fbpx
ಆರೋಗ್ಯ

ಬೆಳ ಬೆಳಗ್ಗೆ ಬಿಸಿ ನೀರಲ್ಲಿ ನಿಂಬೆರಸ ಹಾಕೊಂಡ್ ಕುಡಿಯೋದಿಂದಾಗೋ 8 ಲಾಭಗಳ್ನ ತಿಳ್ಕೊಂಡ್ರೆ ನೀವು ಟ್ರೈ ಮಾಡ್ಬಿಡ್ತೀರಾ..!

ಬೆಳಿಗ್ಗೆ ಎದ್ದ ತಕ್ಷಣ ನಿಂಬೆಹಣ್ಣಿನ ಜೂಸ್ ಅನ್ನು ಏಕೆ ಕುಡಿಯಬೇಕೆಂದು ಗೊತ್ತಾ?…

ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು ಚಹಾ ಅಥವಾ ಕಾಫಿ ಕುಡಿಯದೆ ಇದ್ದರೆ ಏನೋ ಕಳೆದುಕೊಂಡ  ಹಾಗೆ ಅನಿಸುತ್ತದೆ. ಟೀ ಅಥವಾ ಕಾಫಿ ಕುಡಿಯುವುದು ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾಫಿ ಅಥವಾ ಟೀ ಕುಡಿಯುವ ಬದಲು ನಿಂಬೆಹಣ್ಣಿನ ಜೂಸ್ ಅನ್ನು ಕುಡಿದ್ರೆ ನಿಮಗೆ ಆರೋಗ್ಯಕರವಾಗಿ ಉಪಯೋಗವಾಗುತ್ತೆ.

ನಿಂಬೆ ಹಣ್ಣನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.ಅದನ್ನು ಕಟ್ ಮಾಡಿ ಅರ್ಧ ಲೀಟರ್ ನೀರಿಗೆ ಹಾಕಿ 5 ನಿಮಿಷ ಕುದಿಸಿ. 10 ನಿಮಿಷ ನೀರು ತಣ್ಣಗಾಗಲು ಬಿಡಿ. ನಂತ್ರ ಈ ನೀರನ್ನು ಕುಡಿಯಿರಿ.ಬೆಳಿಗ್ಗೆ ಎದ್ದು ನಿಂಬೆ ಹಣ್ಣಿನ ಜೂಸ್ ಕುಡಿಯುದರಿಂದಾಗುವ ಆರೋಗ್ಯಕರ ಪ್ರಯೋಜನಗಳು ಇಲ್ಲಿವೆ ನೋಡಿ.

ಜೀರ್ಣ ಕ್ರಿಯೆಯನ್ನು ಸರಳಗೊಳಿಸುತ್ತದೆ.

ಬೆಳಿಗ್ಗೆ ಹೊತ್ತು ನಿಂಬೆಹಣ್ಣಿನ ಜೂಸ್ ಅನ್ನು ಕೊಡಿಯೋದ್ರಿಂದ ದೇಹದಲ್ಲಿ ಜೀರ್ಣಕ್ರಿಯೆಯು ಸುಲಭವವಾಗಿ ಆಗುತ್ತದೆ.ಯಕೃತ್ತಿನಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:


ನಿಂಬೆಹಣ್ಣಿನ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ದೇಹದಲ್ಲಿರುವ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ:


ಬೆಳಿಗ್ಗೆ ಹೊತ್ತು ನಿಂಬೆ ಹಣ್ಣಿನ ಶರಬತ್ತನ್ನು ಕುಡಿಯೋದರಿಂದ ತಮ್ಮ ಬಾಯಿಯು ದುರ್ವಾಸನೆ ಬರದಂತೆ ನೋಡಿಕೊಳ್ಳಬಹುದು.

ರಕ್ತಶುದ್ಧಿಗೊಳಿಸುತ್ತದೆ:


ನಿಂಬೆ ಹಣ್ಣಿನ ಅತ್ಯುತ್ತಮ ಗುಣವೆಂದರೆ ರಕ್ತಶುದ್ಧಿ, ರಕ್ತದಲ್ಲಿದ್ದ ವಿಷಕಾರಿ ವಸ್ತುಗಳನ್ನು ವಿಸರ್ಜಸುವ ಮೂಲಕ ರಕ್ತನಾಳ ಮತ್ತು ರಕ್ತಪರಿಚಲನಾ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ನೆರವಾಗುತ್ತದೆ.

ಮಲಬದ್ಧತೆ ಸಮಸ್ಯೆಯ ವಿನಾಶಕ:


ಬೆಳಿಗ್ಗೆ ನಿಂಬೆ ರಸವನ್ನು ಕೋಡಿಯುದರಿಂದ ಜೀರ್ಣಕ್ರಿಯೆಯು ಸುಗಮವಾಗಿ ಹೊಟ್ಟೆಯ ತಳಮಳ ಕಡಿಮೆಯಾಗಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ತೂಕ ಇಳಿಸಿಕೊಳ್ಳಲು:


ಬೊಜ್ಜನ್ನು ಕರಗಿಸಿ ದೇಹದ ತೂಕವನ್ನು ಇಳಿಸಿಕೊಳ್ಳಲು ನಿಂಬೆ ಹಣ್ಣು ರಾಮಬಾಣವಾಗಿದೆ.ಇದರಲ್ಲಿರುವ ಸಿಟ್ರಿಕ್ ಆಸಿಡ್ ಅಂಶವು ಬೆವರಿನಲ್ಲಿ ಹೊರಹೋಗುವುದರಿಂದ ದೇಹದ ತೂಕವು ಇಳಿಕೆಯಾಗುತ್ತದೆ.

ದೇಹದ ಉಷ್ಣಶವು ಕಡಿಮೆಯಾಗುತ್ತದೆ:


ನಿಂಬೆ ಹಣ್ಣಿನ ಜ್ಯುಸ್ ಕುಡಿಯುವದರಿಂದ ದೇಹಲ್ಲಿನ ಉಷ್ಣಶವು ಕಡಿಮೆಯಾಗಿ ದೇಹವು ತಂಪಾಗಿರುತ್ತದೆ.

ಮದುಮೇಹವಿರುವವರಿಗೆ:


ಮಧುಮೆಹವಿರುವವರು ನಿಂಬೆರಸವನ್ನು ಕುಡಿದರೆ ಅದರಿಂದ ಅವರ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top