ಬುಧವಾರ, ೦೫ ಜುಲೈ ೨೦೧೭
ಸೂರ್ಯೋದಯ : ೦೫:೩೨
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಶುಕ್ಲ ಪಕ್ಷ
ತಿಥಿ : ದ್ವಾದಶೀ
ನಕ್ಷತ್ರ : ಅನುರಾಧ
ಯೋಗ : ಸಾಧ್ಯ
ಅಮೃತಕಾಲ : ೨೦:೪೪ – ೨೨:೩೨
ರಾಹು ಕಾಲ: ೧೨:೨೫ – ೧೪:೦೮
ಗುಳಿಕ ಕಾಲ: ೧೦:೪೨ – ೧೨:೨೫
ಯಮಗಂಡ: ೦೭:೧೫ – ೦೮:೫೯
ಮೇಷ (Mesha)
ಆರೋಗ್ಯ ಬಗೆ ಹಿರಿಯರಿಗೆ ಸೂಕ್ತ ತಪಾಸಣೆ ಮಾಡಬೇಕಾಗುವುದು. ಕೋರ್ಟು ಕಚೇರಿ ಭಾಗದಲ್ಲಿ ಧನವ್ಯಯ ವಿದೆ. ಮಾನಸಿಕ ಅಸ್ಥಿರತೆ ಆಗಾಗ ಉದ್ವೇಗ, ಕೋಪ ತಾಪಗಳಿಂದ ಅಸಮಾಧಾನ ತಂದೀತು.
ವೃಷಭ (Vrushabh)
ವಿವಿಧ ರೂಪದ ಧನಾಗಮನ ದಿಂದ ಕಾರ್ಯಸಾಧನೆಯಾಗಲಿದೆ. ಯೋಗ್ಯ ವಯಸ್ಕರಿಗೆ ಕನ್ಯಾದಾನದ ಯೋಗ ಒದಗಿ ಬಂದೀತು. ಉದ್ಯೋಗಸ್ಥ ಮಹಿಳೆಯರಿಗೆ ಬದಲಾವಣೆ ಸಾಧ್ಯತೆ ಇದೆ.
ಮಿಥುನ (Mithuna)
ಭೂ ಖರೀದಿಗೆ ವಾಹನ ಖರೀದಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಆಧಿಕ ಲಾಭವಿದೆ. ವಿದ್ಯಾರ್ಥಿ ವಿದ್ಯಾ ಸಂಪನ್ನರಾದಾರು. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.
ಕರ್ಕ (Karka)
ರಾಜಕೀಯ ವ್ಯಕ್ತಿಗಳಿಗೆ ಅನಾವಶ್ಯಕ ವಾಗಿ ಗೊಂದಲಗಳು ತೋರಿ ಬರಲಿವೆ. ಆಸ್ತಿ ವಿವಾದದಿಂದ ಕುಟುಂಬದಲ್ಲಿ ಬಿರುಕು ಕಾಣಿಸಬಹುದು. ಪ್ರವಾಸ, ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಮಾಡುವುದು ಆಗತ್ಯ.
ಸಿಂಹ (Simha)
ದುಡುಕು ನಿರ್ಧಾರಗಳಿಂದ ಮುಂದುವರಿಯದಿರಿ. ಸಾಮಾಜಿಕವಾಗಿ ನಿಮ್ಮ ಮೇಲೆ ಅಪವಾದ ಭೀತಿ ತಂದೀತು. ಆರೋಗ್ಯ ಭಾಗ್ಯದಲ್ಲಿ ಆಗಾಗ ಏರುಪೇರು ಕಂಡೀತು. ವಿದ್ಯಾರ್ಥಿಗಳಿಗೆ ಮರೇವು ಜಾಸ್ತಿ ಆದೀತು.
ಕನ್ಯಾರಾಶಿ (Kanya)
ಆಗಾಗ ಮನೆ ಬದಲಾವಣೆ ತಂದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗಲಾರದು. ವೃತ್ತಿ ರಂಗದವರಿಗೆ ಅನಾವಶ್ಯಕ ಕಿರಿಕಿರಿಗಳು ಕಂಡು ಬರಲಿವೆ. ಭೂ ಖರೀದಿ, ವಾಹನ ಖರೀದಿಗೆ ಅನುಕೂಲವಾದ ಸಮಯವಲ್ಲ.
ತುಲಾ (Tula)
ನಿರೀಕ್ಷಿತ ಕಾರ್ಯಸಾಧನೆಗಾಗಿ ಕಾಯುವಂತಃ ಸ್ಥಿತಿ ಕಂಡು ಬರಲಿದೆ. ದೇವತಾರಾಧನೆಗಾಗಿ ಧನವ್ಯಯವಾಗ ಬಹುದು. ಆರ್ಥಿಕ ಹೂಡಿಕೆ ಲಾಭಕರವಲ್ಲ. ಅವಿವಾಹಿತರು ಅಡ್ಡಿ ಆತಂಕವನ್ನು ಕಾಣಲಿದ್ದಾರೆ.
ವೃಶ್ಚಿಕ (Vrushchika)
ಲಾಭ ಸ್ಥಾನದ ಗುರುಬಲದಿಂದ ನಿರೀಕ್ಷಿತ ಕಾರ್ಯಸಾಧನೆ ಆಗಲಿದೆ. ಆದರೂ ಆರ್ಥಿಕ ಪರಿಸ್ಥಿತಿ ಉತ್ತಮವಿದ್ದರೂ ಹೆಚ್ಚಿನ ಜಾಗ್ರತೆ ವಹಿಸಬೇಕು. ನಿರುದ್ಯೋಗಿಗಳಿಗೆ ನಿಶ್ಚಿತ ರೂಪದಲ್ಲಿ ಉದ್ಯೋಗ ಲಾಭವಿದೆ.
ಧನು ರಾಶಿ (Dhanu)
ಧನಾಗಮನ ಉತ್ತಮವಿದ್ದು ಸಮಾಧಾನ ತರಲಿದೆ. ಸದ್ಯದಲ್ಲೇ ಬರುವ ಶ್ರೀದೇವರ ಅನುಗ್ರಹ ಮುನ್ನಡೆಗೆ ಸಾಧಕವಾಗಲಿದೆ. ಅದ ಕಾರಣ ಶಾಂತಿ, ಸಮಾಧಾನದಿಂದ ಮುನ್ನಡೆಯುವುದು ಅತೀ ಅಗತ್ಯವಿದೆ.
ಮಕರ (Makara)
ಆಗಾಗ ಅಡೆತಡೆಗಳು ತೋರಿ ಬಂದರೂ ನಿಮ್ಮ ದೃಢ ನಿರ್ಧಾರಗಳು ನಿಮಗೆ ಸಾಧಕವಾದಾವು. ಆರ್ಥಿಕವಾಗಿ ಸದ್ಯ ಶನಿಯ ಲಾಭ ಸ್ಥಾನದಿಂದ ತುಸು ಸಮಾಧಾನ ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಲಾಭವಿದೆ.
ಕುಂಭರಾಶಿ (Kumbha)
ಸಾಂಸಾರಿಕ ಸಂಬಂಧಗಳನ್ನು ಸುಧಾರಿಸಿಕೊಂಡು ಹೋಗುವುದು ನಿಮ್ಮ ಕರ್ತವ್ಯವಾಗಿದೆ. ಆರೋಗ್ಯ ಭಾಗ್ಯದಲ್ಲಿ ಉದಾಸೀನತೆ ತೋರದೆ ಹೆಚ್ಚಿನ ಜಾಗ್ರತೆ ವಹಿಸಿರಿ. ದಿನಾಂತ್ಯ ಶುಭ ಸುದ್ದಿ ಇದೆ.
ಮೀನರಾಶಿ (Meena)
ಮನೋಕಾಮನೆಗಳು ಪೂರ್ಣ ಗೊಳ್ಳಲು ಇದು ಸಕಾಲ. ವಿದ್ಯಾರ್ಥಿ ಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಸಂಚಾರಕ್ಕೆ ತೆರಳುವ ಸಾಧ್ಯತೆ ಇರುವುದು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
