fbpx
ಉಪಯುಕ್ತ ಮಾಹಿತಿ

ಇನ್ಮುಂದೆ ಈ ವ್ಯವಹಾರಗಳು ಪಾನ್ ಕಾರ್ಡ್ ಇಲ್ಲದೆ ನಡೆಯೋದಿಲ್ಲ..

ಈ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ..

ನಾವೆಲ್ಲರೂ ತಿಳಿದಿರುವಂತೆ ಪಾನ್ ಕಾರ್ಡ್ ಎನ್ನುವುದು ಯಾವುದೇ ಒಂದು ಪ್ರಮುಖವಾದ ಗುರುತಿನ ಚೀಟಿಗಳಲ್ಲೊಂದು.ಆದಾಯ ತೆರಿಗೆ ಇಲಾಖೆ ಒದಗಿಸುವ ಶಾಶ್ವತ ಖಾತೆ ಸಂಖ್ಯೆ(ಪಾನ್)ಯು ಹೆಚ್ಚಿನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ ಕಡ್ಡಾಯವಾಗಿ ಬೇಕಾಗಿರುತ್ತದೆ.
ಈ ಕೆಳಗಿನ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿರುತ್ತದೆ

*ನೀವು 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರ ಆಸ್ತಿಯ ಮಾರಾಟ ಅಥವಾ ಖರೀದಿ ಮಾಡುತ್ತಿದ್ದರೆ ಪಾನ್ ಅನ್ನು ಕಡ್ಡಾಯವಾಗಿ
ಉಲ್ಲೇಖಿಸಬೇಕಾಗಿದೆ.

*1 ಲಕ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವೆಚ್ಚದ ಯಾವುದೇ ಸರಕುಗಳ ಮತ್ತು ಸೇವೆಗಳ ಮಾರಾಟ ಅಥವಾ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ.

*ನೀವು ನಿಮ್ಮ ವಾಹನವನ್ನು ಮಾರಾಟ ಮಾಡಲು ಯೋಚಿಸುತ್ತಿದ್ದರೆ ಅಥವಾ ಹೊಸ ವಾಹನವನ್ನು ಖರೀದಿಸಲು ನೀವು ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು.

*ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಪಾನ್ ಕಾರ್ಡ್ ನಂಬರಿನ ಅಗತ್ಯವಿದೆ.

*ಪಾನ್ ಸಂಖ್ಯೆಯು ನಿಮ್ಮ್ನ ಬ್ಯಾಂಕ್ ಖಾತೆಗೆ ನೀವು ನಗದು ರೂಪದಲ್ಲಿ 50,000 ರೂ. ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಪಾವತಿಸಲು ಬಯಸಿದರೆ ಕಡ್ಡಾಯವಾಗಿ ಬೇಕಾಗುತ್ತದೆ.

*ಹೋಟೆಲ್ ಅಥವಾ ರೆಸ್ಟಾರೆಂಟ್ಗೆ 25000ಕ್ಕಿಂತ ಮೇಲ್ಪಟ್ಟ ಪಾವತಿಯನ್ನು ಮಾಡುವಾಗ ಪಾನ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ.

*ಮೊಬೈಲ್ ಸಂಪರ್ಕ ಸೇರಿದಂತೆ ಹೊಸ ದೂರವಾಣಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಪಾನ್ ಕಾರ್ಡ್ ಅಗತ್ಯವಿದೆ.

*50,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸು ಸೆಕ್ಯೂರಿಟಿಗಳನ್ನು (ಶೇರ್ ಗಳು, ಬಾಂಡ್ಗಳು, ಡಿಬೆಂಚರ್ ಗಳು ) ಖರೀದಿಸುವಾಗ ನೀವು ಪ್ಯಾನ್ ಸಂಖ್ಯೆ ನಮೂದಿಸಬೇಕು.

*ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಪಾನ್ ಕಾರ್ಡ್ ಅವಶ್ಯಕವಾಗಿರುತ್ತದೆ.

* ನೀವು ವಿದೇಶಿ ಪ್ರಯಾಣ ಮಾಡುವುದಕ್ಕಾಗಿ 50,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸುತ್ತಿದ್ದರೆ ನೀವು ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು

*ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಲು 50,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನೀವು ಪಾವತಿಸುತ್ತಿದ್ದರೆ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸಬೇಕು.

*5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಆಭರಣಗಳನ್ನು ಖರೀದಿ ಮಾಡಲು ಪಾನ್ ವಾರ್ಡ್ ನಂಬರಿನ ಅವಶ್ಯಕತೆ ಇದೆ.

*ನಿಮಗೆ ನಿಮ್ಮ ತೆರಿಗೆ ಪಾವತಿಯನ್ನು ಮಾಡಲು ಪ್ಯಾನ್ ಸಂಖ್ಯೆಯ ಅವಶ್ಯಕತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top