ.

 

1.ಗುಜರಾತಿನ ಮೊಧೇರಾ ಸೂರ್ಯ ದೇವಾಲಯ :

ಈ ದೇವಾಲಯವು ಗುಜರಾತಿನ ಮೆಸ್ನಾ ಜಿಲ್ಲೆಯ ಮೊಧೇರಾ ಎಂಬಲ್ಲಿ ಇದೆ. ದೇವಾಲಯದ ವಿಶೇಷವೆಂದರೆ ಸೂರ್ಯೋದಯವಾದ ತಕ್ಷಣ ಮೊದಲ ಸೂರ್ಯಕಿರಣ ದೇವಾಲಯದ ಗರ್ಭಗುಡಿಯನ್ನು ಸ್ಪರ್ಶಿಸುವ ಹಾಗೆ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

2, ಉಜ್ಜಯಿನಿಯ ಮಹಾಕಾಳೆಶ್ವರ ದೇವಾಲಯ:


ಉಜ್ಜಯಿನಿಯ ಪವಿತ್ರ ನಗರದಲ್ಲಿರುವ ಅತ್ಯಂತ ಮಹತ್ವದ ದೇವಾಲಯ ಇದಾಗಿದೆ.ದೇವಾಲಯದ ಒಳಗಡೆ ಐದು ಹಂತಗಳಿವೆ. ಹಾಗೂ ಇವುಗಳಲ್ಲಿ ಒಂದು ಹಂತದಲ್ಲಿ ಆರಾಧಿಸಲಾಗುತ್ತದೆ.

3.ಸೂರ್ಯ ದೇವಾಲಯ ,ಔರಂಗಾಬಾದ್:


ಈ ದೇವಾಲಯವನ್ನು ನಾಗರ ಕಾಲ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.ಈ ದೇವಾಲಯವನ್ನು ಚಂದ್ರಾವಶದ ರಾಜನಾದ ಭೈರವೇಂದ್ರ ಸಿಂಗ್ ಎಂಬ ರಾಜನು ಕೇವಲ ಒಂದು ರಾತ್ರಿಯಲ್ಲಿ ಕಟ್ಟಿಸಿದನು ಎಂದು ಇತಿಹಾಸವು ಹೇಳುತ್ತದೆ.

4.ಅಸ್ಸಾಮಿನ ಸೂರ್ಯ ಪಹರ್ :


ಈ ದೇವಾಲಯ ಬಹಳ ಪುರಾತನವಾಗಿದ್ದು ಈ ದೇವಾಲಯದ ಕಲ್ಲುಗಂಬದ ಮೇಲೆ ಮಾರ್ಖಂಡೇಯ ಪುರಾಣವನ್ನು ಕೆತ್ತಲಾಗಿದ್ದು ಅದು ಸೂರ್ಯನನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಕೇವಲ ಕಲ್ಯಾಣ ಸಾಧನೆಯಾಗುವುದಲ್ಲದೆ ಸೂರ್ಯನ ಕಿರಣಗಳು ಅನೇಕ ರೋಗ ರುಜಿನಿಗಳನ್ನು ವಾಸಿಮಾಡುತ್ತವೆ ಎಂದು ಹೇಳುತ್ತದೆ.

5.ಕೋನಾರ್ಕ್ ನ ಸೂರ್ಯ ದೇವಾಲಯ:

 


ಈ ದೇವಸ್ಥಾನವನ್ನು 13 ನೇ ಶತಮಾನದಲ್ಲಿ ರಾಜ ನರಸಿಂಹದೇವನು ನಿರ್ಮಿಸಿದನು. ಈದೇವಾಲಯದ ವಿಶೇಷವೆಂದರೆ ಇಡೀ ಕೋನಾರ್ಕ್ ದೇವಾಲಯದ ವಿನ್ಯಾಸ ಸೂರ್ಯನ ರಥದ ರೂಪದಲ್ಲಿ ರಚನೆಯಾಗಿದೆಯಂತೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಜಗತ್ತಿನ ಅತಿ ದೊಡ್ಡ, ಗಡಿಯಾರವನ್ನು ಹೋಲುವ ನೆರಳಿನ ಗಡಿಯಾರ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top