ತಾಯಿ ‘ಲೈಂಗಿಕ ಕಾರ್ಯಕರ್ತೆ’ಯ ಹಾದಿಯನ್ನು ತುಳಿಯದೆ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸೀಟ್ ಗಿಟ್ಟಿಸಿಕೊಂಡ ಛಲಗಾರ್ತಿ.
ಸೆಕ್ಸ್ ವರ್ಕರ್ ಳ ಮಗಳಾಗಿ ಹುಟ್ಟಿದ ಅಶ್ವಿನಿಯವರ ಜೀವನವು ಎಲ್ಲರಿಗೂ ಸ್ಪೂರ್ತಿದಾಯಕ ವಾದದ್ದು. ಅಶ್ವಿನಿಯು ಮುಂಬಯಿನವಳು ,ಇವಳ ತಾಯಿ ಸೆಕ್ಸ್ ವರ್ಕರ್, ಮೈಮಾರಿಕೊಳ್ಳುವ ವೃತ್ತಿಯಲ್ಲಿ ಬರುವ ಹಣದಲ್ಲೇ ಮಗಳನ್ನು ಬೆಳೆಸಿದಳು. ಆದರೆ ಅವಳಿಗೆ ತುಂಬಾ ಕೋಪ, ಸಣ್ಣಪುಟ್ಟ ಕಾರಣಗಳಿಗೆಲ್ಲಾ ಮಗಳನ್ನು ವಿಪರೀತವಾಗಿ ಹೊಡೆಯುತ್ತಿದ್ದಳು. ಇವಳ ಹಿಂಸೆಯನ್ನು ತಾಳಲಾರದೆ ಅಶ್ವಿನಿಯು ತನ್ನ ಐದನೇ ವಯಸ್ಸಿನಲ್ಲೇ ಮನೆಯನ್ನು ಬಿಟ್ಟು ಮೊದಲ ಬಾರಿ ಹೋಡಿಹೋಗುತ್ತಾಳೆ.
ಮತ್ತೆ ಅವಳಮ್ಮ ಅವಳನ್ನ ಹುಡ್ಕೊಂಡ್ ಬಂದು ಮನೆಗ್ ಕರ್ಕೊಂಡ್ ಹೋಗ್ತಾಳೆ.ನಂತ್ರ ಅಶ್ವಿನಿಯವ್ರಿಗೆ ಎಂಟು ವರ್ಷ ವಯಸ್ಸಾಗಿದ್ದಾಗ ಒಂದು ಕ್ರಿಶ್ಚಿಯನ್ ಹಾಸ್ಟೆಲ್ ಗೆ ಸೇರಿಸುತ್ತಾಳೆ. ಅಲ್ಲಿ ಅಶ್ವಿನಿಗೆ ಅಲ್ಲಿರುವವರೆಲ್ಲ ತುಂಬಾ ಹಿಂಸೆ ಕೊಡ್ತಾರೆ ಅಲ್ಲದೆ ಅವಳ ಅಮ್ಮನ ವೃತ್ತಿಯನ್ನು ಹೀಯಾಳಿಸಿ ತುಚ್ಛವಾಗಿ ಮಾತ್ನಾಡ್ತಿರ್ತಾರೆ. ಅಶ್ವಿನಿ ಅಲ್ಲಿಂದಲೂ ಓಡಿ ಬರುತ್ತಾಳೆ.
ಅಶ್ವಿನಿ ಗೆ ಹತ್ತು ವರ್ಷ ವಯಸ್ಸಾಗಿದ್ದಾಗ ಅವಳ ತಾಯಿ ತೀರಿಕೊಳ್ಳುತ್ತಾಳೆ. ಮುಂದೆ ಇವಳು ಒಂದು NGO ವನ್ನು ಸೇರಿಕೊಳ್ಳುತ್ತಾಳೆ. ಅಲ್ಲೂ ಸಹ ಅವಳಿಗೆ ಅದೇ ಸಮಸ್ಯೆ. ಆ NGO ದವರು ಕೊಡುತ್ತಿದ್ದ ಕಾಟವನ್ನು ಸಹಿಸಿಕೊಳ್ಳಲಾರದೆ ಕ್ರಾಂತಿ ಎಂಬ ಪ್ರದೇಶಕ್ಕೆ ಹೋಡೀಹೊದಳು. ಅವಳು ಯಾರು ಎಷ್ಟೇ ಎಂತ ಮಾತುಗಳನ್ನಾದರೂ ನಾನು ಮಾತ್ರ ಎಲ್ಲಿಗೂ ಹೋಡಿಹೋಗಬಾರದು. ಇಲ್ಲೇ ಇದ್ದು ಏನನ್ನಾದರೂ ಸಾಧಿಸಬೇಕು ಎಂದು ನಿಶ್ಚಯ ಮಾಡಿಕೊಂಡಳು.
ಅಲ್ಲಿ ಒಂದು ಸ್ವತಂತ್ರ ಸಂಸ್ಥೆಯಲ್ಲಿ ಸೇರಿದ ಅಶ್ವಿನಿ ಫೋಟೋಗ್ರಫಿ, ಥಿಯೇಟರ್ ಆರ್ಟ್ಸ್, ಡ್ಯಾನ್ಸ್, ಆರ್ಟ್ ಥೆರಪಿಗಳಲ್ಲಿ ಶಿಕ್ಷಣ ಪಡೆದಳು. ಕೆಲಸದ ಬಿಡುವಿನ ಸಮಯದಲ್ಲಿ ಅನೇಕ ಮಂದಿ ಕ್ಯಾನ್ಸರ್ ರೋಗಿಗಳ ಬಳಿ ಸಮಾಲೋಚನೆ ಮಾಡುತ್ತಾ ಅವರಲ್ಲಿ ಧೈರ್ಯ ತುಂಬಿದಳು.ಹೀಗೆ ತೊಂದರೆಯಲ್ಲಿರುವ ಜನರಿಗೆ ಸೇವೆ ಮಾಡಬೇಕೆಂಬ ಆಲೋಚನೆಯೊಂದಿಗೆ ಆಕೆ ನ್ಯೂಯಾರ್ಕ್ ವಿಶ್ವವಿದ್ಯಾಲಯಕ್ಕೆ ಮುಂದಿನ ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸಿದಳು ಅಲ್ಲಿ ಅವಳಿಗೆ ಸೀಟ್ ಸಿಕ್ಕಿತು.
ಸ್ಕಾಲರ್‌ಶಿಪ್ ಕೊಡುತ್ತೇವೆಂದು ಆ ವಿಶ್ವವಿದ್ಯಾಲಯ ಅಶ್ವಿನಿಗೆ ಭರವಸೆ ನೀಡಿತು. ಆದರೆ ಅವರು ಕೊಟ್ಟಿದ್ದ ಸ್ಕಾಲರ್‌ಶಿಪ್ ಟ್ಯೂಶನ್ ಫೀಗೆ ಮಾತ್ರ ಸಾಲುತ್ತಿತ್ತು. ಆದರೆ ಅಲ್ಲಿ ಉಳಿದುಕೊಳ್ಳಲು ಹಾಸ್ಟೆಲ್ ಫೀ, ಊಟ ತಿಂಡಿಗೆ ಸುಮಾರು ರೂ.10 ಲಕ್ಷಗಳವರೆಗೂ ಖರ್ಚು ಬರುತ್ತದೆ. ಎಂದು ತಿಳಿದು ಇಲ್ಲಿಂದ ಯಾವುದೇ ಕಾರಣಕ್ಕೂ ಓಡಿಹೋಗಬಾರದು ಎಂದು ಇದೇ ವಿಷಯವನ್ನು ಫೇಸ್‍ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದಳು ನಂತ್ರ ನ್ಯೂಯಾರ್ಕ್ ನ ಫೇಸ್ಬುಕ್ ಉಪಯೋಗಿಸುವವರು ಅವಳ ಕಷ್ಟಕ್ಕೆ ಸ್ಪಂದಿಸಿದರು. ತಮಗೆ ತೋಚಿದಷ್ಟು ಸಹಾಯ ಮಾಡಿದರು. ಅಶ್ವಿನಿಗೆ ಅವಶ್ಯಕವಾಗಿದ್ದ 10 ಲಕ್ಷ ರೂಪಾಯಿಗಳಿಗಿಂತ ಜಾಸ್ತಿಯೇ ದೊರಕಿತು.
ಒಬ್ಬ ಲೈಂಗಿಕ ಕಾರ್ಯಕರ್ತೆಯ ಮಗಳು ನ್ಯೂಯಾರ್ಕ್ ವಿವಿಯಲ್ಲಿ ಓದುತ್ತಿರುವುದು ನಿಜವಾಗಿಯೂ ಮಹಾನ್ ಸಾಧನೆಯೇ ಸರಿ.
ಇವತ್ತು ಅವಳ ಜೀವನ ಎಷ್ಟೋಮಂದಿ ನೊಂದ ಯುವಕ ಯುವತಿಯರಿಗೆ ಸ್ಪೂರ್ದ್ಧಿದಾಯಕವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
