92.7 ಬಿಗ್‍ಎಫ್‍ನ ಹೊಸದೊಂದು ಆವರ್ತನ ಶುರು ‘ಸ್ಯಾಂಡಲ್‍ವುಡ್ ಜತೆ ಬಾಲಿವುಡ್ ಬ್ಲಾಸ್ಟ್’
92.7 ಬಿಗ್‍ಎಫ್ ಮ್ ಹೇಳ್ತಾರೆ :
ಸದಾ ಹೊಸತನದತ್ತ ತುಡಿಯುತ್ತಿರುವ ಭಾರತದ ಅತೀದೊಡ್ಡ ರೆಡಿಯೋ ನೆಟ್‍ವರ್ಕ್ ಆಗಿರುವ 92.7 ಬಿಗ್‍ಎಫ್‍ಎಂ ಈಗ ಕೇಳುಗರಿಗೆ ಇನ್ನೊಂದು ಹೊಸ ಅವಕಾಶವನ್ನು ನೀಡುತ್ತಿದೆ. ಅದೇನೆಂದರೆ ಕನ್ನಡ ಮತ್ತು ಹಿಂದಿ ಭಾಷೆಯ ಅತ್ಯುತ್ತಮವೆನಿಸಿದ ಹಾಡುಗಳನ್ನು ಏಕೈಕ ಆವರ್ತನದಲ್ಲಿ ನೀಡುತ್ತಿದೆ. ‘ಸ್ಯಾಂಡಲ್‍ವುಡ್ ಜತೆ ಬಾಲಿವುಡ್ ಬ್ಲಾಸ್ಟ್’ದಲ್ಲಿ ಕೇಳುಗರಿಗೆ ಈಗ ಸಂಗೀತದ ರಸದೌತಣ ಒದಗಿಸಲಿದೆ. ಉದ್ಯಾನ ನಗರಿಯ ಮೊದಲ ರೇಡಿಯೋ ಸ್ಟೇಷನ್ ಎಂಬ ಹೆಗ್ಗಳಿಕೆ ಹೊಂದಿರುವ 92.7 ಬಿಗ್‍ಎಫ್‍ಎಂ ವಯಸ್ಕರ ಸಮಕಾಲೀನ ಸಂಗೀತವನ್ನು ಎರಡು ಭಾಷೆಗಳನ್ನು ನೀಡುವ ಮೂಲಕ ಇನ್ನಷ್ಟು ಜನರ ಮನ ತಣಿಸಲಿದೆ.
ಬೆಳಿಗ್ಗೆ 5ರಿಂದ ಸಂಜೆ 4ರವರೆಗೆ ಸ್ಥಳೀಯ ಕನ್ನಡ ಗೀತೆಯನ್ನು ಕೇಳುಗರಿಗೆ ನೀಡುತ್ತಿರುವ ಬಿಗ್‍ಎಫ್‍ಎಂ ಸದಾ ಹೊಸ ಹೊಸ ಅನ್ವೇಷಣಾ ಕಾರ್ಯಕ್ರಮಗಳ ಮೂಲಕ ಜನರ ಮನ ತಲುಪಿದೆ. ಬೆಳಿಗ್ಗೆ 7ರಿಂದ ಬೆಳಿಗ್ಗೆ 11 ಗಂಟೆವರೆಗೆ ‘ಬಿಗ್ ಕಾಫಿ’ ಶೋ ನಡೆಸಿಕೊಡುವ ಮೂಲಕ ಆರ್.ಜೆ ಶ್ರುತಿ ನಗರದ ಜನರಲ್ಲಿ ತಮ್ಮ ಮಾತಿನ ಮೂಲಕ ಒಂದು ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಇದರ ಜತೆಗೆ ಆರ್ ಜೆ ರೋಹಿತ್ ತಮ್ಮ ‘ನಾಯಕ’ ಶೋ ಮೂಲಕ ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೇಳುಗರನ್ನು ರಂಜಿಸುತ್ತಿದ್ದಾರೆ. ಹಿಂದಿ ಮಾತನಾಡುವ ಪ್ರೇಕ್ಷಕರಿಗಾಗಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ “ಹಿಟ್ ತೇ ಹಿಟ್ ರೆಹೇಂಗೆ’ ಸ್ವರೂಪವನ್ನು ಈ ರೆಡಿಯೋ ನೆಟ್‍ವೆರ್ಕ್ ಹೊಂದಿದೆ. 80ರ ದಶಕದ ಆರಂಭದ ಹಾಡುಗಳಿಂದ ಹಿಡಿದು 2000 ದಶಕದ ಆರಂಭದವರೆಗಿನ ಹಾಡುಗಳ ರಸದೌತಣ ನೀಡುತ್ತಿದೆ.
ಇನ್ನು ಮುಂದೆ ಸಂಜೆ 4ರಿಂದ 12ಗಂಟೆವರಗೆ ಎವರ್‍ಗ್ರೀನ್ ಬಾಲಿವುಡ್ ಹಾಡುಗಳನ್ನು ಕೇಳುಗರಿಗೆ ನೀಡಲಿದೆ. ಮೊದಲ ರೀತಿಯ ಆರ್.ಜೆ ಸೆಲೆಬ್ರಿಟಿ ಶೋನಲ್ಲಿ ಗಾಯಕ, ಸಂಯೋಜಕ ಸಲೀಮ್ ಮರ್ಚೇಂಟ್ ನಡೆಸಿಕೊಡುವ # ಸಲೀಮ್ ಸಂಜೆ 5ರಿಂದ 7ಗಂಟೆವರೆಗೆ ಪ್ರಸಾರವಾಗಲಿದೆ. ಸಂಜೆ 4ರಿಂದ 5ರವಗರೆಗೆ ಲಮ್ಹೆ ವಿಥ್ ಮಂತ್ರ ಕಾರ್ಯಕ್ರಮ ಕೇಳುಗರನ್ನು ರಂಜಿಸಲಿದೆ. ಅಣ್ಣು ಕಪೂರ್ ಅವರು ನಡೆಸಿಕೊಡುವ ‘ಸುಹಾನಾ ಸಫರ್ ವಿತ್ ಅಣ್ಣು ಕಪೂರ್’ ಸಂಜೆ 7ರಿಂದ 9 ಗಂಟೆವರೆಗೆ ಪ್ರಸಾರವಾಗಲಿದೆ. ಈ ಶೋ ಐಆರ್‍ಎಫ್ 17ಮತ್ತು 5 ಹಾಗೂ ಇನ್ನೀತರ ಪ್ರತಿಷ್ಟಿತ ಪ್ರಶಸ್ತಿಗಳಲ್ಲಿ ‘ಅತ್ಯುತ್ತಮ ಕಾರ್ಯಕ್ರಮ ಶೀರ್ಷಿಕೆ’ಯನ್ನು ಪಡೆದಿದೆ. ಬಾಲಿವುಡ್‍ನಿಂದ ಗೋಲ್ನ್ಡನ್‍ಯುಗದವರೆಗಿನ ಸಂಗೀತವನ್ನು ನೀಡುವ ಮೂಲಕ ಈ ಶೋ ಕೇಳುಗರ ಮನ ತಣಿಸಲಿದೆ.
ಎರಡು ಭಾಷೆಗಳಲ್ಲಿ ಸಂಗೀತವನ್ನು ನೀಡುವ ಈ ಕಾರ್ಯಕ್ರಮದ ಕುರಿತು ಬಿಗ್‍ಎಫ್‍ಎಂ ವಕ್ತಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ, “ಬೆಂಗಳೂರು ಒಂದು ವೈವಿಧ್ಯಮಯ ನೆಲೆ ಬೀಡಾಗಿದೆ. ಈ ಒಂದು ಹೊಸ ಶೋ ಮೂಲಕ ನಾವು ಕೇಳುಗರಿಗೆ ನವೋಲ್ಲಾಸ ನೀಡುವ ಕಾರ್ಯಕ್ರಮಗಳನ್ನು ನೀಡುವ ಪ್ರಯತ್ನ ಮಾಡುತ್ತೇವೆ. ಮಾರುಕಟ್ಟೆಯ ಸಂಶೋಧನೆಯ ಪ್ರಕಾರ, ಬಿಗ್‍ಎಫ್‍ಎಂ ಎಂದರೆ ಕಾಸ್ಮೋಪಾಲಿಟನ್ ಕೇಳುಗರಿಗೆ ಒಂದು ಆವರ್ತನದಲ್ಲಿ ಬಾಲಿವುಡ್ ಮತ್ತು ಸ್ಯಾಂಡಲ್‍ವುಡ್ ಸಂಗೀತದ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
