ಪುಣ್ಯಕ್ಷೇತ್ರಗಳ ನದಿ ನೀರಿನಲ್ಲಿ ಮುಳುವುದರಿಂದಾಗುವ 7 ಉಪಯೋಗಗಳು…
ಭಾರತೀಯ ಸಂಸ್ಕೃತಿಯು ಸುಮಾರು ಹತ್ತು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಪುರಾತನ ಸಂಸ್ಕೃತಿಯಾಗಿದೆ.ಇಲ್ಲಿ ಕೆಲವು ಹಳೆಯ ಮತ್ತು ಸಾಂಪ್ರದಾಯಿಕ ಭಾರತೀಯ ಪದ್ಧತಿಗಳನ್ನು ಇನ್ನೂ ಅನೇಕ ಕಾರಣಗಳಿಂದಾಗಿ ಅನುಸರಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ.ಅವನ್ನು ಕೆಲವರು ಮೂಡನಂಬಿಕೆಗಳೆಂದು ಕರೆದರೂ ಅವು ಆರೋಗ್ಯಕರವಾಗಿ ಮತ್ತು ವೈಜ್ಞಾನಿಕವಾಗಿ ಕೆಲವು ಆರೋಗ್ಯ ಪ್ರಯೋಜನಗಳನ್ನು ಕೂಡಾ ನೀಡುತ್ತವೆ.
ಹೆಚ್ಚಿನ ಪವಿತ್ರ ಸ್ಥಳಗಳಲ್ಲಿ, ಕೊಳಗಳು(ಕಲ್ಯಾಣಿ) ಮತ್ತು ನದಿಗಳು ಇವೆ, ಇದರಲ್ಲಿ ಕೆಲವು ಭಕ್ತರು ನೀರಿನಲ್ಲಿ ಮುರುಗಿ ಸ್ನಾನ ಮಾಡುವ ಪದ್ದತಿಯನ್ನು ರೂಢಿಸಿಕೊಂಡಿದ್ದಾರೆ.ಅಲ್ಲದೆ ಭಾರತದ ಅನೇಕ ಹಳ್ಳಿಗಳಲ್ಲಿ ಈಗಲೂ ಸಹ ಜನರು ಕೆರೆ ಕಟ್ಟೆಗಳಲ್ಲಿ ಸ್ನಾನಮಾಡಿಕೊಳ್ಳುತ್ತಾರೆ.ಈ ಆಚರಣೆಯಿಂದ ಪ್ರಯೋಜನಗಳಿವೆ ಅವುಗಳನ್ನು ಈ ಕೆಳಗೆ ಓದಿ ತಿಳಿಯಿರಿ.
*ಶ್ವಾಶಕೋಶದ ಕ್ಷಮತೆ:
ಮುಂಜಾನೆ ಎದ್ದ ತಕ್ಷಣ ತಣ್ಣೀರಿನಲ್ಲಿ ಮುಳುಗು ಹಾಕಿದ ಕೂಡಲೇ ಕೆಲವು ಕ್ಷಣಗಳವರೆಗೆ ಉಸಿರು ಕಟ್ಟಿದಂತಾಗುತ್ತದೆ.ಮುಳುಗಿ ಮೇಲೆದ್ದ ನಂತರ ದೀರ್ಘ ಶ್ವಾಸ ಎಳೆದುಕೊಳ್ಳಬೇಕಾಗುತ್ತದೆ. ಇದು ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುವ ಅತ್ಯುತ್ತಮವಾದ ವ್ಯಾಯಾಮವಾಗಿದೆ.
*ಆಧ್ಯಾತ್ಮಿಕ ಅಲೆ:
ವ್ಯಕ್ತಿಯ ಬಾಹ್ಯ ಪರಿಸರವನ್ನು ಸ್ಥಿರೀಕರಿಸುವಲ್ಲಿ ಸ್ನಾನ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪೂಜೆಯನ್ನು ಮಾಡುವಾಗ (ಧಾರ್ಮಿಕ ಆರಾಧನೆ)ಕಲ್ಯಾಣಿಯಲ್ಲಿ ಮುಳಿಗೆದ್ದರೆ ಮನಸಿನಲ್ಲಿ ತಾಜಾತನದ ಅನುಭವವಾಗುತ್ತದೆ.ಮತ್ತು ಅವನಲ್ಲಿ ಅಧ್ಯಾತ್ಮದ ಅಲೆಯು ಮೂಡುತ್ತದೆ.
*ಸ್ವಸ್ತಿಕ್ ತರಂಗಗಳು:
ಮುಳುಗಿದಾಗ ಹೃದಯ ಬಡಿತವು ಹೆಚ್ಚಾಗಿ ರಕ್ತವು ಚುರುಕಾಗಿ ಚಲನೆಯಾಗುತ್ತದೆ.ಒಬ್ಬ ವ್ಯಕ್ತಿಯು ಸೂರ್ಯೋದಯಕ್ಕೆ ಮುಂಚಿತವಾಗಿ ಮಂಗಳಕರ ಸ್ನಾನವನ್ನುಮಾಡಿದರೆ ಅವನ ಜಾಗೃತ ಮತ್ತು ಉಪಪ್ರಜ್ಞೆ ಮನಸ್ಸುಗಳು ಶುದ್ಧೀಕರಿಸಲ್ಪಡುತ್ತವೆ ಮತ್ತು ಆ ಸಮಯದಲ್ಲಿ ಸತ್ವಿಕ್ ತರಂಗಗಳನ್ನು ಹೀರಿಕೊಳ್ಳುತ್ತವೆ.
*ಖಿನ್ನತೆಯ ನಿವಾರಣೆ:
ಬೆಳಿಗ್ಗೆ ಎದ್ದ ತಕ್ಷಣ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದರ ಮೂಲಕ ನಿಮ್ಮಲ್ಲಿರುವ ಖಿನ್ನತೆಯನ್ನು ತಡೆಗಟ್ಟಬಹುದು.
*ಸೋಂಕುಗಳ ನಿವಾರಣೆ:
ಬೆಳಿಗ್ಗೆದ್ದು ನೀರಿನಲ್ಲಿ ಮುಳುಗೇಳುವುದರಿಂದ ನಿಮ್ಮ ದೇಹದ ಮೇಲ್ಭಾಗದಲ್ಲಿ ಇರುವ ರೋಗಗಳನ್ನು ಹರಡುವ ಕೀಟಾಣು ಸೋಂಕುಗಳನ್ನು ಸುಲಭವಾಗಿ ನಿವಾರಣೆ ಮಾಡಬಹುದು
*ದೇಹದ ಉಷ್ಣತೆ ಇಳಿಕೆ:
ನೀರಿನಲ್ಲಿ ಮುಳುಗಿ ಏಳುವುದರಿಂದ ದೇಹದ ಉಷ್ಣತೆಯು ಕಡಿಮೆಯಾಗಿ ದೇಹವನ್ನು ತಂಪಾಗಿಡುತ್ತದೆ
*ರಕ್ತಪರಿಚಲನೆಗೆ ಸಹಕಾರಿ:
ನದಿಗಳಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ಮನುಷ್ಯನ ದೇಹದಲ್ಲಿ ನಡೆಯುವ ರಕ್ತ ಪರಿಚಲನೆಯು ಚೂರಾಗಿ ನಡೆಯುತ್ತದೆ ಮತ್ತು ನೀರಿನಲ್ಲಿ ಮುಳುಗಿದಾಗ ಹೃದಯ ಬಡಿತವು ಹೆಚ್ಚಾಗಿ ರಕ್ತವು ಚುರುಕಾಗಿ ಚಲನೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
