ಸಮೋಸ ಮಾರಲು ಕೈಯಲ್ಲಿದ್ದ ಕೆಲಸ ಬಿಟ್ಟ ಎಂ.ಬಿ.ಎ ಪದವೀಧರ…
ಇದು ಎಂಬಿಎ ಮಾಡಿದ ಪದವೀಧರನೊಬ್ಬನ ಕಥೆ. ಸಮೋಸ ಮಾರಾಟ ಮಾಡಲು ಕೈತುಂಬಾ ಕೈತುಂಬ ಸಂಬಳ ಬರುತ್ತಿದ್ದ ಉದ್ಯೋಗವನ್ನೇ ತ್ಯಜಿಸಿದ ಕತೆ. ಈ ಸತ್ಯ ಕತೆಯನ್ನ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ.
ಮುನಾಫ್ ಕಪಾಡಿಯಾ 2015ರಲ್ಲಿ ಗೂಗಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಅವರ ತಾಯಿ ನಫೀಸಾ ಯಾವಾಗಲೂ ಟಿವಿ ಧಾರಾವಾಹಿಗಳನ್ನು ನೋಡುತ್ತಾ ಕಾಳಕಳೆಯುತಿದ್ದರು. ಇದನ್ನು ನೋಡಿ ತನ್ನ ತಾಯಿ ಎಲ್ಲೋ ಕಳೆದುಹೋಗುತ್ತಿದ್ದಾರೆ ಎಂದುಕೊಂಡು ಆಕೆಯನ್ನು, ಆಕೆ ಮಾಡುವ ರುಚಿಕರವಾದ ಅಡುಗೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಒಂದು ದಿನ ತನ್ನ ಗೆಳೆಯರಿಗಾಗಿ ಮನೆಯಲ್ಲಿ ಸಮೋಸಾ ತಯಾರಿಸಲು ತಾಯಿಗೆ ಹೇಳಿದ್ದರು. ತಾಯಿ ನಫೀಸಾ 50 ಸಮೋಸಾಗಳನ್ನು ಸಿದ್ಧಪಡಿಸಿ ಮಗನ ಗೆಳೆಯರಿಗೆ ಪ್ರೀತಿಯಿಂದ ಉಣಬಡಿಸಿದ್ದರು.ಅವನ ಗೆಳೆಯರೆಲ್ಲರೂ ಅವನ ತಾಯಿಯ ಕೈ ರುಚಿಯನ್ನು ಕೊಂಡಾಡಿದರು.
ಗೆಳೆಯರ ಪಾರ್ಟಿ ಬಳಿಕ ಮುನಾಫ್ ಮನೆಯ ವಾತಾವರಣದಲ್ಲಿ ಗ್ರಾಹಕರಿಗೆ ಊಟ ಬಡಿಸಬೇಕು ಎಂದು ಆಲೋಚನೆ ಮಾಡಿದರು.ಈ ಬಗ್ಗೆ ಅವನ ತಾಯಿ ಜೊತೆ ಚರ್ಚೆ ಮಾಡಿದರು. ಅವರು ಕೂಡ ಇದಕ್ಕೆ ಸಾಥ್ ಕೊಟ್ಟರು.
ಸ್ವಲ್ಪ ದಿನದಲ್ಲೇ ಮನೆಯಲ್ಲೇ 15 ಜನ ಕುಳಿತುಕೊಂಡು ಊಟ ಮಾಡುವ ಪುಟ್ಟ ರೆಸ್ಟೋರೆಂಟ್ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಿದರು. ಫೇಸ್‌ಬುಕ್‌ನಲ್ಲಿ ಟಿಬಿಕೆ(ದಿ ಬ್ರಾಹಿ ಕಿಚನ್ )ಪೇಜ್ ಆರಂಭಿಸಿ ಕೌಟುಂಬಿಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದರು. ಗೆಳೆಯರು ಸಹ ಫೇಸ್ಬುಕ್ ನಿಂದ ಅದನ್ನು ಪ್ರಚಾರ ಮಾಡಿದರು.ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.
ಇಂದು ಅವರ ಉದ್ಯಮ ಸಾಕಷ್ಟು ಬೆಳೆದಿದೆ. ಇವರು ಹೋಂ ಡೆಲಿವರಿ ಸಹ ಮಾಡುತ್ತಾರೆ. ಹಲವಾರು ಸೆಲೆಬ್ರಿಟಿಗಳು ಬೊಹ್ರಿ ಕಿಚನ್‌ಗೆ ಮಾರುಹೋಗಿದ್ದಾರೆ. ನಮ್ಮ ತಾಯಿಯೇ ಬೊಹ್ರಿ ಕಿಚನ್ ಹಿಂದಿನ ಶಕ್ತಿ ಎಂದು ಮುನಾಫ್ ಹೇಳುತ್ತಾರೆ. ಇವರು ದೇಶದ ಪ್ರತಿಷ್ಠಿತ
ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಮೂವತ್ತನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
